‘ರಾಬರ್ಟ್’ ಸಕ್ಸಸ್ ಸಂಭ್ರಮದಲ್ಲಿ ‘ಮದಗಗಜ’ ನಿರ್ದೇಶಕನಿಗೆ ಕಾರ್ ಗಿಫ್ಟ್ ಕೊಟ್ಟ ಉಮಾಪತಿ..!
ಈಗಾಗಲೇ ಥಿಯೇಟರ್ ಗಳಲ್ಲಿ ಅಬ್ಬರಿಸುತ್ತಿರಯವ ರಾಬರ್ಟ್ ಹಾಗೂ ಮುಂದೆ ರಿಲೀಸ್ ಆಗಲಿರುವ ಸ್ಯಾಮಡಲ್ ವುಡ್ ನ ಬಹುನಿರೀಕ್ಷೆಯ ಮದಗಜ ಸಿನಿಮಾಗಳ ನಿರ್ಮಾಪಕರಾಗಿರುವ ಉಮಾಪತಿ ಶ್ರೀನಿವಾಸ್ ಅವರು ನಿರ್ದೇಶಕ ಮಹೇಶ್ ಕುಮಾರ್ ಗೆ ದುಬಾರಿ ಗಿಫ್ಟ್ ಕೊಟ್ಟಿದ್ದಾರೆ.
ಅಂದ್ಹಾಗೆ ಮಹೇಶ್ ಕುಮಾರ್ ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಮದಗಜ ಸಿನಿಮಾದ ನಿರ್ದೇಶಕ ಎಂಬ ವಿಚಾರ ಎಲ್ರಿಗೂ ಗೊತ್ತೇ ಇದೆ. ಇದೀಗ ಸಿನಿಮಾದ ನಿರ್ದೇಶಕನಿಗೆ ಸಿನಿಮಾದ ನಿರ್ಮಾಪಕರು ದುಬಾರಿ ಬೆಲೆ ಕಾರ್ ಗಿಫ್ಟ್ ಕೊಟ್ಟು ಗಮನ ಸೆಳೆದಿದ್ದಾರೆ.
ಕಾರ್ ಉಡುಗರೆ ಪಡೆದ ಬಳಿಕ ಈ ಫೋಟೋವನ್ನು ಮಹೇಶ್ ಕುಮಾರ್ ತಮ್ಮ ಫೇಸ್ ಬುಕ್ ನಲ್ಲಿ ಖಾತೆಯಲ್ಲಿ ಪೋಸ್ಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ‘ನನಗೆ ಉಮಾಪತಿ ಅವರಿಂದ ಸಿಕ್ಕ ಸರ್ಪ್ರೈಸ್ ಕಾರು’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಅಷ್ಟೇ ಅಲ್ಲ ಇನ್ಸ್ಟಾಗ್ರಾಂನಲ್ಲೂ ಈ ಪೋಟೋ ಶೇರ್ ಮಾಡಿಕೊಂಡಿರುವ ಮಹೇಶ್ ‘ನನ್ನ ಜೀವನದ ಮೊದಲ “ಕಾರ್” ಅನ್ನು ಉಡುಗೊರೆಯಾಗಿ ನೀಡಿದ ನನ್ನ ಪ್ರೀತಿಯ ನಿರ್ಮಾಪಕರಾದ “ಉಮಾಪತಿ ಶ್ರೀನಿವಾಸ್ ಗೌಡ”ಸರ್ ಅವರಿಗೆ ಶತಕೋಟಿ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.
ಅಂದ್ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾಗೆ ಬೆಂಬಲ , ಸಹಕಾರ ನೀಡಿದ ಮಹೇಶ್ ಅವರಿಗೆ ಕಾರ್ ಗಿಫ್ಟ್ ಮಾಡುವ ಮೂಲಕ ಉಮಾಪತಿ ಶ್ರೀನಿವಾಸ್ ಅವರು ಕೃತಜ್ಞತೆಗಳನ್ನ ಸಲ್ಲಿಸಿದ್ದಾರೆ.
ಸುಂದರ ಪತ್ನಿ ಇರುವ ಗುಡ್ ಫಾರ್ ನಥಿಂಗ್ ವ್ಯಕ್ತಿ ಎಂಬ ಟ್ರೋಲ್ ಗೆ ಅಭಿಷೇಕ್ ಬಚ್ಚನ್ ನಿಂದ ಕ್ಲಾಸಿ ರಿಪ್ಲೈ !
ತಮಿಳು ನಟ ವಿರುಚಗಕಾಂತ್ ಬಾಬು ಚೆನ್ನೈನ ಆಟೋರಿಕ್ಷಾದಲ್ಲಿ ಶವವಾಗಿ ಪತ್ತೆ