Rishabh Pant | ಗಾಡ್ಜಿಲ್ಲಾದಂತೆ ಎಂಟ್ರಿ ಕೊಟ್ಟ ಪಂತ್
ಟಿ 20 ವರ್ಲ್ಡ್ ಕಪ್ 2022ಗೆ ಕೌಂಟ್ ಡೌನ್ ಶುರುವಾಗಿದೆ.
ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಭಾನುವಾರ ಒಂದು ಪ್ರೋಮೋ ರಿಲೀಸ್ ಮಾಡಿದೆ.
ಇದರಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್ ರಿಷಬ್ ಪಂತ್ ಸೆಂಟರ್ ಆಫ್ ದಿ ಅಟ್ರಾಕ್ಷನ್ ಆಗಿ ನಿಂತಿದ್ದಾರೆ.
ಈ ವಿಡಿಯೋದಲ್ಲಿ ಭಾರಿ ಅವತಾರದಲ್ಲಿ ದರ್ಶನ ಕೊಟ್ಟಿದ್ದು, ಸಿಡ್ನಿ ಹರ್ಭರ್ ನಿಂದ ಹುಟ್ಟು ಅಲ್ಲಿನ ಬೀದಿಗಳಲ್ಲಿ ಗಾಡ್ಜಿಲ್ಲಾದಂತೆ ನಡೆದುಕೊಂಡು ಹೋಗುತ್ತಾರೆ.
ವೆಲ್ ಕಮ್ ಟು ಬಿಗ್ ಟೈಮ್, ಪಂತ್ ಎನ್ನುತ್ತಾ ಐಸಿಸಿ ಇದಕ್ಕೆ ಕ್ಯಾಪ್ಷನ್ ಕೊಟ್ಟಿದೆ.

ಪ್ರಸ್ತುತ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪಂತ್ ಅವರನ್ನ ಹೈಲೆಟ್ ಮಾಡಿದ ಕಾರಣ ಆತನ ಅಭಿಮಾನಿಗಳು ಖುಷಿಯಾಗಿದ್ದಾರೆ.
ಈ ಹಿಂದೆ ಈ ಮೆಗಾ ಇವೆಂಟ್ ಪ್ರೋಮೋದಲ್ಲಿ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಮಾತ್ರ ಕಾಣಿಸಿಕೊಂಡಿದ್ದರು.
ಐಸಿಸಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಪಂತ್ ಜೊತೆಗೆ ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಂ ಸನ್, ಪಾಕ್ ಕ್ರಿಕೆಟ್ ಇಮಾಮ್ ಉಲ್ ಹಕ್, ವಿಂಡೀಸ್ ಆಲ್ ರೌಂಡರ್ ಆಂಡ್ರಿ ರಸೆಲ್, ಆಸ್ಟ್ರೇಲಿಯಾದ ಆಲ್ ರೌಂಡರ್ ಮಾರ್ಕಸ್ ಸ್ಟೋಯ್ನಿಸ್, ಪಾಕ್ ಬೌಲರ್ ಷಾಹಿನ್ ಅಫ್ರಿದಿ ದರ್ಶನ ಕೊಟ್ಟಿದ್ದಾರೆ.