ಧೋನಿ ಭಾಯ್ ಜೊತೆ ಬ್ಯಾಟಿಂಗ್ ಮಾಡುವಾಗ ಆಗುವ ಅನುಭವ ವಿಭಿನ್ನ- ರಿಷಬ್ ಪಂತ್
ರಿಷಬ್ ಪಂತ್.. ಟೀಮ್ ಇಂಡಿಯಾದ ಭವಿಷ್ಯದ ಆಟಗಾರ ಅಂತನೇ ಬಿಂಬಿಸಲಾಗಿತ್ತು. ಆದ್ರೆ 2019ರಲ್ಲಿ ರಿಷಬ್ ಪಂತ್ ಮೇಲಿದ್ದ ನಿರೀಕ್ಷೆಗಳು ಎಲ್ಲಾ ಹುಸಿಯಾದವು. ಕೆಟ್ಟ ಫಾರ್ಮ್‍ನಿಂದಾಗಿ ರಿಷಬ್ ಪಂತ್ ಟೀಮ್ ಇಂಡಿಯಾದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲರಾದ್ರು. ಕಳೆದ ಆಸ್ಟ್ರೇಲಿಯಾ ಸರಣಿಯ ನಂತರ ರಿಷಬ್ ಪಂತ್ ಟೀಮ್ ಇಂಡಿಯಾದಿಂದ ದೂರವೇ ಉಳಿದಿದ್ದಾರೆ. ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಒದ್ದಾಟ ನಡೆಸುತ್ತಿದ್ದಾರೆ.
ಇದೀಗ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟ್ವಿಟರ್ ಸಂವಾದ ಕಾರ್ಯಕ್ರಮದಲ್ಲಿ ಕೆಲವೊಂದು ವಿಚಾರವನ್ನು ಹೇಳಿಕೊಂಡಿದ್ದಾರೆ. ಅದ್ರಲ್ಲಿ
ಮುಖ್ಯವಾಗಿ ಮಹೇಂದ್ರ ಸಿಂಗ್ ಧೋನಿಯ ಬಗ್ಗೆ. ಮಹೇಂದ್ರ ಸಿಂಗ್ ಧೋನಿಯ ಜೊತೆ ಆಡುವಾಗ ಆಗುವಂತಹ ಅನುಭವವೇ ವಿಭಿನ್ನ. ಅದೊಂದು ಸ್ವತಃ ಅನುಭವ ಎಂದು ಹೇಳಿದ್ದಾರೆ. ಧೋನಿ ಭಾಯ್ ಜೊತೆ ಬ್ಯಾಟಿಂಗ್ ಮಾಡುವಾಗ ಯಾವುದೇ ರೀತಿಯ ಒತ್ತಡಗಳು ಇರುವುದಿಲ್ಲ. ಆದ್ರೆ ಧೋನಿಯವರ ಜೊತೆ ನನಗೆ ಹೆಚ್ಚು ಆಡುವ ಅವಕಾಶಗಳು ಸಿಕ್ಕಿಲ್ಲ. ಕೆಲವೇ ಕೆಲವು ಪಂದ್ಯಗಳ್ಲಿ ಆಡಿದ್ದೇನೆ. ಪಂದ್ಯದಲ್ಲಿ ಅವರು ಪಕ್ಕಾ ಪ್ಲಾನ್ ಮಾಡಿಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿದ್ರೆ ಆಯ್ತು. ಧೋನಿಯವರ ಮೈಂಡ್ ವರ್ಕ್ ಆಗುತ್ತಿರುವ ರೀತಿಯೇ ಅದ್ಭುತವಾಗಿರುತ್ತದೆ. ಅದೂ ಕೂಡ ಸವಾಲನ್ನು ಬೆನ್ನಟ್ಟುವಾಗ ಎಂದು ರಿಷಬ್ ಪಂತ್ ಧೋನಿ ಜೊತೆಯಾಟವಾಡುವಾಗ ಆಗಿರುವಂತಹ ಅನುಭವವನ್ನು ಹಂಚಿಕೊಂಡಿದ್ದಾರೆ.
ಇನ್ನು ವಿರಾಟ್ ಭಾಯ್ ಮತ್ತು ರೋಹಿತ್ ಭಾಯ್ ಜೊತೆ ಬ್ಯಾಟಿಂಗ್ ಮಾಡುವುದನ್ನು ಕೂಡ ನಾನು ಎಂಜಾಯ್ ಮಾಡುತ್ತೇನೆ. ಹಿರಿಯ ಆಟಗಾರರ ಜೊತೆ ಸೇರಿ ಬ್ಯಾಟಿಂಗ್ ಮಾಡುವಾಗ ಆಗುವಂತಹ ಅನುಭವವೇ ಭಿನ್ನವಾಗಿರುತ್ತದೆ. ಅವರು ಹೇಗೆ ಆಡುತ್ತಾರೆ, ಮಾನಸಿಕವಾಗಿ ಅವರು ಹೇಗೆ ಸಿದ್ಧರಾಗಿರುತ್ತಾರೆ
ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಹಾಗೇ ಶಿಖಿ ಭಾಯ್ ಮತ್ತು ಶ್ರೇಯ್ಯಸ್ ಅಯ್ಯರ್ ಜೊತೆ ಕೂಡ ಹಾಗೇ ಇರುತ್ತದೆ ಎಂದು ರಿಷಬ್ ಪಂತ್ ಹೇಳಿದ್ದಾರೆ.
ರಿಷಬ್ ಪಂತ್ ಅವರು 2018ರ ಐಪಿಎಲ್ ನಲ್ಲಿ ಅದ್ಭುತವಾದ ಪ್ರದರ್ಶನವನ್ನೇ ನೀಡಿದ್ದರು. ಹೊಡಿ ಬಡಿ ಆಟದ ಮೂಲಕ ಆಡುವ ಪಂತ್ ಅವರನ್ನು ಭವಿಷ್ಯದ ಧೋನಿ ಅಂತನೇ ಬಿಂಬಿಸಲಾಗಿತ್ತು. ಆಕ್ರಮಣಕಾರಿಯಾಗಿ ಆಡುವ ರಿಷಬ್ ಪಂತ್ ಎದುರಾಳಿ ತಂಡಗಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದರು. ಆದ್ರೆ ಟೀಮ್ ಇಂಡಿಯಾದಲ್ಲಿ ಮಾತ್ರ ತನ್ನ ಪ್ರತಿಭೆ ಮತ್ತು ಸಾಮಥ್ರ್ಯಕ್ಕೆ ತಕ್ಕಂತೆ ಆಡವಾಡಲಿಲ್ಲ. ಹೀಗಾಗಿ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯ್ತು.
ಇತ್ತೀಚೆಗಷ್ಟೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಮಹಮ್ಮದ್ ಕೈಫ್ ಕೂಡ ರಿಷಬ್ ಪಂತ್ ಬಗ್ಗೆ ಮಾತನಾಡಿದ್ದಾರೆ. ರಿಷಬ್ ಪಂತ್ ಅದ್ಭುತ ಆಟಗಾರ. ತಂಡ ಆತನನ್ನು ಬಳಸಿಕೊಳ್ಳಲು ಪ್ಲಾನ್ ಮಾಡಿಕೊಳ್ಳಬೇಕು. ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಬ್ ಪಂತ್ ಅವರನ್ನು ಬಳಸಿಕೊಂಡ ಹಾಗೇ ವಿರಾಟ್ ಕೊಹ್ಲಿ ತಂಡ ಬಳಸಿಕೊಳ್ಳಲಿಲ್ಲ ಅಂತ ಹೇಳಿದ್ದರು.








