Retired soldier died | ಧ್ವಜಾರೋಹಣ ವೇಳೆ ನಿವೃತ್ತ ಸೈನಿಕ ಸಾವು
ಕಡಬ ತಾಲೂಕಿನ ಕುಟ್ರುಪಾಡಿಯಲ್ಲಿ ಘಟನೆ
ಗಂಗಾಧರ ಗೌಡ ಮೃತ ನಿವೃತ್ತ ಸೈನಿಕ
ಹಳೆಸ್ಟೇಷನ್ ಅಮೃತ ಸರೋವರದ ಬಳಿ ಧ್ವಜಾರೋಹಣ
ಆಸ್ಪತ್ರೆಗೆ ಸಾಗಿಸುವ ವೇಳೆ ಗಂಗಾಧರ ಗೌಡ ಕೊನೆಯುಸಿರು
ಮಂಗಳೂರು : ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ವೇಳೆ ಕುಸಿದು ಬಿದ್ದು ನಿವೃತ್ತ ಸೈನಿಕ ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದಲ್ಲಿ ನಡೆದಿದೆ.
ಗಂಗಾಧರ ಗೌಡ ಮೃತರಾಗಿದ್ದಾರೆ. ಕುಟ್ರುಪಾಡಿ ಗ್ರಾಮ ಪಂಚಾಯಿತಿ ವತಿಯಿಂದ ಹಳೆ ಸ್ಟೇಷನ್ ಅಮೃತ ಸರೋವರದ ಬಳಿ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಧ್ವಜಾರೋಹಣಕ್ಕೂ ಮುನ್ನಾ ನಿವೃತ್ತ ಯೋಧ ಗಂಗಾಧರ ಗೌಡ ಅವರು ಅತಿಥಿಗಳಿಗೆ ಹಾಗೂ ಸ್ಥಳೀಯರಿಗೆ ಮಾರ್ಗದರ್ಶನ ನೀಡುತ್ತಿದ್ದರು.
ಈ ಸಂದರ್ಭದಲ್ಲಿ ಅವರು ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ ಅಷ್ಟೋತ್ತಿಗಾಗಲೇ ಗಂಗಾಧರ್ ಗೌಡ ಅವರು ಕೊನೆಯುಸಿರೆಳೆದಿದ್ದರು.