Rohit Sharma | ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಗೆ ಜೋಡಿ ಯಾರು..?
1 min read
Rohit Sharma | ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಗೆ ಜೋಡಿ ಯಾರು..?
ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಜ್ಜಾಗಿದೆ. ಜುಲೈ ಒಂದರಿಂದ ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭ ಆಗಲಿದೆ.
ಬರ್ಮಿಂಗ್ ಹ್ಯಾಮ್ ನಲ್ಲಿ ಏಕೈಕ ಟೆಸ್ಟ್ ಪಂದ್ಯ ನಡೆಯಲಿದ್ದು, ಮ್ಯಾಚ್ ಗಾಗಿ ಟೀಂ ಇಂಡಿಯಾದ ಆಟಗಾರರು ಸಜ್ಜಾಗುತ್ತಿದ್ದಾರೆ.
ಈಗಾಗಲೇ ಭಾರತೀಯ ಆಟಗಾರರು ಇಂಗ್ಲೆಂಡ್ ತಲುಪಿದ್ದು, ನೆಟ್ಸ್ ಗಳಲ್ಲಿ ಬೆವರಿಳಿಸುತ್ತಿದ್ದಾರೆ.
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ರೆ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಲಾಗಿದೆ.
ಕಳೆದ ವರ್ಷದ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2- 0 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು. ಆದ್ರೆ ಕೊನೆಯ ಪಂದ್ಯಕ್ಕೂ ಮುನ್ನಾ ಕೊರೊನಾ ಕೇಕೆ ಹಾಕಿದ ಕಾರಣ ಟೂರ್ನಿಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಲಾಗಿತ್ತು.
ಇದೀಗ ಅಂತಿಮ ಪಂದ್ಯದಲ್ಲಿ ಉಭಯ ತಂಡಗಳು ಗುದ್ದಾಟ ನಡೆಸಲಿದೆ. ಈ ಪಂದ್ಯದಲ್ಲಿ ಗೆಲುವು ಅಥವಾ ಡ್ರಾ ಸಾಧಿಸಿದ್ರೆ ಟೀಂ ಇಂಡಿಯಾ ಸರಣಿಯನ್ನು ಕೈವಶ ಮಾಡಿಕೊಳ್ಳಲಿದೆ. ಒಂದು ವೇಳೆ ಇಂಗ್ಲೆಂಡ್ ತಂಡ ಗೆಲುವು ಸಾಧಿಸಿದ್ರೆ ಸರಣಿ ಸಮಬಲವಾಗಲಿದೆ.
ಹೀಗಾಗಯೇ ಈ ಪಂದ್ಯದಲ್ಲಿ ಗೆಲುವಿಗಾಗಿ ಉಭಯ ತಂಡಗಳು ಶತಾಯಗತಾಯ ಪ್ರಯತ್ನ ಮಾಡಲಿವೆ. ಆದ್ರೆ ಈ ನಡುವೆ ಟೀಂ ಇಂಡಿಯಾಗೆ ಒಂದು ಸಮಸ್ಯೆ ಎದುರಾಗಿದೆ. ಅದು ಏನೆಂದರೇ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸುವವರು ಯಾರು..?

ಹೌದು..! ಟೀಂ ಇಂಡಿಯಾದ ಉಪ ನಾಯಕ ಕೆ.ಎಲ್.ರಾಹುಲ್ ಇಂಚೂರಿ ಆಗಿರುವುದರಿಂದ ಈ ಪ್ರಶ್ನೆ ಹುಟ್ಟಿಕೊಂಡಿದೆ. ರಾಹುಲ್ ತಂಡದಲ್ಲಿ ಇದ್ದಿದ್ದರೇ ಈ ಪ್ರಶ್ನೇ ಬರುತ್ತಿರಲಿಲ್ಲ. ಆದ್ರೆ ಈಗ ರಾಹುಲ್ ಇಂಚೂರಿಯಾಗಿರುವ ಕಾರಣ ರೋಹಿತ್ ಶರ್ಮಾ ಜೋಡಿ ಯಾರು ಅನ್ನೋ ಪ್ರಶ್ನೆಗೆ ಕಾರಣವಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಶುಭಮನ್ ಗಿಲ್ ಟೆಸ್ಟ್‌ನಲ್ಲಿ ರೋಹಿತ್‌ನೊಂದಿಗೆ ಓಪನಿಂಗ್ ಮಾಡಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ನಾಯಕ ರೋಹಿತ್ ಜೊತೆ ಶುಭಮನ್ ಅಭ್ಯಾಸ ಕೂಡ ನಡೆಸಿದ್ದಾರೆ.
ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಅವರ ಈವರೆಗಿನ ಪ್ರದರ್ಶನವು ಉತ್ತಮವಾಗಿದೆ. ಅವರು ಇದುವರೆಗೆ ಆಡಿರುವ 10 ಟೆಸ್ಟ್ ಪಂದ್ಯಗಳಲ್ಲಿ 558 ರನ್ ಗಳಿಸಿದ್ದಾರೆ. ಈ ವೇಳೆ ಶುಭಮನ್ 4 ಅರ್ಧಶತಕ ಸಿಡಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಅವರ ಅತ್ಯುತ್ತಮ ಸ್ಕೋರ್ 91 ರನ್ ಆಗಿದೆ.
ಟೀಂ ಇಂಡಿಯಾ ಅವರಿಗೆ ರೋಹಿತ್ ಜೊತೆ ಓಪನ್ ಮಾಡುವ ಅವಕಾಶ ನೀಡಬಹುದು. ಇದಕ್ಕೂ ಮುನ್ನ ಹಲವು ಬಾರಿ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಶುಭ್ ಮನ್ ಗಿಲ್ ಎಲ್ಲ ಸ್ವರೂಪದಲ್ಲಿ ಆಡಿ ಸೈ ಎನಿಸಿಕೊಂಡಿರುವ ಆಟಗಾರ. ಅವರು ದೇಶೀಯ ಪಂದ್ಯಗಳಲ್ಲಿ 12 ಶತಕಗಳನ್ನು ಗಳಿಸಿದ್ದಾರೆ. 26 ಅರ್ಧಶತಕಗಳು ದಾಖಲಾಗಿವೆ.
ಟೆಸ್ಟ್ ನಂತರ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಯನ್ನೂ ಆಡಲಿದೆ ಎಂಬುದು ಗಮನಿಸಬೇಕಾದ ಸಂಗತಿ.
ಜುಲೈ 7 ರಿಂದ ಟಿ-20 ಸರಣಿ ಆರಂಭವಾಗಲಿದೆ. ಇದಾದ ಬಳಿಕ ಜುಲೈ 12ರಿಂದ ಏಕದಿನ ಸರಣಿ ನಡೆಯಲಿದೆ.
ಈ ಪ್ರವಾಸದಲ್ಲಿ ಟೀಂ ಇಂಡಿಯಾ ಜುಲೈ 17 ರಂದು ಕೊನೆಯ ಏಕದಿನ ಪಂದ್ಯವನ್ನು ಆಡಲಿದೆ. ಈ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ.