Rishabh Pant: ಸತತ ಅವಕಾಶ ಕೊಟ್ಟರು T20 ಗೆ ಸರಿಹೊಂದುತ್ತಿಲ್ಲವೇಕೆ ಪಂಥ್…
ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗಳ ಸೋಲಿನ ನಂತರ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಸರಣಿಯಲ್ಲಿ, ಭಾರತ ಮೂರು ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಮೂಲಕ ಭಾರತ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
3 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಭಾರತ ಎರಡನೇ ಪಂದ್ಯದಲ್ಲಿ ಗೆದ್ದಿತ್ತು. ಮೂರನೇ ಟಿ20 ಪಂದ್ಯ ಮಳೆಯಿಂದ ಟೈ ಆಗಿದೆ.
ಆದರೆ, ವಿಶ್ವಕಪ್‌ನಲ್ಲೂ ತಲೆನೋವಾಗಿದ್ದ ಒಂದು ಸಮಸ್ಯೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಪರಿಹಾರವಾಗಿರಲಿಲ್ಲ. ಈ ಸಮಸ್ಯೆಯು ವಿಶ್ವಕಪ್‌ಗಿಂತಲೂ ಹಳೆಯದಾಗಿದೆ ಮತ್ತು ಬಹಳ ಸಮಯದಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ನಿರಾಶೆಗೊಳಿಸಿದೆ. ಈ ಸಮಸ್ಯೆಯ ಹೆಸರು ರಿಷಬ್ ಪಂತ್.
ಟೆಸ್ಟ್ ಕ್ರಿಕೆಟ್‌ನ ಮ್ಯಾಚ್ ವಿನ್ನರ್ ಪಂತ್‌ಗೆ ಟಿ20 ಮಾದರಿಯಲ್ಲಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ರಿಷಬ್ ಪಂತ್ ಇದುವರೆಗೆ 8 ದೇಶಗಳಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇವುಗಳಲ್ಲಿ, ವೆಸ್ಟ್ ಇಂಡೀಸ್ ಹೊರತುಪಡಿಸಿ ಬೇರೆ ಯಾವುದೇ ದೇಶದಲ್ಲಿ ಸರಾಸರಿ ಉತ್ತಮವಾಗಿಲ್ಲ. ವೆಸ್ಟ್ ಇಂಡೀಸ್ ನಲ್ಲಿ 58ರ ಸರಾಸರಿಯಲ್ಲಿ 174 ರನ್ ಗಳಿಸಿದ್ದಾರೆ. ಅವರು ಆಸ್ಟ್ರೇಲಿಯಾದಲ್ಲಿ 7.25, ಇಂಗ್ಲೆಂಡ್‌ನಲ್ಲಿ 13.50, ಶ್ರೀಲಂಕಾದಲ್ಲಿ 15 ಮತ್ತು ಭಾರತದಲ್ಲಿ 20 ಸರಾಸರಿ ಹೊಂದಿದ್ದಾರೆ. ಪಂತ್ ಅಮೆರಿಕದಲ್ಲಿ 16, ನ್ಯೂಜಿಲೆಂಡ್‌ನಲ್ಲಿ 22 ಮತ್ತು ಯುಎಇಯಲ್ಲಿ 32 ಸರಾಸರಿಯಲ್ಲಿ ಸ್ಕೋರ್ ಮಾಡಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಸತತ ವೈಫಲ್ಯದ ನಂತರ, ಪಂತ್‌ಗೆ ಆರಂಭಿಕರಾಗಿ ಅನೇಕ ಅವಕಾಶ ನೀಡಲಾಯಿತು.. ಆದರೆ ಅವರು ಈ ಅವಕಾಶವನ್ನೂ ಸಹ ಕೈ ಚೆಲ್ಲಿದ್ದಾರೆ. ಪಂತ್ ಇದುವರೆಗೆ 5 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆರಂಭಿಕರಾಗಿ 14.20 ಸರಾಸರಿಯಲ್ಲಿ ಕೇವಲ 71 ರನ್ ಗಳಿಸಿದ್ದಾರೆ. ಇದೇ ರೀತಿ ನಂಬರ್-3ರಲ್ಲೂ ಅದ್ಭುತವಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಅವರನ್ನು 6 ಬಾರಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಲಾಯಿತು. ಇದರಲ್ಲಿ 29.25ರ ಸರಾಸರಿಯಲ್ಲಿ 117 ರನ್ ಗಳಿಸಲಷ್ಟೇ ಶಕ್ತರಾದರು.
ಒಂದೆಡೆ ಸತತ ಸೋಲುಗಳ ನಡುವೆಯೂ ರಿಷಬ್ ಪಂತ್ ಅವಕಾಶಗಳನ್ನು ಪಡೆಯುತ್ತಿದ್ದರೆ, ಮತ್ತೊಂದೆಡೆ ಸಂಜು ಸ್ಯಾಮ್ಸನ್ ಬೆಂಚ್ ಮೇಲೆ ಕುಳಿತುಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಗಾಗಿ ಸ್ಯಾಮ್ಸನ್ ಅವರನ್ನು ತಂಡದಲ್ಲಿ ಇರಿಸಲಾಗಿತ್ತು, ಆದರೆ ಅವರಿಗೆ ಒಂದೇ ಒಂದು ಪಂದ್ಯದಲ್ಲೂ ಅವಕಾಶ ಸಿಗಲಿಲ್ಲ.
Rishabh Pant: Why Pant is not fit for T20 given consecutive chances…