ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಮಾಡುವ ಮಾತುಗಳು ಮತ್ತು ಶಾಸಕರ ಅಸಮಾಧಾನ ಸಂಬಂಧ ನಡೆಯುತ್ತಿರುವ ಚರ್ಚೆಗೆ ಸಂಬಂಧಿಸಿದಂತೆ, ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಗೋಕಾಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಾಂತಿ ಮಾಡೋದು, ಬಿಡೋದು ನಮ್ಮ ಕೈಯಲ್ಲಿಲ್ಲ. ಎಲ್ಲವೂ ವರಿಷ್ಠರ ಕೈಯಲ್ಲಿದೆ. ಅವರು ನೋಡ್ತಾರೆ, ನಾವು ಒಂದು ಭಾಗವಷ್ಟೇ ಎಂದು ಹೇಳಿದ್ದಾರೆ.
ಇದು ಸಚಿವ ರಾಜಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿದ್ದು, ಅವರು ಹೇಳಿದ್ದಾರೆ, ನಾವೂ ಹೇಳಿದ್ದೇವೆ, ಅಲ್ಲಿಗೆ ಅದು ಮುಗಿದ ವಿಚಾರ ಎಂದು ಸತೀಶ್ ಸ್ಪಷ್ಟಪಡಿಸಿದರು.
ಅಲ್ಲದೆ, ತಾವು ದೆಹಲಿ ಭೇಟಿಯಾದದ್ದು ಯಾವುದಾದರೂ ರಾಜಕೀಯ ಉದ್ದೇಶವಲ್ಲ, ಯಾವುದೇ ವಿಶೇಷತೆ ಇಲ್ಲ ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷದ ಉನ್ನತ ನಾಯಕರೇ ಎಲ್ಲ ವಿಚಾರಗಳನ್ನು ಆಲಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದೂ ತಿಳಿಸಿದರು.








