Rohini Sindhuri ರೋಹಿಣಿ ಸಿಂಧೂರಿ ಹಸುವಿನಂತಿರುವ ವ್ಯಾಘ್ರ : ಸಾ.ರಾ.ಮಹೇಶ್
ಮೈಸೂರು : ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ಮುಂದುವರೆಸಿದ್ದು, ರೋಹಿಣಿ ಸಿಂಧೂರಿಗೆ ತಾಯಿ ಹೃದಯ ಇಲ್ಲ, ಹಸುವಿನಂತಿರುವ ವ್ಯಾಘ್ರ ಮುಖದ ಅಧಿಕಾರಿ ಎಂದಿದ್ದಾರೆ.
ಭೂ ಮಾಫಿಯಾವನ್ನು ಬಯಲಿಗೆ ಎಳೆಯಲು ಹೋಗಿ ಟ್ರಾನ್ಸ್ ಫರ್ ಆಯ್ತು ಅನ್ನೋ ರೋಹಿಣಿ ಸಿಂಧೂರಿ ಹೇಳಿಕೆಗೆ ಕೆ.ಆರ್.ನಗರದಲ್ಲಿ ಸಾ.ರಾ.ಮಹೇಶ್ ಪ್ರತಿಕ್ರಿಯೆ ನೀಡುತ್ತಾ ಫುಲ್ ಗರಂ ಆದರು.
ಕಳೆದ ಎಂಟು ತಿಂಗಳಿನಿಂದ ಏನ್ ಮಾಡ್ತಾ ಇದ್ರಿ..? ಒತ್ತುವರಿ ಬಿಡಿಸಬೇಕಿತ್ತು. ಯಾರ್ಯಾರು ಒತ್ತುವರಿ ಮಾಡಿಕೊಂಡಿದ್ದಾರೆ ಅಂತ ಇವಾಗಲೂ ಗವರ್ನರ್ ರಿಪೋರ್ಟ್ ಕೊಡಿ ಎಂದರು.
ಇನ್ನು ಅವರು ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾಧಿಕಾರಿಯಾಗಿದ್ದರೆ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಒಂದು ಸಾವಿರ ಮಂದಿ ಪ್ರಾಣ ಉಳಿಯಬೇಕಿತ್ತು. ಹಳ್ಳಿಗಳಿಗೆ ಎಷ್ಟು ದಿವಸ ಹೋಗಿ ಸಮಸ್ಯೆ ಆಲಿಸಿದರು ಎಂದು ಸಾ.ರಾ.ಮಹೇಶ್ ಪ್ರಶ್ನಿಸಿದರು.









