ರೋಹಿತ್ ಶರ್ಮಾ ಪಾದ ಸ್ಪರ್ಶಿಸಿದ ಅಭಿಮಾನಿ..

1 min read
rohit-sharma saaksha tv

ರೋಹಿತ್ ಶರ್ಮಾ ಪಾದ ಸ್ಪರ್ಶಿಸಿದ ಅಭಿಮಾನಿ..

ರಾಂಚಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್‍ಗಳ ಜಯ ಸಾಧಿಸಿದೆ.

ಆದರೆ, ಈ ಪಂದ್ಯದಲ್ಲಿ ಕುತೂಹಲಕಾರಿ ದೃಶ್ಯವೊಂದು ನಡೆದಿದೆ. ನ್ಯೂಜಿಲೆಂಡ್ ಇನ್ನಿಂಗ್ಸ್‍ನಲ್ಲಿ ರೋಹಿತ್ ಶರ್ಮಾ ಅಭಿಮಾನಿಯೊಬ್ಬರು ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನಕ್ಕೆ ಪ್ರವೇಶಿಸಿದರು.

ಈ ವೇಳೆ ಅಭಿಮಾನಿ ಮಿಡ್‍ಫೀಲ್ಡ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರೋಹಿತ್ ಬಳಿ ಬಂದು ಆತನ ಕಾಲಿಗೆ ಬಿದ್ದಿದ್ದಾನೆ.

ತಕ್ಷಣ ಜಾಗೃತರಾದ ಭದ್ರತಾ ಸಿಬ್ಬಂದಿ ಆತನನ್ನು ಮೈದಾನದಿಂದ ಹೊರಗೆ ಕರೆದೊಯ್ದರು.

ಆದ್ರೆ ಅನೇಕ ಮಾಜಿ ಆಟಗಾರರು ಆಟಗಾರರ ಸುರಕ್ಷತೆಯ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ.

rohit-sharma saaksha tv

ಈ ಹಿಂದೆಯೂ ಸಾಕಷ್ಟು ಬಾರಿ ಅಭಿಮಾನಿಗಳು ಮೈದಾನಕ್ಕೆ ನುಗ್ಗಿದ್ದರು. ಇನ್ನು ಪಂದ್ಯದ ವಿಚಾರಕ್ಕೆ ಬಂದರೆ.. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್, ಗಪ್ಟಿಲ್ (31), ಡೇರಿಲ್ ಮಿಚೆಲ್ (31) ಮತ್ತು ಗ್ಲೆನ್ ಫಿಲಿಪ್ಸ್ (34) ಅವರ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 153 ರನ್ ಗಳಿಸಿತು.

ಬಳಿಕ ಈ ಗುರಿಯನ್ನ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ರಾಹುಲ್ (65) ಮತ್ತು ರೋಹಿತ್ (55) ಶತಕದ ಜತೆಯಾಟ ದಾಖಲಿಸಿದರು.

ಬಳಿಕ ವೆಂಕಟೇಶ್ ಅಯ್ಯರ್, ರಿಷಬ್ ಪಂತ್ ಪಂದ್ಯವನ್ನು ಮುಗಿಸಿದರು. ಇದರೊಂದಿಗೆ ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ಭಾರತ ಎರಡು ಪಂದ್ಯಗಳನ್ನು ಗೆದ್ದು ಸರಣಿ ಕೈ ವಶ ಮಾಡಿಕೊಂಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd