Kantara Movie | ಕಾಂತಾರ ಸಿನಿಮಾದ ಟ್ರೈಲರ್ ರಿಲೀಸ್
ನಟ, ನಿರ್ದೇಶಕ ರಿಷಬ್ ಶೆಟ್ಟಿ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ ಸಿನಿಮಾ ಕಾಂತಾರ.
ಈ ಸಿನಿಮಾದ ಟ್ರೈಲರ್ ಇಂದು ರಿಲೀಸ್ ಆಗಿದೆ.
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕಾಂತಾರ ಸಿನಿಮಾದ ಟ್ರೈಲರ್ ಹೊಂಬಾಳೆ ಫಿಲಂಸ್ ಅನಾವರಣ ಮಾಡಿದೆ.
ಸದ್ಯ ಯುಟ್ಯೂಬ್ ನಲ್ಲಿ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಕರುನಾಡ ಸಂಸ್ತೃತಿಯ ಅನಾವರಣಗೊಂಡಿದೆ.

ಜೊತೆಗೆ ಮಾನವ ಮತ್ತು ಪ್ರಕೃತಿ ಸಂಘರ್ಷದ ಕುರಿತ ಕಥೆಯಾಗಿದೆ ಅಂತಾ ಗೊತ್ತಾಗುತ್ತಿದೆ.
ಕಂಬಳ, ಭೂತರಾಧನೆ ಸೇರಿದಂತೆ ಹಲವು ವಿಷಯಗಳು ಟ್ರೈಲರ್ ನಲ್ಲಿವೆ.
ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅಜನೀಶ್ ಬಿ ಲೋಕನಾಥ್ ಸಂಗೀತ ಮತ್ತು ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ ಇದೆ.
ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರ್ ಈ ಚಿತ್ರವನ್ನ ನಿರ್ಮಾಣ ಮಾಡಲಾಗಿದೆ.