Rohit sharma | ಏನೇ ಆದ್ರೂ ತಂಡದ ಮೇಲಿನ ಅಭಿಮಾನ ಕಡಿಮೆಯಾಗಲ್ಲ
ಬೆಂಗಳೂರು : 15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರೋಹಿತ್ ಶರ್ಮಾ ನಾಯಕತ್ವ ಮುಂಬೈ ಇಂಡಿಯನ್ಸ್ ಅತ್ಯಂತ ಕಳಫೆ ಪ್ರದರ್ಶನ ನೀಡಿದೆ.
ಈ ಸೀಸನ್ ನಲ್ಲಿ ಆಡಿರುವ 8 ಕ್ಕೆ ಎಂಟೂ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡಿದೆ.
ಹೀಗಾಗಿ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಮತ್ತು ಮುಂಬೈ ಇಂಡಿಯನ್ಸ್ ಆಟಗಾರರ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ,.
ಈ ನಡುವೆ ತಮ್ಮ ವೈಫಲ್ಯದ ಬಗ್ಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿ, ಈ ಸೀಸನ್ ನಲ್ಲಿ ನಾವು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದೇವೆ.

ಆದ್ರೆ ಈ ರೀತಿಯ ವೈಫಲ್ಯಗಳು ಯಾರಿಗಾದರೂ ಸಹಜವೇ ಎಂದಿದ್ದಾರೆ. ಹಲವು ದಿಗ್ಗಜರು ಇದೇ ಪರಿಸ್ಥಿತಿ ಎದುರಿಸಿದ್ದು, ಆ ಹಂತವನ್ನು ಮೆಟ್ಟಿ ನಿಂತು ಮುನ್ನಡೆದಿದ್ದಾರೆ ಎಂದು ರೋಹಿತ್ ಸ್ಮರಿಸಿದ್ದಾರೆ.
ಏನೇ ಆದರೂ ತಂಡದ ಮೇಲಿನ ಅಭಿಮಾನ ಕಡಿಮೆಯಾಗುವುದಿಲ್ಲ ಎಂದ ರೋಹಿತ್… ಸಂಕಷ್ಟದ ಸಮಯದಲ್ಲಿ ಬೆಂಬಲ ನೀಡಿದ ಹಿತೈಷಿಗಳಿಗೆ ಧನ್ಯವಾದ ಹೇಳಿದ್ದಾರೆ.
ಐದು ಬಾರಿಯ ಲೀಗ್ ಚಾಂಪಿಯನ್ ಮುಂಬೈ ಈ ಋತುವಿನಲ್ಲಿ ಆಡಿದ ಎಲ್ಲಾ ಎಂಟು ಪಂದ್ಯಗಳನ್ನು ಸೋತಿದೆ. ಹೀಗಾಗಿ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಟ್ರೋಲ್ ಗಳು ನಡೆಯುತ್ತಿವೆ. rohit-sharma-says failures-are-natural