Ricky kej : ಸತತ ಮೂರನೇ ಭಾರಿಗೆ ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡಿಗ…
ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕಿ ಕೇಜ್ ಸತತ ಮೂರನೇ ಭಾರಿಗೆ ಗ್ರ್ಯಾಮಿ ಪ್ರಶಸ್ತಿಯನ್ನ ಪಡೆದುಕೊಂಡಿದ್ದಾರೆ. ರಿಕಿ ಸಂಗೀತ ಸಂಯೋಜಿಸಿದ್ದ ಡಿವೈನ್ ಟೈಡ್ಸ್ ಆಲ್ಬಂ ಗೆ ‘ಅತ್ಯುತ್ತಮ ಇಮ್ಮರ್ಸಿವ್ ಆಡಿಯೊ ಆಲ್ಬಮ್’ ಎಂಬ ವಿಭಾಗದಲ್ಲಿ ಗ್ರ್ಯಾಮಿ ಪಶಸ್ತಿಯನ್ನ ನೀಡಲಾಗಿದೆ.
ಸಹ ಸಂಗೀತಗಾರ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರೊಂದಿಗೆ ರಿಕಿ ಕೇಜ್ ಪ್ರಶಸ್ತಿಯನ್ನು ಹಂಚಿಕೊಂಡರು. ಆದರೆ ರಿಕಿ ಕೇಜ್ ಈ ಪ್ರಶಸ್ತಿ ಗೆದ್ದಿರುವುದು ಇದೇ ಮೊದಲಲ್ಲ. ಈಗಾಗಲೇ 2 ಬಾರಿ ಈ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದ್ದರು. 2015 ರಲ್ಲಿ ಮೊದಲ ಬಾರಿಗೆ ‘ವಿಂಡ್ಸ್ ಆಫ್ ಸಂಸಾರ’ ಆಲ್ಬಂ ‘ಅತ್ಯುತ್ತಮ ಹೊಸ ಯುಗದ ಆಲ್ಬಂ’ ವಿಭಾಗದಲ್ಲಿ ಪ್ರಶಸ್ತಿಯನ್ನ ಗೆದ್ದುಕೊಂಡಿತು. 2022 ರಲ್ಲಿ ಎರಡನೇ ಬಾರಿಗೆ, ‘ಡಿವೈನ್ ಟೈಡ್ಸ್’ ಗಾಗಿ ‘ಅತ್ಯುತ್ತಮ ಹೊಸ ಯುಗದ ಆಲ್ಬಮ್’ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ರಿಕಿ ಕೇಜ್ 2022 ಮತ್ತು 2023 ರಲ್ಲಿ ಪಡೆದ ಪ್ರಶಸ್ತಿಗಳು ಒಂದೇ ಆಲ್ಬಂ ಎಂಬುದು ಗಮನಾರ್ಹ. ಈ ಕುರಿತು ರಿಕಿ ಕೇಜ್ ಮಾತನಾಡಿ ಡಿವೈನ್ ಟೈಡ್ಸ್ ಆಲ್ಬಂ, ಎರಡನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ನನ್ನ ಸಂಗೀತವು ಕ್ರಾಸ್ – ಕಲ್ಚರಲ್ ಆಗಿದ್ದರೂ, ಅದರ ಬೇರುಗಳು ಭಾರತೀಯ ಸಂಗೀತ ಎಂದು ತಿಳಿಸಿದ್ದಾರೆ.
Ricky kej: The Kannadiga won the Grammy award for the third time in a row…