ಕ್ಯಾಪ್ಟನ್ಸಿಗೆ ಕೊಹ್ಲಿ ಗುಡ್ ಬೈ… ನನಗೆ ಆಘಾತವಾಗಿದೆ ಎಂದು ರೋಹಿತ್
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಅತ್ಯುನ್ನತ ಶಿಖರಗಳಿಗೆ ಕೊಂಡೊಯ್ದ ನಾಯಕನಾಗಿ ವಿರಾಟ್ ಕೊಹ್ಲಿ ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ನಿಂತಿರುತ್ತಾರೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಅವರ ನಾಯಕತ್ವದಲ್ಲಿ, ಟೀಂ ಇಂಡಿಯಾ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ವಿದೇಶಿ ನೆಲದದಲ್ಲಿ ಸ್ಮರಣೀಯ ವಿಜಯಗಳನ್ನು ಸಾಧಿಸಿದೆ.
ಕೊಹ್ಲಿ ಒಟ್ಟು 68 ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ, 40 ಪಂದ್ಯಗಳನ್ನು ಗೆದ್ದು ಯಶಸ್ವಿ ನಾಯಕರಾಗಿದ್ದಾರೆ.
ಆದರೆ, ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ಅವರ ಕನಸು ನನಸಾಗಲಿಲ್ಲ.
ಇದರಿಂದ ನಿರಾಸೆಗೊಂಡಿರುವ ವಿರಾಟ್ ಕೊಹ್ಲಿ, ಟೆಸ್ಟ್ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ.
ಈ ಕುರಿತು ಸೀಮಿತ ಓವರ್ ಗಳ ನಾಯಕ ರೋಹಿತ್ ಶರ್ಮಾ, ಪ್ರತಿಕ್ರಿಯೆ ನೀಡಿದ್ದು, ಅಚ್ಚರಿ ವ್ಯಕ್ತಪಡಿಸಿದ್ದಾರೆ.
https://www.instagram.com/p/CYxsaeuKf17/?utm_source=ig_web_copy_link
“ನನಗೆ ಆಘಾತವಾಗಿದೆ !! ಭಾರತ ತಂಡದ ನಾಯಕ ಕೊಹ್ಲಿಯಾಗಿ ನಿಮ್ಮ ಯಶಸ್ಸಿಗೆ ಅಭಿನಂದನೆಗಳು.
ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತೇನೆ” ಎಂದು ಕೊಹ್ಲಿ ಜೊತೆಗಿನ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ. ಬಿಸಿಸಿಐ ಏಕದಿನ ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಅವರನ್ನು ನಾಯಕರನ್ನಾಗಿಸಿದೆ.
ಆದರೆ, ಗಾಯದಿಂದಾಗಿ ರೋಹಿತ್ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿಯಲಿದ್ದಾರೆ… ಏಕದಿನ ಸರಣಿಗೆ ಕೆಎಲ್ ರಾಹುಲ್ ನಾಯಕತ್ವ ವಹಿಸಲಿದ್ದಾರೆ.








