ಅಫ್ಘಾನ್ ಗೆಲುವಿಗೆ ಭಾರತ ಪ್ರಾರ್ಥನೆ – ಭಾರತಕ್ಕಿದೆ ಕೊನೆಯ ಚಾನ್ಸ್…
ಶ್ರೀಲಂಕಾ ವಿರುದ್ಧ ಸೋಲಿನ ಬಳಿಕ ಭಾರತ ಏಷ್ಯಾಕಪ್ ಫೈನಲ್ ನಿಂದ ಬಹುತೇಕ ಆಚೆ ಬಿದ್ದಿದೆ. ಬುಧವಾರ ಅಂದರೆ ಇಂದು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ಸೂಪರ್ 4 ಪಂದ್ಯವಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತನ್ನ ನೆರೆಯ ಪಾಕಿಸ್ತಾನವನ್ನ ಸೋಲಿಸುವುದು ಭಾರತಕ್ಕೆ ಅನಿವಾರ್ಯವಾಗಿದೆ. ಅಫ್ಘಾನ್ ನ ಗೆಲುವಿನ ಮೇಲೆ ಮಾತ್ರ ಭಾರತದ ಪೈನಲ್ ಕನಸು ಜೀವಂತವಾಗಿರಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ಭಾರತ ಫೈನಲ್ ರೇಸ್‌ನಿಂದ ಹೊರಗುಳಿಯಲಿದೆ. ಇಂದು ಅಫ್ಘಾನಿಸ್ತಾನ ಗೆದ್ದರೆ ಭಾರತಕ್ಕೆ ಯಾವುದೇ ನಷ್ಟವಿಲ್ಲ.
ಭಾರತ ತಂಡವೂ ಅಫ್ಘಾನಿಸ್ತಾನವನ್ನ ಸೋಲಿಸಬೇಕು ಅದೂ ಕೂಡ ಉತ್ತಮ ರನ್ ರೇಟ್‌ನೊಂದಿಗೆ. ಮೊದಲ ಸೂಪರ್ -4 ಪಂದ್ಯಗಳಲ್ಲಿ ಸೋತಿರುವ ಅಫ್ಘಾನ್ 4 ಪಾಯಿಂಟ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಶ್ರೀಲಂಕಾ ಭಾರತ ವಿರುದ್ಧ ಗೆದ್ದು ಬಹುತೇಕ ಪೈನಲ್ ಪಟ್ಟಿಯನ್ನ ಖಚಿತಪಡಿಸಿದೆ. 4 ಅಂಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿರುವ ಶ್ರೀಲಂಕಾಗೆ ಮತ್ತೊಂದು ಗೆಲುವು ಫೈನಲ್‌ಗೆ ಟಿಕೆಟ್ ನೀಡಲಿದೆ. ಇದರ ನಂತರ ಎರಡನೇ ಫೈನಲಿಸ್ಟ್ ಗೆ ಸ್ಪರ್ಧೆ ನಡೆಯಲಿದೆ. ಮುಂದಿನ ಪಂದ್ಯದಲ್ಲಿ ಒಂದು ವೇಳೆ ಶ್ರೀಲಂಕಾ ಗೆದ್ದರೆ, ಭಾರತ ಮತ್ತು ಅಫ್ಘಾನಿಸ್ತಾನದಂತೆ ಪಾಕಿಸ್ತಾನವು ಕೇವಲ 2 ಪಾಯಿಂಟ್ ಗಳಲ್ಲಿ ಉಳಿಯಲಿದೆ.
ಈ ರೀತಿ ನಡೆದಾಗ, ಶ್ರೀಲಂಕಾ 6 ಪಾಯಿಂಟ್ ಗಳಿಂದ ಫೈನಲ್ ತಲುಪಲಿದೆ. ಮತ್ತು ಉಳಿದ ಮೂರು ತಂಡಗಳು ಒಂದೇ 2-2 ಪಾಯಿಂಟ್ ಗಳನ್ನ ಹೊಂದಿರಲಿವೆ ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಉತ್ತಮ ರನ್ ರೇಟ್ ನಿಂದ ಫೈನಲ್‌ಗೆ ತಲುಪುವ ಅವಕಾಶವಿದೆ.