ರಿಲ್ಯಾಕ್ಸ್ ಮೂಡ್ ನಲ್ಲಿ ರಾಕಿ ಬಾಯ್, ಮಕ್ಕಳೊಂದಿಗೆ ಟೈಗರ್ ಆಟ…
ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್ 2 ಭರ್ಜರಿ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಸಿನಿಮಾ ಸಕ್ಸಸ್ ನ ಖುಷಿಯೊಂದಿಗೆ ರಿಲ್ಯಾಕ್ಸ್ ಮೂಡ್ ನಲ್ಲಿರುವ ಯಶ್ ಇದೀಗ ಮನೆಯಲ್ಲಿ ಮಕ್ಕಳ ಜೊತೆಯಲ್ಲಿ ಅರಾಮವಾಗಿ ಕಾಲಕಳೆಯುತ್ತಿದ್ದಾರೆ.
ಮಕ್ಕಳಾದ ಐರಾ ಮತ್ತು ಯಥರ್ವ ಜೊತೆ ಸೇರಿಕೊಂಡು ಸಂತಸದಿಂದ ನಲಿಯುತ್ತಿದ್ದಾರೆ. ಈ ಸಂತಸದ ಸಮಯದ ವಿಡಿಯೋವನ್ನು ಯಶ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.
ಯಶ್ ಹಂಚಿಕೊಂಡಿರುವ ವೀಡಿಯೋದಲ್ಲಿ ತಮ್ಮ ಮುದ್ದು ಮಕ್ಕಳಾದ ಐರಾ ಮತ್ತು ಯಥರ್ವ ಆಟವಾಡುತ್ತಿದ್ದಾರೆ. ಯಥರ್ವ ತಂದೆಗೆ ಐ ಲವ್ ಯೂ ಹೇಳಿ ನಾನು ದೈತ್ಯ ಡೈನೋಸಾರ್ ಎಂದು ಕಿರುಚುತ್ತಾನೆ. ಆಗ ಹೆದರಿದಂತೆ ನಟಿಸುವ ಯಶ್ ,ನಾನು ಈಗ ಹುಲಿಯಾಗುವುದನ್ನು ನೋಡು ಎಂದು ಹುಲಿ ರೀತಿ ಘರ್ಜಿಸಿದಾಗ ಯಥರ್ವ ಅಲ್ಲಿಂದ ಹೆದರಿ ಓಡಿ ಹೋಗುತ್ತಾನೆ. ಬಳಿಕ ಅಲ್ಲಿಯೇ ಇದ್ದ ಮಗಳನ್ನು ತಬ್ಬಿಕೊಂಡ ಯಶ್ ಗಣೇಶಾ ಓಡಿ ಹೋದ ಮಗಳೇ ಎಂದು ಮುದ್ದಾಡುತ್ತಾರೆ.
ಇನ್ನು, ಕೆಲ ದಿನಗಳ ಹಿಂದೆಯಷ್ಟೇ ಯಶ್ ಮಗಳ ಐರಾ ಅವಳ ಕ್ಯೂಟ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು, ಅದರಲ್ಲಿ ಐರಾ ಅಪ್ಪನಿಗೆ ರಾಕ್ ರಾಕ್ ರಾಕಿ, ಕಮಾನ್ ರಾಕಿ ಬಾಯ್ ಎಂದು ಕ್ಯೂಟ್ ಆಗಿ ಹೇಳಿರುವ ವಿಡಿಯೋವನ್ನು ಯಶ್ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದರು. ಇದು ಸಹ ಸಖತ್ ವೈರಲ್ ಆಗಿತ್ತು