Rishab Shetty : ಕಾಂತಾರ 2 ಚಿತ್ರದಲ್ಲಿ ಊರ್ವಶಿ ರೌಟೇಲಾ – ಸ್ಪಷ್ಟನೆ ನೀಡಿದ ರಿಷಬ್…
ಕರಾವಾಳಿ ಸೊಗಡಿನ ಕಥೆಯನ್ನ ಅಧ್ಭುತವಾಗಿ ಹೆಣೆದು ಕಾಂತಾರ ಚಿತ್ರದ ಮೂಲಕ ನಟ ರಿಷಭ್ ಶೆಟ್ಟಿ ದೇಶಾದ್ಯಂತ ಜನಪ್ರಿಯರಾಗಿದ್ದಾರೆ. ಇದೀಗ ಕಾಂತರದ ಪ್ರೀಕ್ವೆಲ್ ಸಿನಿಮಾ ಕಥೆ ಹೆಣೆಯುವಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂತಾರದ ಮುಂದಿನ ಭಾಗದಲ್ಲಿ ಯಾರು ಯಾರು ನಟಿಸಲಿದ್ದಾರೆ ಎಂಬ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿವೆ ಇಷ್ಟು ದಿನಗಳ ಕಾಲ ರಜನಿಕಾಂತ್ ಚಿತ್ರದಲ್ಲಿ ನಟಿಸಿದ್ದಾರ ಎನ್ನುವ ಗಾಸಿಪ್ ಹರಿದಾಡುತ್ತಿತ್ತು. ಇದೀಗ ನಟಿ ಊರ್ವಶಿ ರೌಟೇಲ ಕಾಂತರದ ಪ್ರೀಕ್ವೆಲ್ ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಕಾಂತಾರ 2 ಚಿತ್ರದಲ್ಲಿ ಊರ್ವಶೀ ನಟಿಸಲಿದ್ದಾರೆ ಎನ್ನವುದಕ್ಕೆ ಕಾರಣವಾಗಿದ್ದು ರಿಷಬ್ ಶೆಟ್ಟಿ ಜೊತೆ ನಟಿ ಊರ್ವಶಿ ರೌಟೇಲ ಜೊತೆ ತೆಗೆಸಿಕೊಂಡ ಪೋಟೋದಿಂದ. ರಿಷಬ್ ಜೊತೆ ನಿಂತು ಕಾಂತಾರ 2 ಲೋಡಿಂಗ್ ಎಂದು ಕ್ಯಾಪ್ಶನ್ ನೀಡಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ರಿಷಬ್ ಮುಂದಿನ ಚಿತ್ರದಲ್ಲಿನಟಿಸಲಿದ್ದಾರೆ ಎನ್ನುವ ಗಾಳಿ ಸುದ್ದಿಗೆ ಕಾರಣವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ರಿಷಬ್ ಶೆಟ್ಟಿಗೆ ಪ್ರಶ್ನೆಗಳನ್ನ ಕೇಳಲಾಗಿದೆ. ಅದಕ್ಕೆ ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆಯಲು ಮುಂಬೈಗೆ ತೆರಳಿದ್ದ ವೇಳೆ ಸಿನಿ ವರದಿಗಾರರು ರಿಷಬ್ ಅವರಿಗೆ ಕಾಂತಾರ 2 ನಲ್ಲಿ ಊರ್ವಶಿ ಹೆಸರು ಕೇಳಿಬರುತ್ತಿರುವ ಕುರಿತು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರಿಷಬ್ ನಮ್ಮ ಸೆಲ್ಫಿ ನೋಡಿ ಈ ರೀತಿಯ ಮಾತುಗಳು ಬರುತ್ತಿವೆ. ಆ ರೀತಿ ಇಲ್ಲ. ಸದ್ಯ ಕಥೆ ಬರೆಯುತ್ತಿದ್ದೇನೆ. ಶೀಘ್ರವೇ ಘೋಷಣೆ ಮಾಡುತ್ತೇನೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಊರ್ವಶಿ ಮಾಡಿದ್ದು ಕೇವಲ ಪ್ರಚಾರದ ಗಿಮಿಕ್ ಎನ್ನುವುದು ಸ್ಪಷ್ಟವಾಗಿದೆ. ಇನ್ನು ಕೆಲವರು ಇಷ್ಟು ದಿನ ರಿಷಬ್ ಪಂತ್ ಹಿಂದೆ ಬಿದ್ದಿದ್ದ ಊರ್ವಶಿ ಇದೀಗ ರಿಷಬ್ ಶೆಟ್ಟಿ ಹಿಂದೆ ಬಿದ್ದಿದ್ದಾರೆ ಎಂದು ಮಾತನಾಡಿಕೊಂಡಿದ್ದಾರೆ…
Rishab Shetty : Urvashi Rautela in Kantara 2 – Rishab Shetty Clarified…








