Ripponpet | ವರ್ಷದ ಹಿಂದೆ ನಾಪತ್ತೆಯಾಗಿದ್ದ ವೃದ್ದೆಯ ಅಸ್ಥಿಪಂಜರ ಪತ್ತೆ !
ರಿಪ್ಪನ್‌ಪೇಟೆ : ವರ್ಷದ ಹಿಂದೆ ನಾಪತ್ತೆಯಾಗಿದ್ದ ವೃದ್ದೆಯ ಅಸ್ಥಿಪಂಜರ ಮತ್ತು ಆಕೆ ಧರಿಸಿದ್ದ ಬಟ್ಟೆ ಪತ್ತೆಯಾಗಿದೆ.
ಹಾರಂಬಳ್ಳಿ ಗ್ರಾಮದ ಮಹಿಳೆ ಗಿಡ್ಡಮ್ಮ ಕಳೆದ 2021 ರ ಜುಲೈ 12ರಂದು ನಾಪತ್ತೆಯಾಗಿದ್ದರು.
ಕೂಡಲೇ ಗಿಡ್ಡಮ್ಮ ಅವರ ಮಕ್ಕಳು ರಿಪ್ಪನ್‌ಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ನಾಪತ್ತೆ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ ವೃದ್ದೆ ಎಲ್ಲೂ ಪತ್ತೆಯಾಗಿರಲಿಲ್ಲ.
ನಾಪತ್ತೆಯಾಗಿ ಒಂದು ವರ್ಷ ಎರಡು ತಿಂಗಳ ನಂತರ ಮೊನ್ನೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಹಾರಂಬಳ್ಳಿ ಗ್ರಾಮದ ಬಿಳಿಗಲ್ಲು ಉಬ್ಬಿನಕಾಡು ಎಂಬ ಅರಣ್ಯ ಪ್ರದೇಶದಲ್ಲಿ ತಲೆಬುರುಡೆ, ಸೀರೆ, ಸರ, ಮೂಳೆ ಮತ್ತು ಅವಶೇಷಗಳು ಪತ್ತೆಯಾಗಿದೆ.

ಸ್ಥಳಕ್ಕೆ ತೆರಳಿದ್ದ ಕುಟುಂಬಸ್ಥರು ಸೀರೆ ಮತ್ತು ಸರವನ್ನು ನೋಡಿ ಅಸ್ಥಿಪಂಜರ ಗಿಡ್ಡಮ್ಮ ರವರದ್ದೆ ಎಂದು ಗುರುತಿಸಿದ್ದಾರೆ.
ಸ್ಥಳಕ್ಕೆ ತೆರಳಿದ ಸಿಪಿಐ ಗಿರೀಶ್ ಮತ್ತು ರಿಪ್ಪನ್‌ಪೇಟೆ ಪಿಎಸ್ ಐ ಶಿವಾನಂದ ಕೋಳಿ ರವರ ತಂಡ ಅಸ್ಥಿಪಂಜರ ಹಾಗೂ ಅವಶೇಷಗಳನ್ನು ವಶಕ್ಕೆ ಪಡೆದು ಎಪ್ಎಸ್ಐಎಲ್ ವರದಿಗಾಗಿ ಕಳುಹಿಸಿಕೊಟ್ಟಿದೆ.
ಎಫ್ಎಸ್ಐಎಲ್ ವರದಿ ಬಂದ ನಂತರವೇ ಸತ್ಯಾಂಶ ತಿಳಿದುಬರಲಿದೆ.