Rishabh Pant | ತಂದೆಯನ್ನು ನೆನೆದು ಭಾವುಕರಾದ ರಿಷಬ್ ಪಂತ್..!!!
ಟೀಂ ಇಂಡಿಯಾದ ವಿಕೆಟ್ ಕೀಪರ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಸಂದರ್ಶನವೊಂದರಲ್ಲಿ ತಮ್ಮ ತಂದೆಯನ್ನ ನೆನೆದು ಭಾವುಕರಾಗಿದ್ದಾರೆ.
ಸದ್ಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಬ್ ಪಂತ್ ಮುನ್ನಡೆಸುತ್ತಿದ್ದಾರೆ. ಕಳೆದ ವರ್ಷ ಶ್ರೇಯಸ್ ಅಯ್ಯರ್ ಇಂಜೂರಿಯಾದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಿಷಬ್ ಪಂತ್ ಗೆ ನಾಯಕನ ಪಟ್ಟ ಕಟ್ಟಿತು.
ಕ್ಯಾಪ್ಟನ್ಸಿ ಪಡೆದ ರಿಷಬ್ ಪಂತ್ ಮೊದಲ ಪ್ರಯತ್ನದಲ್ಲಿಯೇ ಎಲ್ಲರ ಗಮನ ಸೆಳೆದರು. ಇತ್ತ ಟೀಂ ಇಂಡಿಯಾದಲ್ಲೂ ರಿಷಬ್ ಪಂತ್ ಉತ್ತಮ ಪ್ರದರ್ಶನ ನೀಡುತ್ತಾ ಮೂರು ಮಾದರಿಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ.
ಸದ್ಯ ಐಪಿಎಲ್ ನಲ್ಲಿ ಬ್ಯೂಸಿಯಾಗಿರುವ ಪಂತ್, ಟೈಮ್ಸ್ ಆಫ್ ಇಂಡಿಯಾಗೆ ಸಂದರ್ಶನ ನೀಡಿದರು, ಈ ವೇಳೆ ತಮ್ಮ ಕೋಚ್ ಮತ್ತು ತಂದೆಯ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ. ತಮ್ಮ ಯಶಸ್ಸಿನಲ್ಲಿ ತಂದೆ, ಕೋಚ್ ತಾರಕ್ ಸಿನ್ಹಾ ಅವರ ಪಾತ್ರ ಮಹತ್ವದ್ದು ಎಂದಿದ್ದಾರೆ.
2019 ರ ODI ವಿಶ್ವಕಪ್‌ನ ಭಾಗವಾಗಿ ಪಂತ್ ಇಂಗ್ಲೆಂಡ್‌ನಲ್ಲಿದ್ದಾಗ, ಅವರ ಕೋಚ್ ತೀವ್ರ ಅನಾರೋಗ್ಯದಿಂದ ನಿಧನರಾದರು. ಈ ಬಗ್ಗೆ ಮಾತನಾಡುತ್ತಾ, ವಿಶ್ವಕಪ್ ಮುಗಿದ ನಂತರ ನಾನು ನನ್ನ ಕೋಚ್ ಅವರನ್ನ ಭೇಟಿಯಾಗಲು ಬಯಸಿದ್ದೆ. ಆದರೆ ಅವರು ಅಷ್ಟೋತ್ತಿಗಾಗಲೇ ನಮ್ಮನ್ನು ಬಿಟ್ಟು ಹೊರಟು ಹೋಗಿದ್ದರು.
ಅದೇ ರೀತಿಯಲ್ಲಿ ನಾನು ನನ್ನ ತಂದೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ತಂದೆ ನನ್ನನ್ನು ತೊರೆದಾಗಲೂ ನಾನು ಕ್ರಿಕೆಟ್‌ನಲ್ಲಿ ನಿರತನಾಗಿದ್ದೆ. ಕೊನೆಯದಾಗಿಯೂ ಅವರನ್ನ ನಾನು ನೋಡಲಾಗಲಿಲ್ಲ. ನಾನು ಇವತ್ತು ಈ ಮಟ್ಟದಲ್ಲಿ ಇರಲು ಅವರಿಬ್ಬರೇ ಕಾರಣ ಎಂದಿದ್ದಾರೆ ಪಂತ್.
ನನ್ನ ಕೋಚ್ ನನಗೆ ಒಂದು ಮಾತು ಹೇಳಿದ್ದರು. ‘ಜೀವನದಲ್ಲಿ ಏನೇ ನಡೆದರೂ ಕ್ರಿಕೆಟ್ ಬಿಟ್ಟುಕೊಡಬಾರದು‘ ಎಂದು ಹೇಳಿದರು. ಅದೇ ರೀತಿ ಕುಟುಂಬವನ್ನು ನೋಡಿಕೊಳ್ಳಬೇಕು ಎಂದು ನನ್ನ ಕೋಚ್ ಹೇಳುತ್ತಿದ್ದರು. ಆದ್ರೆ ಈಗ ನನ್ನ ಜೀವನದಲ್ಲಿ, ನನ್ನ ತಂದೆ ಮತ್ತು ನನ್ನ ಕೋಚ್ ಇಲ್ಲ. ಅವರ ಸ್ಥಾನವನ್ನ ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಿಷಬ್ ಭಾವುಕರಾಗಿದ್ದಾರೆ. rishabh-pant emotional