Rishi Dhawan : ಟೀಂ ಇಂಡಿಯಾಗೆ ವಾಪಸ್ ಆಗೋದೆ ನನ್ನ ಟಾರ್ಗೆಟ್..!

1 min read
rishi-dhawan-my-aim get-back-national-team saaksha tv

rishi-dhawan-my-aim get-back-national-team saaksha tv

Rishi Dhawan : ಟೀಂ ಇಂಡಿಯಾಗೆ ವಾಪಸ್ ಆಗೋದೆ ನನ್ನ ಟಾರ್ಗೆಟ್..!

ಪಂಜಾಬ್ ಕಿಂಗ್ಸ್ ಆಲ್ ರೌಂಡರ್ ರಿಷಿ ಧವನ್ ಟೀಂ ಇಂಡಿಯಾಗೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ರಿಷಿ ಧವನ್ ಬ್ಯಾಟ್ ಹಾಗೂ ಬೌಲಿಂಗ್ ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.

ಧವನ್ ಈ ವರ್ಷ ಮೊದಲ ಬಾರಿಗೆ ಹಿಮಾಚಲ ಪ್ರದೇಶಕ್ಕೆ ವಿಜಯ್ ಹಜಾರೆ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದಾರೆ.

ಐದು ವರ್ಷಗಳ ನಂತರ ಐಪಿಎಲ್ ಪ್ರವೇಶಿಸಿದ ಧವನ್ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿಸಿದೆ.

ಈ ಋತುವಿನಲ್ಲಿ, ಧವನ್ ಓಕೆ ಎನ್ನುವಂತೆ ಪ್ರದರ್ಶನ ನೀಡಿದ್ದಾರೆ. ಇದುವರೆಗೆ ಮೂರು ಪಂದ್ಯಗಳನ್ನಾಡಿರುವ ಧವನ್ ನಾಲ್ಕು ವಿಕೆಟ್ ಪಡೆದಿದ್ದಾರೆ. 

rishi-dhawan-my-aim get-back-national-team saaksha tv
rishi-dhawan-my-aim get-back-national-team saaksha tv

ನಾನು ತಂಡದಲ್ಲಿ ಹಿರಿಯ ಆಟಗಾರ. ಭಾರತ ತಂಡಕ್ಕೆ ಮರಳಿ ಬಂದು ಅತ್ಯುತ್ತಮ ಪ್ರದರ್ಶನ ನೀಡುವುದು ನನ್ನ ಗುರಿಯಾಗಿದೆ.

ಐಪಿಎಲ್‌ ನಂತಹ ಮೆಗಾ ಟೂರ್ನಮೆಂಟ್‌ ಗಳಲ್ಲಿ ಮಿಂಚುವುದು ತುಂಬಾ ಕಷ್ಟ. ಆದರೆ ಕೋಚ್‌ ಪರಿಸ್ಥಿತಿಗೆ ಅನುಗುಣವಾಗಿ ಬೌಲಿಂಗ್ ಮಾಡಲು ಹೇಳಿದ್ದಾರೆ.

ಇದು ನನಗೆ ತುಂಬಾ ಸಹಾಯ ಮಾಡಿದೆ. ನಾನು ಕಗಿಸೊ ರಬಾಡ ಅವರಿಂದ ಬಹಳಷ್ಟು ಕಲಿತಿದ್ದೇನೆ.

ಅವರು ನನ್ನ ಸಾಮರ್ಥ್ಯದ ಮೇಲೆ ಕೇಂದ್ರೀಕರಿಸಲು ಹೇಳಿದ್ದು, ಅದು ನನಗೆ ಸಹಾಯಕಾರಿಯಾಗಿದೆ ಎಂದಿದ್ದಾರೆ ಧವನ್.

 ಧವನ್ ಟೀಂ ಇಂಡಿಯಾದ ಪರ ಮೂರು ODI ಮತ್ತು ಕೇವಲ ಒಂದು T20I ಆಡಿದ್ದಾರೆ.rishi-dhawan-my-aim get-back-national-team

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd