Ricky Ponting : ಅಂಪೈರ್ ಜೊತೆ ರಿಕಿ ಕಿರಿಕ್..
ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಾಗ ಅಂಪೈರ್ ಗಳ ಮೇಲೆ ಆಟಗಾರರು ಗೇರಾಡೋದು ಸಾಮಾನ್ಯ.
ಅದರಲ್ಲೂ ಒಬ್ಬ ಅಂಪೈರ್ ತಪ್ಪು ಮಾಡಿದ್ರೆ ಬೇರೊಬ್ಬ ಅಂಪೈರ್ ಜೊತೆ ವಾದಕ್ಕಿಳಿಯುವ ಸಂದರ್ಭಗಳು ಸಾಕಷ್ಟಿವೆ.
ಅದಕ್ಕೆ ತಾಜಾ ಉದಾಹರಣೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್, ಅಂಪೈರ್ ಜೊತೆ ವಾದಕ್ಕಿಳಿದಿರೋದು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನ್ನಿಂಗ್ಸ್ ನ 19ನೇ ಓವರ್ ಉಮೇಶ್ ಯಾದವ್ ಎಸೆದರು. ಆ ಓವರ್ ನ ಎರಡನೇ ಎಸೆತ ಫುಲ್ ಟಾಸ್ ಯಾರ್ಕರ್ ಆಗಿತ್ತು.
ಬಾಲ್ ವೈಡ್ ಲೈನ್ ಆಚೆಗೆ ಬಿದ್ದರೂ ಅಂಪೈರ್ ವೈಡ್ ಕೊಡಲಿಲ್ಲ.
ಈ ಸಮಯದಲ್ಲಿ ಡಗೌಟ್ ನಲ್ಲಿದ್ದ ಪಾಂಟಿಂಗ್ ಅದೇನದು ಅಷ್ಟು ಕ್ಲಿಯರ್ ಆಗಿ ವೈಡ್ ಅಂತಾ ಗೊತ್ತಾಗುತ್ತಿದ್ದರೂ ಅಂಪೈರ್ ವೈಡ್ ಕೊಡಲಿಲ್ಲ ಅಂತಾ ಕಿರುಚಿದರು.
ಜೊತೆಗೆ ಅಲ್ಲೇ ಇದ್ದ ಮತ್ತೊಬ್ಬ ಅಂಪೈರ್ ಜೊತೆ ವೈಡ್ ಯಾಕೆ ಕೊಟ್ಟಿಲ್ಲ ಅಂತಾ ವಾದಕ್ಕಿಳಿದರು.
ಇದನ್ನ ಮೈದಾನದಲ್ಲಿದ್ದ ಕ್ಯಾಮೆರಾಗಳು ಸೆರೆ ಹಿಡಿದಿವೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ricky- ponting-argument-umpire ipl 2022