ಪಂತ್ ಸೆಂಚೂರಿ.. ಹಲವು ದಾಖಲೆಗಳು ಉಡೀಸ್…

1 min read
Rishab Pant Century .. Many records break

ಪಂತ್ ಸೆಂಚೂರಿ.. ಹಲವು ದಾಖಲೆಗಳು ಉಡೀಸ್…

ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಅದ್ಭುತ ಪ್ರದರ್ಶನ ನೀಡಿದ್ದಾರೆ.

ವೀರೋಚಿತ ಶತಕದ ಮೂಲಕ ತಂಡವನ್ನು ರಕ್ಷಿಸಿದರು. ಈ ಕ್ರಮದಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಮತ್ತು ಏಷ್ಯಾದ ವಿಕೆಟ್ ಕೀಪರ್ ಎನಿಸಿಕೊಂಡರು.

2010ರಲ್ಲಿ ಧೋನಿ ಗಳಿಸಿದ 90 ರನ್‌ಗಳು ಇಲ್ಲಿ ಅತ್ಯಧಿಕ ರನ್ ಗಳಾಗಿದ್ದವು. ಈ ಪಂದ್ಯದಲ್ಲಿ ಪಂತ್  100 ರನ್ ಗಳಿಸುವ ಮೂಲಕ ಧೋನಿ ದಾಖಲೆ ಮುರಿದರು.

ಈ ಇನ್ನಿಂಗ್ಸ್‌ನಲ್ಲಿ, ಪಂತ್ 139 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಬೃಹತ್ ಸಿಕ್ಸರ್‌ಗಳೊಂದಿಗೆ 100 ರನ್ ಗಳಿಸಿ ಅಜೇಯರಾಗುಳಿದರು.

Rishab Pant Century .. Many records break

ಹಾಗಾಗಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಎದುರು 212 ರನ್ ಗಳ ಹೋರಾಟದ ಗುರಿಯನ್ನು ಹಾಕಲು ಸಾಧ್ಯವಾಯಿತು.

ಇದು ಪಂತ್ ವೃತ್ತಿಜೀವನದ ಮೂರನೇ ಶತಕ ಸಾಧನೆಯಾಗಿದೆ. 2018 ರಲ್ಲಿ ಇಂಗ್ಲೆಂಡ್‌ನಲ್ಲಿ (114), ಮತ್ತು ಅದೇ ವರ್ಷ ಆಸ್ಟ್ರೇಲಿಯಾದಲ್ಲಿ (159), ಇದೀಗ ದಕ್ಷಿಣ ಆಫ್ರಿಕಾದಲ್ಲಿ ಶತಕ ಸಿಡಿಸಿದ್ದಾರೆ.

ಇದಕ್ಕು ಮೊದಲು ವೃದ್ಧಿಮಾನ್ ಸಹಾ  (ವೆಸ್ಟ್ ಇಂಡೀಸ್‌ನಲ್ಲಿ 104), ಅಜಯ್ ರಾತ್ರಾ (ವೆಸ್ಟ್ ಇಂಡೀಸ್‌ನಲ್ಲಿ ಔಟಾಗದೆ 115) ಮತ್ತು ವಿಜಯ್ ಮಂಜ್ರೇಕರ್ (ವೆಸ್ಟ್ ಇಂಡೀಸ್‌ನಲ್ಲಿ 118) ಮಾತ್ರ ಏಷ್ಯಾದ ಹೊರಗೆ ಶತಕಗಳನ್ನು ಗಳಿಸಿದ  ವಿಕೆಟ್ ಕೀಪರ್ ಗಳಾಗಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd