Rishabh Pant : ಸೋಲು ತುಂಬಾ ನೋವು ತಂದಿದೆ
ಬೆಂಗಳೂರು : ಸೋಲು ತುಂಬಾ ನೋವು ತಂದಿದೆ. ಈ ಸೋಲಿನಿಂದ ಪಾಠಗಳನ್ನು ಕಳಿತು ಮುಂದಿನ ಬಾರಿ ಸ್ಟ್ರಾಂಗ್ ಕಂ ಬ್ಯಾಕ್ ಮಾಡುತ್ತೇವೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಬ್ ಪಂತ್ ತಿಳಿಸಿದ್ದಾರೆ.
ವಾಂಖೇಡೆ ಮೈದಾನದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದು ವಿಕೆಟ್ ಗಳಿಂದ ಸೋಲು ಕಂಡಿದೆ.
ಇದರೊಂದಿಗೆ ಪ್ಲೇ ಆಫ್ಸ್ ಗೆ ಎಂಟ್ರಿ ಕೊಡದೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.
ಪಂದ್ಯದ ಬಳಿಕ ಸೋಲಿನ ಬಗ್ಗೆ ಮಾತನಾಡಿದ ರಿಷಬ್ ಪಂತ್, ಒತ್ತಡವನ್ನು ಬಿಟ್ಟು ಪ್ರಣಾಳಿಕೆಯಂತೆ ಪಂದ್ಯವನ್ನಾಡಿದ್ದರೇ ರಿಸ್ಟಲ್ ಬೇರೆ ರೀತಿ ಇರುತ್ತಿತ್ತು. ಆದ್ರೆ ನಮ್ಮ ಬೌಲರ್ ಗಳು ಅದ್ಭುತ ಪ್ರದರ್ಶನ ನೀಡಿದರು ಎಂದು ತಿಳಿಸಿದರು.
ಮೇಲು ಗೈ ಸಾಧಿಸುತ್ತಿದ್ದೇವೆ ಅನ್ನೋ ಸಂದರ್ಭದಲ್ಲಿಯೇ ಕೊನೆಯವರೆಗೂ ಹೋರಾಡಿ ಸೋತಿದ್ದು ನಿರಾಸೆಯನ್ನುಂಟು ಮಾಡಿದೆ.
ಟೂರ್ನಿಯುದ್ದಕ್ಕೂ ಇದೇ ರೀತಿಯ ಅನುಭವಗಳು ಎದುರಾಗುತ್ತಿದ್ದವು. ನಾವು ಇಂದಿನ ಪಂದ್ಯದಲ್ಲಿ ನೀಡಿದ ಪ್ರದರ್ಶನ ಗೆಲುವಿಗೆ ಸಾಕಾಗೋದಿಲ್ಲ.
ಇಲ್ಲಿ ಒತ್ತಡ ಸಮಸ್ಯೆಯಲ್ಲ. ನಮ್ಮ ಯೋಜನೆಗಳನ್ನು ಇನ್ನೂ ಉತ್ತಮವಾಗಿ ಅನುಷ್ಠಾನಗೊಳಿಸಬೇಕಿತ್ತು. ಆದರೆ ಅದು ಆಗಲಿಲ್ಲ‘ ಎಂದರು.
ಅದೇ ರೀತಿ .. ‘‘5-7 ರನ್ ಪಡೆದಿದ್ದರೆ ಚೆನ್ನಾಗಿತ್ತು. ಟೂರ್ನಿಯುದ್ದಕ್ಕೂ ನಮ್ಮ ಬೌಲರ್‌ಗಳು ಮಿಂಚಿದರು. ಸೋಲು ತುಂಬಾ ನೋವುಂಟು ಮಾಡುತ್ತಿದೆ ಎಂದು ಪಂತ್ ಹೇಳಿದ್ದಾರೆ.
ಅಲ್ಲದೇ ತಪ್ಪುಗಳಿಂದ ಪಾಠ ಕಲಿತುಕೊಂಡು ಮುಂಬರುವ ಋತುವಿನಲ್ಲಿ ಹೊಸ ಉತ್ಸಾಹದಿಂದ ಬರುತ್ತೇನೆ ಎಂದರು.rishabh-pant-says-not-pressure-we-let-game-slip-away