ಸಕ್ಕರೆ ರಫ್ತಿಗೆ ನಿರ್ಬಂಧ!
ಜೂ. 1 ರಿಂದ ಸಕ್ಕರೆ ರಫ್ತಿಗೆ ನಿರ್ಬಂಧ
ಬೆಲೆ ಏರಿಕೆಗೆ ಕಡಿವಾಣ ಹಾಕುವ ಉದ್ದೇಶ
ನಿರ್ಬಂಧ ಹೇರಿ ಎಇಜಿಎಫ್ ಟಿ ಅಧಿಸೂಚನೆ
ನಿರ್ಬಂಧ ಆದೇಶ ಅಕ್ಟೋಬರ್ 31 ವರೆಗೆ ಜಾರಿ
ದೇಶಿಯವಾಗಿ ಅಗತ್ಯ ಪ್ರಮಾಣದ ಸಕ್ಕರೆ ಲಭ್ಯತೆ ಇರುವಂತೆ ನೋಡಿಕೊಳ್ಳಲು ಮತ್ತು ಬೆಲೆ ಏರಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಜೂನ್ ಒಂದರಿಂದ ಅನ್ವಯವಾಗುವಂತೆ ಸಕ್ಕರೆ ರಫ್ತಿಗೆ ನಿರ್ಬಂಧ ಹೇರಿದೆ.
ಈ ಸಂಬಂಧ ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯ ಅಧಿಸೂಚನೆ ಹೊರಡಿದ್ದು, ಜೂನ್ 1 ರಿಂದ ಜಾರಿಗೆ ಬರುವಂತೆ ನಿರ್ಬಂಧಿತ ವರ್ಗದಡಿ ಸಕ್ಕರೆಯನ್ನು ತರಲಾಗಿದೆ ಎಂದು ತಿಳಿಸಿದೆ.
ಆದ್ರೆ ಈ ನಿರ್ಬಂಧವು ಸಿ ಎಕ್ಸ್ ಎಲ್ ಮತ್ತು ಟಿ ಆರ್ ಕ್ಯೂ ಕೋಟಾದಡಿ ಅಮೆರಿಕಾ ಮತ್ತು ಯೂರೋಪ್ ಒಕ್ಕೂಟದ ದೇಶಗಳಿಗೆ ಸಕ್ಕರೆ ರಫ್ತಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಈ ನಿರ್ಬಂಧ ಆದೇಶ ಅಕ್ಟೋಬರ್ 31ರ ವರೆಗೂ ಜಾರಿಯಲ್ಲಿರುತ್ತದೆ.
ಅಂದಹಾಗೆ ವಿಶ್ವದಲ್ಲಿ ಅತಿಹೆಚ್ಚು ಸಕ್ಕರೆ ಉತ್ಪಾದನೆ ಆಗುವುದು ಭಾರತದಲ್ಲಿ. ರಫ್ತಿನಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಕಚ್ಚಾ ತೈಲ ಬೆಲೆ ಏರಿಕೆ ಆಗಿರುವ ಕಾರಣ, ಅಲ್ಲಿನ ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಉತ್ಪಾಧಿಸುತ್ತಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಸಕ್ಕರೆ ಬೆಲೆ ಹೆಚ್ಚಾಗಿದೆ.