Rishabh Pant | ರೋಹಿತ್ ಬಳಿಕ ಟೀಂ ಇಂಡಿಯಾ ಕ್ಯಾಪ್ಟನ್ ಆತನೇ..
ಟೀಂ ಇಂಡಿಯಾದ ವಿಕೆಟ್ ಕೀಪರ್ ಕಮ್ ಬ್ಯಾಟರ್ ರಿಷಬ್ ಪಂತ್ ಪ್ರಸ್ತುತ ಅದ್ಭುತವಾದ ಫಾರ್ಮ್ ನಲ್ಲಿದ್ದಾರೆ.
ಇಂಗ್ಲೆಂಡ್ ಜೊತೆಗೆ ನಡೆದ ಟೆಸ್ಟ್ ಪಂದ್ಯದಲ್ಲಿ ಸೆಂಚೂರಿ ಸಿಡಿಸಿದ್ದ ಪಂತ್, ಏಕದಿನ ಕ್ರಿಕೆಟ್ ನಲ್ಲೂ ಶತಕದ ಸಂಭ್ರಮ ಆಚರಣೆ ಮಾಡಿಕೊಂಡರು.
ಟೀಂ ಇಂಡಿಯಾ ಏಕದಿನ ಸರಣಿ ಗೆಲ್ಲುವಲ್ಲಿ ಪಂತ್ ಪ್ರಮುಖ ಪಾತ್ರ ವಹಿಸಿದ್ದರು.
ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಅರುಣ್ ಲಾಲ್ ಪಂತ್ ಬಗ್ಗೆ ಆಸಕ್ತಿದಾಯಕ ಕಮೆಂಟ್ ಗಳನ್ನು ಮಾಡಿದ್ದಾರೆ.
ಅಲ್ಲದೇ ರೋಹಿತ್ ಶರ್ಮಾ ಬಳಿಕ ರಿಷಬ್ ಪಂತ್ ಟೀಂ ಇಂಡಿಯಾದ ನಾಯಕ ಎಂದು ಅರುಣ್ ಲಾಲ್ ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಶರ್ಮಾ ಬಳಿಕ ಟೀಂ ಇಂಡಿಯಾದ ಕ್ಯಾಪ್ಟನ್ಸಿ ರೇಸ್ ನಲ್ಲಿ ಸಾಕಷ್ಟು ಆಟಗಾರರಿದ್ದಾರೆ.

ಆದ್ರೆ ರೋಹಿತ್ ಶರ್ಮಾ ಬಳಿಕ ಟೀಂ ಇಂಡಿಯಾದ ನಾಯಕ ಯಾರಾಗುತ್ತಾರೆ ಎಂದು ಯಾರಾದ್ರೂ ಪ್ರಶ್ನಿಸಿದ್ರೆ ನನ್ನ ಉತ್ತರ ಪಂತ್ ಆಗಿರುತ್ತದೆ.
ತಂಡದಲ್ಲಿ ಟಾಪ್ ತ್ರಿ ಯಲ್ಲಿರುವ ಆಟಗಾರರೇ ಕ್ಯಾಪ್ಟನ್ ಪದವಿಗೆ ಅರ್ಹರಾಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ.
ಪಂತ್ ಯಾವುದೇ ಭಯವಿಲ್ಲದೇ ಬ್ಯಾಟ್ ಬೀಸುತ್ತಾರೆ. ಯಾವುದೇ ಒತ್ತಡಕ್ಕೆ ಒಳಗಾಗದೇ ತನ್ನ ಕೆಲಸವನ್ನು ತಾನು ಮಾಡಿಕೊಂಡು ಹೋಗುತ್ತಾನೆ.
ಕಠಿಣ ಪರಿಸ್ಥಿತಿಯಲ್ಲಿ ತಂಡಕ್ಕೆ ಆಸರೆಯಾಗಿ ನಿಲ್ಲುತ್ತಾರೆ. ಹೀಗಾಗಿ ಅಂತಹ ಅದ್ಭುತ ಆಟಗಾರನಿಗೆ ನಾಯಕತ್ವ ನೀಡೋದು ಸೂಕ್ತ ಎಂದಿದ್ದಾರೆ.
ಒಂದು ಕಾಲದಲ್ಲಿ ವಿದೇಶದಲ್ಲಿ ಟೀಂ ಇಂಡಿಯಾ ಟೆಸ್ಟ್ ಮಾದರಿಯಲ್ಲಿ ಡ್ರಾಗಾಗಿ ಆಡುತ್ತಿತ್ತು. ಆದ್ರೆ ಈ ಆಲೋಚನೆ ಈಗ ಬದಲಾಗಿದೆ.
ಅದಕ್ಕೆ ಕಾರಣ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಂಡ ಬಳಿಕ ತಂಡ ಡ್ರಾಗಾಗಿ ಅಲ್ಲದೇ ಗೆಲುವಿಗಾಗಿ ಆಡೋಕೆ ಮುಂದಾಯ್ತು. ಅದನ್ನ ಪಂತ್ ಮುಂದುವರೆಸಿಕೊಂಡು ಹೋಗಲಿದ್ದಾರೆ ಎಂದಿದ್ದಾರೆ.








