Rohit Sharma |ಪಂದ್ಯದ ಬಳಿಕ ರೋಹಿತ್ ಶರ್ಮಾ ಹೇಳಿದ್ದೇನು ?
ಬರ್ಸಾಪರಾ ಸ್ಟೇಡಿಯಂ ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 2 ನೇ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ 16 ರನ್ ಗಳೊಂದಿಗೆ ಜಯ ಸಾಧಿಸಿದೆ.
ಟೀಂ ಇಂಡಿಯಾದ ಪರ ಮೊದಲು ಸೂರ್ಯ ಕುಮಾರ್ ಯಾದವ್, ಕೆ.ಎಲ್.ರಾಹುಲ್, ಕೊಹ್ಲಿ ರನ್ ಮಳೆ ಹರಿಸಿದರೆ, ನಂತರ ದಕ್ಷಿಣ ಆಫ್ರಿಕಾದ ಪರ ಡೆವಿಡ್ ಮಿಲ್ಲರ್, ಡಿಕಾಕ್ ಗುಡುಗು ಸಿಡಿಲಿನ ಬ್ಯಾಟಿಂಗ್ ನಡೆಸಿದರು.
ಅಂತಿಮವಾಗಿ ಟೀಂ ಇಂಡಿಯಾ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಮ್ಯಾಚ್ ಬಳಿಕ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮಾತನಾಡಿ, ಬ್ಯಾಟಿಂಗ್ ವಿಷಯದಲ್ಲಿ ಒಂದು ಮಾತನ್ನು ನಾನು ಹೇಳಬಯಸುತ್ತೇನೆ.

ಕಳೆದ 8 – 10 ತಿಂಗಳಲ್ಲಿ ನಮ್ಮ ಬ್ಯಾಟಿಂಗ್ ವಿಭಾಗ ಒಂದು ರೀತಿಯಲ್ಲಿ ನಡೆಯುತ್ತಿದೆ. ಯಾವುದೇ ಬದಲಾವಣೆ ಇಲ್ಲದೇ ಒಂದು ರೀತಿಯಲ್ಲಿ ಸಾಗುತ್ತಿತ್ತು.
ನಮ್ಮ ಬ್ಯಾಟಿಂಗ್ ವಿಭಾಗ ಪಾಸಿಟಿವ್ ಆಗಿದೆ. ಆರಂಭಿಕರಾಗಿ ನಾನು, ಕೆ ಎಲ್ ರಾಹುಲ್, ಒನ್ ಡೌನ್ ನಲ್ಲಿ ವಿರಾಟ್ ಕೊಹ್ಲಿ, ನಾಲ್ಕನೇ ಸ್ಥಾನದಲ್ಲಿ ಸೂರ್ಯ ಕುಮಾರ್ ಯಾದವ್ ಅದ್ಭುತ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಇನ್ನು ಐದನೇ ಸ್ಥಾನದಿಂದ ಏಳನೇ ಸ್ಥಾನದವರೆಗೂ ಪರಿಸ್ಥಿತಿಗೆ ತಕ್ಕಂತೆ ಬ್ಯಾಟರ್ ಗಳು ಬದಲಾಗುತ್ತಿದ್ದಾರೆ ಎಂದು ಹೇಳಿದರು.
ಇನ್ನು ಈ ಪಂದ್ಯದ ಬಗ್ಗೆ ಮಾತನಾಡುವುದಾದ್ರೆ ನಾವು ಪೂರ್ತಿಸ್ಥಾಯಿ ಬ್ಯಾಟಿಂಗ್ ನಡೆಸಿದ್ದೇವೆ, ಆದ್ರೆ ಕಳೆದ ಐದಾರು ಪಂದ್ಯಗಳಿಂದ ನಮ್ಮ ದೆತ್ ಔವರ್ ಬೌಲಿಂಗ್ ಚೆನ್ನಾಗಿಲ್ಲ. ಅದನ್ನು ಮುಂದಿನ ದಿನಗಳಲ್ಲಿ ಸರಿ ಮಾಡಿಕೊಳ್ಳಬೇಕಾಗಿದೆ ಎಂದರು.