Rishab Shetty | ತೆಲುಗಿನಲ್ಲಿ ಧೂಳೆಬ್ಬಿಸುತ್ತಿರುವ ಕಾಂತಾರ.. ಒಂದೇ ದಿನ 11 ಕೋಟಿ
ರಿಷಬ್ ಶೆಟ್ಟಿ ಹೀರೋ ಆಗಿ ನಿರ್ದೇಶಿಸಿರುವ ಸಿನಿಮಾ ಕಾಂತಾರ. ಕನ್ನಡದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿರುವ ಈ ಸಿನಿಮಾ ತೆಲುಗಿನಲ್ಲಿ ಸೂಪರ್ ಹಿಟ್ ಟಾಕ್ ಪಡೆದುಕೊಂಡಿದೆ.
ತೆಲುಗಿನಲ್ಲಿ ರಿಲೀಸ್ ಆದ ಮೊದಲ ದಿನವೇ ಹಿಟ್ ಟಾಕ್ ಪಡೆದುಕೊಂಡ ಕಾಂತಾರ ಸಿನಿಮಾ, 1.95 ಕೋಟಿ ಗ್ರಾಸ್ ಗಳಿಸಿತ್ತು.
ಇದೀಗ ಎರಡನೇ ದಿನ 10 ಪಟ್ಟು ಡಬಲ್ ಅಂದ್ರೆ 11.5 ಕೋಟಿ ಗ್ರಾಸ್ ಕಲೆಕ್ಟ್ ಮಾಡಿದೆ. ಕೇವಲ ಮೌಥ್ ಟಾಕ್ ನೊಂದಿಗೆ ದೊಡ್ಡ ಗೆಲುವು ಸಾಧಿಸಿದೆ.
ಕನ್ನಡದಲ್ಲಿ ಭಾರಿ ಗೆಲುವು ಸಾಧಿಸಿರುವ ಈ ಸಿನಿಮಾವನ್ನು ಪ್ರಮುಖ ನಿರ್ಮಾಪಕ ಅಲ್ಲು ಅರವಿಂದ ತೆಲುಗಿನಲ್ಲಿ ರಿಲೀಸ್ ಮಾಡಿದರು.

ರಿಷಬ್ ಶೆಟ್ಟಿ ಅದ್ಭುತವಾದ ನಟನೆ, ವಿಜುವಲ್ಸ್ ಗೆ ಬ್ಯಾಕ್ ಗ್ರೌಂಡ್ ಮ್ಯಾಜಿಕ್ ಸೇರಿ ಕಾಂತಾರ ಥಿಯೇಟರ್ ನಲ್ಲಿ ಮಾಸ್ ಜಾತ್ರೆ ಸೃಷ್ಟಿಸಿದೆ.
ಕನ್ನಡದಲ್ಲಿ 17 ದಿನಗಳ ಕಲೆಕ್ಷನ್ ಅನ್ನು ತೆಲುಗಿನಲ್ಲಿ ಕೇವಲ ಎರಡು ದಿನಗಳಲ್ಲಿ ಗಳಿಸಿದೆ.
ಕಾಂತಾರ ಸಿನಿಮಾ ಈ ಮಟ್ಟಿಗೆ ಗೆಲುವು ಕಾಣಲು ಪ್ರಮುಖ ಕಾರಣ ಸಿನಿಮಾ ಕ್ಲೈಮ್ಯಾಕ್ಸ್.
ಸಿನಿಮಾದ ಕಡೆಯ 20 ನಿಮಿಷಗಳು ಪ್ರೇಕ್ಷಕರ ಮನಗೆದ್ದಿದೆ.