Rishabh Pant : ಅಪಘಾತದ ನಂತರ ಮೊದಲ ಬಾರಿಗೆ ಟ್ವೀಟ್ ಮಾಡಿ ಕೃತಜ್ಞತೆ ಸಲ್ಲಿಸಿದ ಪಂತ್…
ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಷಬ್ ಪಂತ್, ತಮ್ಮ ಸಂಕಷ್ಟದ ಸಮಯದಲ್ಲಿ ನೆರವಾದ ಬಿಸಿಸಿಐ, ತಮ್ಮ ಅಭಿಮಾನಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂಬಂಧ ಎರಡು ಟ್ವೀಟ್ ಮಾಡಿರುವ ರಿಷಬ್ ಪಂತ್, “ನಿಮ್ಮ ಎಲ್ಲಾ ಬೆಂಬಲ ಮತ್ತು ಶುಭ ಹಾರೈಕೆಗಳಿಗೆ ನಾನು ವಿನಮ್ರ ಮತ್ತು ಕೃತಜ್ಞನಾಗಿದ್ದೇನೆ. ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಅಲ್ಲದೇ ಚೇತರಿಕೆಯ ಹಾದಿ ಪ್ರಾರಂಭವಾಗಿದೆ ಮತ್ತು ಮುಂಬರುವ ಸವಾಲುಗಳಿಗೆ ನಾನು ಸಿದ್ಧನಿದ್ದೇನೆ” ಎಂದಿರುವ ರಿಷಬ್ ಪಂತ್, ಬಿಸಿಸಿಐ, ಜೇಯ್ ಶಾ ಹಾಗೂ ಸರ್ಕಾರದ ಪ್ರತಿಯೊಂದು ಸಂಸ್ಥೆಗಳಿಗೂ ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾರೆ.
ಅಲ್ಲದೇ, “ನನ್ನ ಚೇತರಿಕೆಗಾಗಿ ಪ್ರಾರ್ಥಿಸಿದ ಮತ್ತು ನೆರವು ನೀಡಿದ ಅಭಿಮಾನಿಗಳು, ತಂಡದ ಸಹ ಆಟಗಾರರು, ವೈದ್ಯರು ಮತ್ತು ಫಿಸಿಯೋಗಳಿಗೆ ಹೃದಯಾಂತರಾಳದ ಧನ್ಯವಾದ ತಿಳಿಸುತ್ತೇನೆ”. ಮುಂದೆ ಎಲ್ಲರನ್ನೂ ಮೈದಾನದಲ್ಲಿ ನೋಡಲು ಬಯಸುತ್ತೇನೆ ಎಂದು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್, ಕಳೆದ ಡಿಸೆಂಬರ್ 30ರಂದು ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದರು. ದೆಹಲಿಯಿಂದ ಡೆಹರಾಡೋನ್‌ಗೆ ಒಬ್ಬಂಟಿಯಾಗಿ ತಮ್ಮ ಬಿಎಂಡಬ್ಲ್ಯೂ ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದರು.
Rishabh Pant: After the accident, Pant tweeted and thanked…