ಮಂಡ್ಯ: ಮದುವೆ ಕಾರ್ಯಕ್ರಮ ಮುಗಿಸಿ ರಾತ್ರಿ ವೇಳೆ ಮನೆಗೆ ಬೈಕ್ನಲ್ಲಿ ಬರುತ್ತಿದ್ದಾಗ ಹಂಪ್ಸ್ ಕಾಣಿಸದೇ ತಾಯಿ ಕೈಯಲ್ಲಿದ್ದ ಒಂದು ವರ್ಷದ ಮಗು ಜಾರಿ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.
ನಿನ್ನೆ ಸಂಜೆ ಮಂಡ್ಯದ ಬೇವಿನಹಳ್ಳಿಯಲ್ಲಿ ನಡೆಯುತ್ತಿದ್ದ ಸಂಬಂಧಿಕರೊಬ್ಬರ ಮದುವೆಗೆ ಮಂಡ್ಯದ ಚಂದಗಾಲು ಗ್ರಾಮದ ಶಿವಕುಮಾರ್ ಮತ್ತು ರಂಜಿತಾ ದಂಪತಿ ತಮ್ಮ 1 ವರ್ಷದ ಹೆಣ್ಣು ಮಗುವಿನೊಂದಿಗೆ ಬೈಕ್ನಲ್ಲಿ ತೆರಳಿದ್ದರು. ಮದುವೆ ಮುಗಿಸಿ ಮನೆಗೆ ವಾಪಸ್ಸು ಬರುವಾಗ ರಾತ್ರಿ ಆಗಿತ್ತು. ಬೈಕ್ ಕಿರಗಂದೂರು ಬಳಿ ಬರುತ್ತಿದ್ದಾಗ ರೋಡ್ ಹಂಪ್ ಕಾಣಿಸದೆ ಪತಿ ವೇಗವಾಗ ಬೈಕ್ ಚಲಾಯಿಸಿದ್ದಾರೆ. ಈ ವೇಳೆ ಬೈಕ್ನ ಹಿಂಬದಿ ಶಿವಕುಮಾರ್ ಪತ್ನಿ ರಂಜಿತಾ ಒಂದು ವರ್ಷದ ಮಗುವನ್ನು ತೊಡೆ ಮೇಲೆ ಕೂರಿಸಿಕೊಂಡಿದ್ದರು. ಹಂಪ್ಸ್ ಜಂಪ್ ಮಾಡಿದ ರಭಸಕ್ಕೆ ಪತ್ನಿ ಕೈಲಿದ್ದ ಚಿಕ್ಕ ಮಗು ಕೆಳಗೆ ಬಿದ್ದಿದೆ.
ತಲೆಗೆ ತೀವ್ರ ಪೆಟ್ಟು ಬಿದ್ದ ಮಗುವನ್ನು ಪೋಷಕರು ತಕ್ಷಣವೇ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಮಗು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. ಇದ್ದ ಒಂದು ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಕುಟುಂಬದಲ್ಲಿ ಶೋಕಸಾಗರ ಮನೆ ಮಾಡಿದೆ.
ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ತಿಂಗಳು ಮಂಡ್ಯದಲ್ಲಿ ಪೋಷಕರ ನಿರ್ಲಕ್ಷ್ಯದಿಂದ ಎರಡಂತಸ್ತಿನ ಕಟ್ಟಡದ ಮೇಲಿಂದ ಬಿದ್ದು 2 ವರ್ಷದ ಮುದ್ದಾದ ಹೆಣ್ಣು ಮಗು ಸಾವಿಗೀಡಾಗಿತ್ತು. ಆ ಘಟನೆ ಮಾಸುವ ಮುನ್ನವೇ ಬೈಕ್ ಮೇಲಿಂದ ಬಿದ್ದು ಮತ್ತೊಂದು ಮಗು ಉಸಿರು ಚೆಲ್ಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel