‘ಬ್ರಹ್ಮಾಸ್ತ್ರ ಭಾಗ 2’ ರಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆ ? ನಿರ್ಮಾಪಕರು ಹೇಳಿದ್ದೇನು ?
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ‘ಬ್ರಹ್ಮಾಸ್ತ್ರ’ ಚಿತ್ರದ ಎರಡನೇ ಭಾಗ ಶೀಘ್ರದಲ್ಲೇ ಬರಲಿದೆ ಎನ್ನಲಾಗಿದೆ. ಇದಕ್ಕಾಗಿ ನಮ್ಮ ಕೆಜಿಎಫ್ ಸ್ಟಾರ್ ಯಶ್ ಗೆ ಅಪ್ರೋಚ್ ಮಾಡಲಾಗಿದೆ ಎನ್ನುವ ಗಾಸಿಪ್ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ. ‘ಬ್ರಹ್ಮಾಸ್ತ್ರ ಭಾಗ 2’ ಚಿತ್ರದಲ್ಲಿ ದೇವ್ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ.
ಆದರೇ ಇದೆಲ್ಲ ಸುಳ್ಳು ಎಂದಿದ್ದಾರೆ ಕರಣ್ ಜೋಹಾರ್ “’ಇದೆಲ್ಲ ನಾನ್ ಸೆನ್ಸ್. ನಾವು ಯಾರನ್ನೂ ಸಂಪರ್ಕಿಸಿಲ್ಲ” ಎಂದು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
‘ಬ್ರಹ್ಮಾಸ್ತ್ರ 2’ ಚಿತ್ರದಲ್ಲಿ ರಣಬೀರ್ ಕಪೂರ್ ಪಾತ್ರಧಾರಿ ಶಿವ ದೇವ್ ಗೆ ನೇರ ಪೈಪೋಟಿ ನೀಡಲಿದ್ದಾರೆ ಎಂಬುದು ‘ಬ್ರಹ್ಮಾಸ್ತ್ರ’ ನೋಡಿದವರಿಗೆ ಸ್ಪಷ್ಟವಾಗಿದೆ. ದೇವ್ ಚಿತ್ರದ ಪ್ರಮುಖ ಪಾತ್ರ. ಈ ಕಾರಣಕ್ಕಾಗಿ ನಿರ್ಮಾಪಕರು ಬಾಲಿವುಡ್ನಿಂದ ಟಾಲಿವುಡ್ ವರೆಗೆ ಹುಡುಕುತ್ತಿದ್ದಾರೆ.
ಇಲ್ಲಿಯವರೆಗೆ ಹೃತಿಕ್ ರೋಷನ್, ರಣವೀರ್ ಸಿಂಗ್, ಶಾರುಖ್ ಖಾನ್ ಅವರಂತಹ ಅನೇಕ ಸೆಲೆಬ್ರಿಟಿಗಳ ಹೆಸರುಗಳು ‘ಬ್ರಹ್ಮಾಸ್ತ್ರ 2’ ನಲ್ಲಿ ದೇವ್ ಪಾತ್ರಕ್ಕಾಗಿ ಕೇಳಿಬಂದಿವೆ ಆದರೇ ನಿರ್ಮಾಪಕರು ಯಾವುದನ್ನೂ ಇನ್ನೂ ಕನ್ಫರ್ಮ್ ಮಾಡಿಲ್ಲ..
‘ಬ್ರಹ್ಮಾಸ್ತ್ರ’ ಚಿತ್ರವನ್ನು ಅಯನ್ ಮುಖರ್ಜಿ ನಿರ್ದೇಶಿಸಿದ್ದಾರೆ. ರಣಬೀರ್ ಮತ್ತು ಆಲಿಯಾ ಅಲ್ಲದೆ, ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಮೌನಿ ರಾಯ್, ಡಿಂಪಲ್ ಕಪಾಡಿಯಾ ಮತ್ತು ನಾಗಾರ್ಜುನ ಅಕ್ಕಿನೇನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಇದುವರೆಗೆ 416 ಕೋಟಿಗೂ ಹೆಚ್ಚು ಗಳಿಸಿದೆ.
Rocking star Yash to act in ‘Brahmastra Part 2’? What did the producers say?