ಫ್ರೆಂಚ್ ಓಪನ್ 2021 -ಮೂರನೇ ಸುತ್ತಿಗೆ ಸುಸ್ತಾದ ಫೆಡರರ್.. ಟೂರ್ನಿಯಿಂದ ಹೊರನಡೆದ ಟೆನಿಸ್ ಮಾಸ್ಟರ್..!

1 min read
Roger Federer french open saakshatv

ಫ್ರೆಂಚ್ ಓಪನ್ 2021 -ಮೂರನೇ ಸುತ್ತಿಗೆ ಸುಸ್ತಾದ ಫೆಡರರ್.. ಟೂರ್ನಿಯಿಂದ ಹೊರನಡೆದ ಟೆನಿಸ್ ಮಾಸ್ಟರ್..!

Roger Federer  french open saakshatvರೋಜರ್ ಫೆಡರರ್.. ವಯಸ್ಸು 40.. ಆದ್ರೂ ಟೆನಿಸ್ ಅಂಗಣದಲ್ಲಿ ಇಂದಿಗೂ ಯುವಕ. ಮಿಂಚಿನ ಸರ್ವ್, ಅದ್ಭುತವಾದ ಆಟ… ಹದಿಹರೆಯದ ಫಿಟ್ ನೆಸ್.. ತಾಳ್ಮೆ, ಬದ್ದತೆಯ ಜೊತೆಗೆ ಅನುಭವದ ಆಟದ ಮುಂದೆ ಎಂಥಾ ಪ್ರತಿಸ್ಪರ್ಧಿಯಾದ್ರೂ ಕೂಡ ತಲೆಬಾಗಲೇಬೇಕು.. ಅಂತಹ ಮಾಂತ್ರಿಕತೆ ಸ್ವಿಜರ್ ಲೆಂಡ್ ನ ಆಟಗಾರ ರೋಜರ್ ಫೆಡರರ್ ನಲ್ಲಿದೆ.
2003ರ ವಿಂಬಲ್ಡನ್ ಪ್ರಸಸ್ತಿಯ ಮೂಲಕ ತನ್ನ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯ ಬೇಟೆಯನ್ನು ಶುರು ಮಾಡಿದ ರೋಜರ್ ಫೆಡರರ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ಮತ್ತು ಯುಎಸ್ ಓಪನ್ ನಲ್ಲಿ ಸಾಲು ಸಾಲು ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಫೆಡರರ್ 2010ರ ತನಕ ಗೆದ್ದಿರುವ ಪ್ರಶಸ್ತಿಗಳ ಸಂಖ್ಯೆ 16. ಆ ನಂತರ ಗೆದ್ದಿರುವುದು ಬರೀ ನಾಲ್ಕು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳು ಮಾತ್ರ. ಸದ್ಯ ರೋಜರ್ ಫೆಡರರ್ ಅವರ ಹೆಸರಿನಲ್ಲಿ ದಾಖಲೆಯ 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳಿವೆ. ಇವರ ಜೊತೆ ರಫೆಲ್ ನಡಾಲ್ ಕೂಡ ರೇಸ್ ನಲ್ಲಿದ್ದಾರೆ.
ಅಚ್ಚರಿಯಂದ್ರೆ ರೋಜರ್ ಫೆಡರರ್ ಆವೆ ಮಣ್ಣಿನ ಲ್ಲಿ ನಡೆಯುವ ಫ್ರೆಂಚ್ ಓಪನ್ ಪ್ರಶಸ್ತಿ ಇರೋದು ಒಂದು ಮಾತ್ರ. ಯಾಕೋ ಫ್ರೆಂಚ್ ಓಪನ್ ಟೂರ್ನಿಗೂ ರೋಜರ್ ಫೆಡರರ್ ಗೆ ಆಗಿ ಬರುತ್ತಿಲ್ಲ. ಹೀಗಾಗಿ ರೋಜರ್ ಫೆಡರರ್ ಫ್ರೆಂಚ್ ಓಪನ್ ಟೂರ್ನಿಯ ಕಡೆಗೆ ಹೆಚ್ಚು ಗಮನ ಕೂಡ ಹರಿಸುತ್ತಿಲ್ಲ. ಇದೀಗ 2021ರ ಫ್ರೆಂಚ್ ಓಪನ್ ಟೂರ್ನಿಯ ಮೂರನೇ ಸುತ್ತಿನ ಪಂದ್ಯದ ಬಳಿಕ ಫೆಡರರ್ ಅವರು ಟೂರ್ನಿಯಿಂದ ಹೊರನಡೆದಿದ್ದಾರೆ.
Roger Federer  french open saakshatvಅಂದ ಹಾಗೇ, ರೋಜರ್ ಫೆಡರರ್ ಅವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆರು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. 2004, 2006, 2007, 2010, 2017 ಮತ್ತು 2018ರಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.
ಹಾಗೇ ಫ್ರೆಂಚ್ ಓಪನ್ ಟೂರ್ನಿಯಲ್ಲಿ 2009ರಲ್ಲಿ ಒಂದು ಬಾರಿ ಪ್ರಶಸ್ತಿ ಗೆದ್ದುಕೊಂಡು ಪ್ರತಿಷ್ಠಿತ ನಾಲ್ಕು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದ ಹಿರಿಮೆಗೂ ಪಾತ್ರರಾಗಿದ್ದರು.
ಇನ್ನು ವಿಂಬಲ್ಡನ್ ನಲ್ಲಿ ರೋಜರ್ ಫೆಡರರ್ ಅವರು ದಾಖಲೆಯ ಎಂಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 2003, 2004, 2005, 2006, 2007, 2009, 2012 ಮತ್ತು 2017ರಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.
ಹಾಗೇ ಯುಎಸ್ ಓಪನ್ ನಲ್ಲಿ 2004, 2005, 2006, 2007, 2008ರಲ್ಲಿ ಹೀಗೆ ಸತತ ಐದು ಬಾರಿ ಪ್ರಶಸ್ತಿ ಗೆದ್ದ ಗೌರವಕ್ಕೂ ಪಾತ್ರರಾಗಿದ್ದಾರೆ.
2018ರ ಯುಎಸ್ ಓಪನ್ ಪ್ರಶಸ್ತಿ ಗೆದ್ದ ಬಳಿಕ ರೋಜರ್ ಫೆಡರರ್ ಅವರು ಯಾವುದೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದಿಲ್ಲ. ಜಾಕೊವಿಕ್, ನಡಾಲ್ ಅವರ ಆರ್ಭಟದ ಮುಂದೆ ರೋಜರ್ ಫೆಡರರ್ ಸ್ವಲ್ಪ ಮಂಕಾದಂತೆ ಕಾಣುತ್ತಿದ್ದಾರೆ.
Roger Federer  french open saakshatvಇದೀಗ ರೋಜರ್ ಫೆಡರರ್ ಅವರ ಚಿತ್ತ ವಿಂಬಲ್ಡನ್ ಟೂರ್ನಿಯತ್ತ ಬಿದ್ದಿದೆ. ಹೀಗಾಗಿ ಆವೆ ಮಣ್ಣಿನ ಅಂಗಣದಿಂದ ಹಿಂದೆ ಸರಿದಿದ್ದಾರೆ. ದಾಖಲೆಯ 21ನೇ ಹಾಗೂ 9ನೇ ಬಾರಿ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಫ್ರೆಂಚ್ ಓಪನ್ ಕಣದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಹಾಗೇ, ನೋಡಿದ್ರೆ ರೋಜರ್ ಫೆಡರರ್ ಅವರು ಕಳೆದ 17 ತಿಂಗಳುಗಳಿಂದ ಟೆನಿಸ್ ನಿಂದ ದೂರವೇ ಉಳಿದಿದ್ದರು. ಮೊಣಕಾಲಿನ ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಮತ್ತೆ ಟೆನಿಸ್ ಅಂಗಣಕ್ಕಿಳಿದಿದ್ರು. ಆದ್ರೆ ಯಾಕೋ ಗೊತ್ತಿಲ್ಲ ನಾಲ್ಕನೇ ಸುತ್ತಿನ ಪಂದ್ಯಕ್ಕೆ ಮುನ್ನವೇ ರೊಜರ್ ಫೆಡರರ್ ಅವರು ಮನಸ್ಸು ಬದಲಾಯಿಸಿಕೊಂಡ್ರು.
ಜೂನ್ 28ರಿಂದ ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿ ನಡೆಯುತ್ತಿದೆ. ಹೀಗಾಗಿ ಆವೆ ಮಣ್ಣಿನ ಅಂಗಣದಲ್ಲಿ ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಲು ಫೆಡರರ್ ಸಿದ್ಧರಿಲ್ಲ. ಅದು ಅಲ್ಲದೆ, ಫ್ರೆಂಚ್ ಓಪನ್ ನಲ್ಲಿ Roger Federer frecnh open saakshatvಮುಂದಿನ ಹಂತಗಳಲ್ಲಿ ಜಾಕೊವಿಕ್, ನಡಾಲ್ ನಂತಹ ಆಟಗಾರರನ್ನು ಎದುರಿಸಬೇಕಾಗುತ್ತದೆ. ಇವರಿಬ್ಬರ ಜೊತೆ ಆಡುವಾಗ ಕಠಿಣ ಸವಾಲುಗಳಿರುತ್ತವೆ. ಇದ್ರಿಂದ ವಿಂಬಲ್ಡನ್ ಟೂರ್ನಿಗೆ ಅಡ್ಡಿಯಾಗಬಹುದು ಅನ್ನೋ ಮುಂದಾಲೋಚನೆಯಿಂದ ಫೆಡರರ್ ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು. ಅದೇ ರೀತಿ ತನ್ನ ವೃತ್ತಿ ಟೆನಿಸ್ ಬದುಕಿನಲ್ಲಿ ರೋಲ್ಯಾಂಡ್ ಗ್ಯಾರೋಸ್ ಯಾವತ್ತಿಗೂ ಕೂಡ ಅದೃಷ್ಟದ ತಾಣವಾಗಿಲ್ಲ. 2009ರಲ್ಲಿ ಜಿದ್ದಿಗೆ ಬಿದ್ದವರಂತೆ ಕಷ್ಟಪಟ್ಟು ಪ್ರಶಸ್ತಿ ಗೆದ್ದುಕೊಂಡಿದ್ದರು. ಹೀಗಾಗಿ ಫೆಡರರ್ ಅವರು ತನ್ನ ನೆಚ್ಚಿನ ಅಂಗಣವಾಗಿರುವ ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ದಾಖಲೆಯ ಪ್ರಶಸ್ತಿಯ ಮೇಲೆ ಚಿತ್ತವನ್ನಿಟ್ಟಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd