ಪ್ರಭಾಸ್ ವಿರುದ್ಧ ರಾಕಿಂಗ್ ಸ್ಟಾರ್ ಫ್ಯಾನ್ಸ್ ಗರಂ : ಯಾಕೆ..?

1 min read

ಪ್ರಭಾಸ್ ವಿರುದ್ಧ ರಾಕಿಂಗ್ ಸ್ಟಾರ್ ಫ್ಯಾನ್ಸ್ ಗರಂ : ಯಾಕೆ..?

ಕಿಂಗ್ ಮೇಕರ್ ಪ್ರಶಾಂತ್ ನೀಲ್ ಮತ್ತು ಬಾಹುಬಲಿ ಪ್ರಬಾಸ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಹೈ ವೋಲ್ಟೇಜ್ ಸಿನಿಮಾ , ಪ್ಯಾನ್ ಇಂಡಿಯಾ ಸಿನಿಮಾ ಸಲಾರ್. ಈ ಸಿನಿಮಾದ ಮೂಹೂರ್ತ ಕಾರ್ಯಕ್ರಮ ನಿನ್ನೆ ಹೈದ್ರಾಬಾದ್ ನಲ್ಲಿ ಅದ್ಧೂರಿಯಾಗಿ ನೆರವೇರಿದೆ.  ವಿಶೇಷ ಎಂದ್ರೆ ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಆಗಮಿಸಿದ್ದರು. ಅಲ್ಲದೇ ಪ್ರಭಾಸ್ ಹಾಗೂ ಯಶ್ ಜೊತೆಯಾಗಿರೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿದ್ದು, ಇಬ್ಬರೂ ಬಿಗ್ ಸ್ಟಾರ್ ಗಳನ್ನ ಒಟ್ಟಿಗೆ ನೋಡಿದ್ದ ಅಭಿಮಾನಿಗಳು ಥ್ರಿಲ್ ಆಗಿದ್ರು. ಆದ್ರೆ ಇದೀಗ ಪ್ರಭಾಸ್ ವಿರುದ್ಧ ರಾಕಿ ಭಾಯ್ ಅಭಿಮಾನಿಗಳು ಗರಂ ಆಗಿದ್ದಾರೆ.

ಹೌದು … ಪ್ರಭಾಸ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪೋಸ್ಟ್ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಪ್ರಬಾಸ್ ಅವರು ಸಲಾರ್ ಸಿನಿಮಾದ ಮುಹೂರ್ತ ಕಾರ್ಯಕ್ರಮದ  ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ ಪ್ರಭಾಸ್ ಶೇರ್ ಮಾಡಿಕೊಂಡಿರುವ ಯಾವ ಫೋಟೋಗಳಲ್ಲು ಯಶ್ ಇಲ್ಲದೇ ಇರೋದು ಯಶ್ ಅಭಿಮಾನಿಗಳ ಆಕ್ರೋಶಕ್ಕೆ  ಗುರಿಯಾಗಿದೆ.

ಸಲಾರ್ ಮುಹೂರ್ತ : ‘ಬಾಹುಬಲಿ’ ಜೊತೆ ರಾಖಿಭಾಯ್..!

ಫೇಸ್‌ಬುಕ್ ಖಾತೆಯಲ್ಲಿ ಪ್ರಭಾಸ್ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಒಂದರಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ತಾವು ಇರುವುದು, ಇನ್ನೊಂದರಲ್ಲಿ ಪ್ರಭಾಸ್, ಪ್ರಶಾಂತ್ ಹಾಗೂ ವಿಜಯ್ ಕಿರಗಂದೂರ್ ಇರುವ ಫೋಟೋ ಶೇರ್ ಮಾಡಿದ್ದಾರೆ. ಯಶ್ ಅವರ ಜೊತೆಗೆ ಪ್ರಭಾಸ್ ಫೋಟೋಗಳು ಸಹ ವೈರಲ್ ಆಗಿತ್ತು. ಆದರೂ ಯಶ್ ಜೊತೆಗಿನ ಫೋಟೋವನ್ನು ಪ್ರಭಾಸ್ ಏಕೆ ಪೋಸ್ಟ್ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನೂ ಕನ್ನಡದ  ಬಿಗ್ ಸ್ಟಾರ್ ನಟ ಯಶ್ ಅವರು ಸಲಾರ್ ಚಿತ್ರದ ಮುಹೂರ್ತಕ್ಕೆ ಬಂದಿದ್ದಾರೆ ಎನ್ನುವುದು ದೊಡ್ಡ ಸುದ್ದಿಯೇ. ಯಶ್ ಜೊತೆಗೆ ಇರುವ ಸೋಲೋ ಫೋಟೋ ಮಾತ್ರವಲ್ಲ, ಗ್ರೂಫ್ ಫೋಟೋ ಆದರೂ ಹಾಕಬಹುದಿತ್ತು. ಅನನ್ನೋದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅಲ್ಲದೇ ಯಶ್ ಫೋಟೋ ಯಾಕೆ ಹಾಕಿಲ್ಲ. ಯಶ್ ಫೋಟೋಗಳು ಎಲ್ಲಿ ಎಂದು ಪ್ರಭಾಸ್ ಪೋಸ್ಟ್ ಗೆ ಕಮೆಂಟ್ ಗಳನ್ನ ಮಾಡುತ್ತಾ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ ನೆಟ್ಟಿಗರು.

ಅಲ್ಲದೇ ಏಣಿ ಹತ್ತುವ ಮುನ್ನವೇ ಹತ್ತಲು ನೆರವಾಗುವ ಏಣಿಯನ್ನೇ ಕಾಲಿನಲ್ಲಿ ಒದ್ರಾ ಪ್ರಬಾಸ್, ಸಲಾರ್ ಸಿನಿಮಾ ಪ್ರಭಾಸ್ ಗೆ ದಕ್ಕಲು ನೇರವಾಗೋ ಪರೋಕ್ಷವಾಗೋ ಯಶ್ ಸಹ ಕಾರಣ. ಆದ್ರೆ ಅದನ್ನ ಪ್ರಬಾಸ್ ಮರೆತಂತೆ ಕಾಣುಂತೆ ಅಂತೆಲ್ಲಾ ಕಮೆಂಟ್ ಗಳ ಮೂಲಕ ಯಶ್ ಅಭಿಮಾನಿಗಳು ಪ್ರಭಾಸ್ ಅವರ ಪೋಸ್ಟ್ ವಿರುದ್ಧ ಕಿಡಿ ಕಾರ್ತಾಯಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd