Rohit Sharma ಪಾಕ್ ವಿರುದ್ಧದ ಸಮರಕ್ಕೆ ನಾವು ರೆಡಿ
ಟಿ 20 ವರ್ಲ್ಡ್ ಕಪ್ 2022 ರ ಭಾಗವಾಗಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ಭಾರಿ ಸಿದ್ಧತೆ ಮಾಡಿಕೊಂಡಿದ್ದು, ಪ್ಲೇಯಿಂಗ್ ಇಲೆವೆನ್ ಕೂಡ ರೆಡಿಯಾಗಿದೆ ಎಂದು ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ವೇದಿಕೆಯಾಗಿ ಚುಟುಕು ಕ್ರಿಕೆಟ್ ನ ವಿಶ್ವಕಪ್ ಭಾನುವಾರದಿಂದ ಶುರುವಾಗಲಿದೆ.
ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಮೆಗಾ ಈವೆಂಟ್ ಗಾಗಿ ಮಾಡಿಕೊಂಡಿರುವ ತಯಾರಿ ಬಗ್ಗೆ ಮಾತನಾಡಿದ್ದಾರೆ.
ಬುಮ್ರಾ ಬದಲಿಗೆ ಶಮಿ
ಆಟದಲ್ಲಿ ಗಾಯಗಳಾಗೋದು ಸಹಜ. ಹೀಗಿದ್ದಾಗ ನಮ್ಮ ಕೈಯಲ್ಲಿಲ್ಲ.

ಆದ್ರೆ ಬೆಂಚ್ ಸ್ಟ್ರೆಂಥ್ ಹೆಚ್ಚು ಮಾಡಿಕೊಳ್ಳಲು ನಾವು ಹೊಸಬರಿಗೆ ಹೆಚ್ಚೆಚ್ಚು ಅವಕಾಶಗಳನ್ನು ನೀಡುತ್ತಿದ್ದೇವೆ.
ಗಾಯದ ಸಮಸ್ಯೆ ನಮ್ಮ ತಂಡವನ್ನು ಕಾಡುತ್ತಿರುವುದು ನಿಜ. ಆದ್ರೆ ಈ ಕಾರಣದಿಂದಾಗಿ ನಾವು ನಿರಾಸೆ ಅನುಭವಿಸಿಲ್ಲ. ಇರುವ ಅವಕಾಶಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ?
ಲಭ್ಯವಿರುವ ಆಟಗಾರರ ಸೇವೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಗಮನ ಹರಿಸಬೇಕು. ಅಕ್ಟೋಬರ್ 23 ರಂದು ನಡೆಯುವ ಪಂದ್ಯಕ್ಕೆ ನಾವು ಸಿದ್ಧವಾಗಿದ್ದೇವೆ ಎಂದಿದ್ದಾರೆ.