ಟೀಮ್ ಇಂಡಿಯಾಗೆ ಕೋವಿಡ್ ಆಘಾತ… ರಿಷಬ್ ಪಂತ್ ಡೆಲ್ಟಾ ಸೋಂಕು… ಮುಳುವಾಗಿ ಹೋಯ್ತಾ ಯುರೋ ಕಪ್ ಪಂದ್ಯ ವೀಕ್ಷಣೆ ..?

1 min read
rishab pant team india england saakshatv

ಟೀಮ್ ಇಂಡಿಯಾಗೆ ಕೋವಿಡ್ ಆಘಾತ… ರಿಷಬ್ ಪಂತ್ ಡೆಲ್ಟಾ ಸೋಂಕು… ಮುಳುವಾಗಿ ಹೋಯ್ತಾ ಯುರೋ ಕಪ್ ಪಂದ್ಯ ವೀಕ್ಷಣೆ ..?

rishab pant team india england saakshatvಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ರಿಷಬ್ ಪಂತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಹೀಗಾಗಿ ರಿಷಬ್ ಪಂತ್ ಅವರು ಟೀಮ್ ಇಂಡಿಯಾದಿಂದ ದೂರ ಉಳಿದಿದ್ದಾರೆ. ಅಷ್ಟೇ ಅಲ್ಲ, ಆಗಸ್ಟ್ 4ರಿಂದ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ನಂತರ ಟೀಮ್ ಇಂಡಿಯಾ ಆಟಗಾರರು ವಿರಾಮದಲ್ಲಿದ್ದರು. ಈ ವೇಳೆಯಲ್ಲಿ ರಿಷಬ್ ಪಂತ್ ಇಂಗ್ಲೆಂಡ್ ನಲ್ಲಿ ಸುತ್ತಾಟ ನಡೆಸಿದ್ದಾರೆ. ಅಷ್ಟೇ ಅಲ್ಲ, ಯೂರೋ ಕಪ್ ಫುಟ್ ಬಾಲ್ ಪಂದ್ಯವನ್ನು ವೀಕ್ಷಣೆ ಮಾಡಿದ್ದರು. ಜೊತೆಗೆ ತನ್ನ ಅಭಿಮಾನಿಗಳ ಜೊತೆಗೂ ಫೋಟೋ ಶೂಟ್ ಕೂಡ ಮಾಡಿಕೊಂಡಿದ್ದರು.
ಇದೀಗ ರಿಷಬ್ ಪಂತ್ ಅವರ ಅಜಾಗರುಕತೆಯಿಂದಾಗಿ ಕೋವಿಡ್ ಸೋಂಕು ತಗುಲಿದೆ. ಇಂಗ್ಲೆಂಡ್ ನಲ್ಲಿ ಕೋವಿಡ್ ಸೋಂಕಿನ ರೂಪಾಂತರಿ ಡೆಲ್ಟಾ ವೈರಸ್ ಕೇಸ್ ಗಳು ಹೆಚ್ಚುತ್ತಿದೆ. ಹಾಗೆ ರಿಷಬ್ ಪಂತ್ ಕೂಡ ಡೆಲ್ಟಾ ವೈರಸ್ ನಿಂದ ಬಳಲುತ್ತಿದ್ದಾರೆ.
ಸದ್ಯ ಟೀಮ್ ಇಂಡಿಯಾದಿಂದ ಪ್ರತ್ಯೇಕವಾಗಿರುವ ರಿಷಬ್ ಪಂತ್ ಚಿಕಿತ್ಸೆ ಪಡೆಯುತ್ತಿದ್ದು, ಐಸೋಲೇಷನ್ ನಲ್ಲಿದ್ದಾರೆ.
ಹಾಗೇ ನೋಡಿದ್ರೆ ರಿಷಬ್ ಪಂತ್ ಎರಡೂ ಕೋವಿಶೀಲ್ಡ್ ಲಸಿಕೆಗಳನ್ನು ಪಡೆದುಕೊಂಡಿದ್ದರು. ಹೀಗಾಗಿ ಕೋವಿಡ್ ಸೋಂಕು ಬರುವುದಿಲ್ಲ ಅನ್ನೋ ಭಂಡ ಧೈರ್ಯದಲ್ಲಿದ್ದ ಪಂತ್ ಇಂಗ್ಲೆಂಡ್ ನಲ್ಲಿ ಆರಾಮವಾಗಿಯೇ ಸುತ್ತಾಟ ನಡೆಸಿದ್ದರು ಅಂತ ಅನ್ಸುತ್ತೆ. ಆದ್ರೆ ಕೋವಿಶೀಲ್ಡ್ ಲಸಿಕೆ ಕೋವಿಡ್ ಸೋಂಕಿನ ಪರಿಣಾಮವನ್ನು ಕಮ್ಮಿ ಮಾಡುತ್ತೆ ಹೊರತು ಕೋವಿಡ್ ಸೋಂಕು ಬರುವುದೇ ಇಲ್ಲ ಅನ್ನೋದು ಈಗ ರಿಷಬ್ ಪಂತ್ ಗೆ ಗೊತ್ತಾಗಿರಬೇಕು. ಏನೇ ಆದ್ರೂ ರಿಷಬ್ ಪಂತ್ ಸ್ವಲ್ಪ ಎಚ್ಚರ ತಪ್ಪಿದ್ದಾರೆ. ಅದಕ್ಕೆ ಈಗ ತಕ್ಕ ದಂಡ ತೆರಬೇಕಾಯ್ತು. ಹುಡುಗಾಟದ ಬುದ್ದಿಯಿಂದ ರಿಷಬ್ ಪಂತ್ ತಪ್ಪು ಮಾಡಿದ್ದಾರೆ. ಅದಷ್ಟು ಬೇಗ ಗುಣಮುಖರಾಗಲಿ ಅನ್ನೋದೇ ಎಲ್ಲರ ಆಶಯ.
ಇನ್ನೊಂದೆಡೆ ಟೀಮ್ ಇಂಡಿಯಾಗೆ ಇದು ಎರಡನೇ ಆಘಾತ. ಈ ಮೊದಲು ಗಾಯದಿಂದಾಗಿ ಶುಬ್ಮನ್ ಗಿಲ್ ಅವರು ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರು. ಇದೀಗ ರಿಷಬ್ ಪಂತ್ ಸರದಿ. ರಿಷಬ್ ಪಂತ್ ತನ್ನ ಮಾಡಿರುವ ಪ್ರಮಾದದಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ವಂಚಿತರಾಗಬೇಕಾಯ್ತು.
ಈ ನಡುವೆ, ರಿಷಬ್ ಪಂತ್ ಜಾಗಕ್ಕೆ ಕೆ.ಎಲ್. ರಾಹುಲ್ ವಿಕೆಟ್ ಕೀಪಿಂಗ್ ಮಾಡುತ್ತಾರೋ ಅಥವಾ ವೃದ್ದಿಮಾನ್ ಸಾಹ ಮಾಡುತ್ತಾರೋ ಅನ್ನೋದರ ಬಗ್ಗೆಯೂ ಚರ್ಚೆ ಶುರುವಾಗಿದೆ.
ಏತನ್ಮಧ್ಯೆ, ಟೀಮ್ ಇಂಡಿಯಾದ ಆಟಗಾರರಿಗೆ ಜುಲೈ 10ರಂದು ಕೋವಿಡ್ ಟೆಸ್ಟ್ ನಡೆಸಲಾಗಿತ್ತು. ಈ ಟೆಸ್ಟ್ ನಲ್ಲಿ ರಿಷಬ್ ಪಂತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಬಳಿಕ ಜುಲೈ 14ರಂದು ಎರಡನೇ ಬಾರಿ ಕೋವಿಡ್ ಟೆಸ್ಟ್ ನಡೆಸಿದ್ದು, ಅದರ ಫಲಿತಾಂಶ ಇನ್ನೂ ಬಂದಿಲ್ಲ. ಜುಲೈ 20ರಿಂದ ಟೀಮ್ ಇಂಡಿಯಾ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ಒಟ್ಟು ಎರಡು ಅಭ್ಯಾಸ ಪಂದ್ಯಗಳನ್ನು ಆಡಿದ ನಂತರ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ.
ಒಟ್ಟಿನಲ್ಲಿ ರಿಷಬ್ ಪಂತ್ ಕೋವಿಡ್ ಸೋಂಕು ಪತ್ತೆಯಾಗಿರುವುದಕ್ಕೆ ಮೇಲ್ನೋಟಕ್ಕೆ ಯೂರೋ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಭಾಗಿಯಾಗಿರೋದು ಒಂದು ನೆಪ ಅಷ್ಟೇ. ಏನೇ ಆದ್ರೂ ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕವಾಗಿ ರಿಷಬ್ ಪಂತ್ ಸುತ್ತಾಟ ನಡೆಸಿರುವುದು ಸರಿಯಲ್ಲ..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd