ನಾನು ಬೆಸ್ಟ್ ಪ್ಲೇಯರ್..ನನ್ನ ಹೆಸರು ಚಿರಪರಿಚಿತ… ಹಾಗಿದ್ರೆ ನನ್ನ ಹೆಸರೇನು..?

1 min read
Romelu Menama Lukaku Bolingoli Belgian footballer saakshatv Inter Milan

ನಾನು ಬೆಸ್ಟ್ ಪ್ಲೇಯರ್..ನನ್ನ ಹೆಸರು ಚಿರಪರಿಚಿತ… ಹಾಗಿದ್ರೆ ನನ್ನ ಹೆಸರೇನು..?

Romelu Menama Lukaku Bolingoli Belgian footballer saakshatv  Inter Milan ಅಮ್ಮನ ಎದೆ ಹಾಲು… ಅಪ್ಪನ ರಕ್ತ… ಅಜ್ಜನ ಪ್ರೀತಿ.. ಇವು ಇಲ್ಲದೆ ಇರುತ್ತಿದ್ರೆ ಆತ ಬಿಕಾರಿಯಾಗಿ ತಿರುಗಾಡುತ್ತಿದ್ದ. ಎಲ್ಲೋ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದ್ರೆ ಆತನ ಬದುಕು ಹಾಗಲಿಲ್ಲ. 28 ವರ್ಷಗಳಲ್ಲಿ ಯಾರು ಊಹೆ ಮಾಡದ ಎತ್ತರಕ್ಕೆ ಬೆಳೆದು ನಿಂತ. ಎಲ್ಲರಿಗೂ ಸ್ಪೂರ್ತಿ, ಮಾದರಿಯಾಗುವಂತಹ ಮನುಷ್ಯನಾದ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿ ಬಂದ ಆತ ಈಗ ಪ್ರಖರವಾಗಿ ಹೊಳೆಯುತ್ತಿದ್ದಾನೆ. ಯಾರು ಆತನ ಬಗ್ಗೆ ಅನುಮಾನ ಪಟ್ಟರೋ… ಯಾರು ಆತನ ಬಗ್ಗೆ ಕೀಳಾಗಿ ಮಾತನಾಡಿದ್ರೋ, ಇಂದು ಅವರೆಲ್ಲರೂ ಪ್ರೀತಿಯಿಂದ ಆರಾಧಿಸುವಂತಹ ವ್ಯಕ್ತಿಯಾದ. ಆತನ ದೇಶವೇ ಕೊಂಡಾಡುವಂತಹ ಕಣ್ಮನಿಯಾದ.

ಫುಟ್‍ಬಾಲ್ ಅಭಿಮಾನಿಗಳಿಗೆ ಆತನ ಹೆಸರು ಚಿರಪರಿಚಿತ. . ಬೆಲ್ಜಿಯಂ ತಂಡದ ಸೂಪರ್ ಸ್ಟಾರ್ ಆಟಗಾರ  . ಆದ್ರೆ ಈ ಸೂಪರ್ ಸ್ಟಾರ್ ಆಟಗಾರ ಬದುಕಿನ ಬವಣೆಯ ಚಿತ್ರಣವನ್ನು ಕೇಳಿದ್ರೆ ಎಂಥವರ ಮನಸ್ಸು ಕೂಡ ಕರಗಿ ಹೋಗುತ್ತೆ. ಯಾಕಂದ್ರೆ ಆತ ಬಡತನದ ಕೆಸರಿನಲ್ಲಿ ಅರಳಿದ ಪ್ರತಿಭೆ. ಒಂದು ಕ್ಷಣ ಯಾರು ಕೂಡ ನಂಬಲು ಕೂಡ ಸಾಧ್ಯವಿಲ್ಲ. ಕಿತ್ತು ತಿನ್ನುವ ಬಡತನ, ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದ ಕುಟುಂಬದ ಹುಡುಗನೊಬ್ಬ ಫುಟ್‍ಬಾಲ್ ಜಗತ್ತಿನ ಸ್ಟಾರ್ ಆಟಗಾರ ಅಂದ್ರೆ ಯಾರಾದ್ರೂ ನಂಬುತ್ತಾರಾ ? ಇದೇನು ಕಟ್ಟು ಕಥೆ ಅಂತ ಸುಮ್ಮನಾಗಬಹುದು. ಆದ್ರೆ ಇದು ಕಟ್ಟು ಕಥೆಯಲ್ಲ. ಬದಲಾಗಿ ಬದುಕಿನ ನೈಜ ದರ್ಪನ.

ಉತ್ತರ ಬೆಲ್ಜಿಯಂನ ಆಂಟ್ವೆರೆಪ್ ನಗರ ಆ ಬಡ ಫುಟ್‍ಬಾಲ್ ಆಟಗಾರನ ಹುಟ್ಟೂರು. ತಂದೆ ಫುಟ್‍ಬಾಲ್ ಆಟಗಾರ. ತಾಯಿ ಗೃಹಿಣಿ. ಒಬ್ಬ ತಮ್ಮನಿದ್ದಾನೆ. ಅಷ್ಟಕ್ಕೂ ಆತನ ತಂದೆ ರೋಜರ್ ಫುಟ್‍ಬಾಲ್ ನಲ್ಲಿ ಹೆಸರು ಮಾಡಿದ್ರು. ಆದ್ರೆ ಫುಟ್‍ಬಾಲ್ ಆಟದಿಂದ ದುಡ್ಡು ಬರಲಿಲ್ಲ. ಉದ್ಯೋಗನೂ ಸಿಗಲಿಲ್ಲ. ಮನೆಯಲ್ಲಿ ಬಡತನ ಎಂಬುದು ದರಿದ್ರದಂತೆ ಕಾಡುತ್ತಿತ್ತು. ಇಬ್ಬರು ಮಕ್ಕಳು ಸೇರಿ ನಾಲ್ವರ ಜೀವನ ಸಾಗಿಸಲು ಆ ಹುಡುಗನ ಅಪ್ಪ -ಅಮ್ಮ ಪಡುತ್ತಿದ್ದ ಕಷ್ಟ ಅಷ್ಟಿಷ್ಟಲ್ಲ. ಆದ್ರೂ ಎಳೆಯ ಮಕ್ಕಳಿಗೆ ಬಡತನದ ಬೇಗೆ ಗೊತ್ತಾಗದಂತೆ ನೋಡಿಕೊಳ್ಳುತ್ತಿದ್ದರು.

ಆದ್ರೆ ಬುದ್ದಿ ಬರುವಷ್ಟರಲ್ಲಿ ತಮ್ಮ ಮನೆಯ ಕಡು ಬಡತನದ ಪರಿಸ್ಥಿತಿ ಆ ಹುಡುಗನ ಅರಿವಿಗೆ ಬಂತು. ಆರನೇ ವಯಸ್ಸಿಗೆ ಅಪ್ಪ – ಅಮ್ಮ ಪಡುತ್ತಿರುವ ಬದುಕಿನ ಯಾತನೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ತಾವು ಹಸಿವಿನ ಸಂಕಟ ಅನುಭವಿಸಿದ್ರೂ ಮಕ್ಕಳ ಹಸಿವನ್ನು ನೀಗಿಸಲು ಪಡಬಾರದ ಕಷ್ಟ ಅನುಭವಿಸಿದ್ದರು. ಮನೆಯ ಪಕ್ಕದ ಬೆಕರಿಯಿಂದ ಸಾಲ ಮಾಡಿಕೊಂಡು ಹಾಲು ಬ್ರೆಡ್ ತಂದು ಮಕ್ಕಳ ಹಸಿವನ್ನು ನೀಗಿಸುತ್ತಿದ್ದರು. ಕೆಲವೊಂದು ಬಾರಿ ಹಸಿವಿನಿಂದ ಮಕ್ಕಳೂ ಆಳುತ್ತಾ ಕೂರುತ್ತಿದ್ದರು. ಶಾಲೆಯಿಂದ ಮನೆಗೆ ಬಂದಾಗ ತಾಯಿ, ನೀರಿಗೆ ಹಾಲು ಮಿಶ್ರಣ ಮಾಡಿ ಮಕ್ಕಳಿಗೆ ಕೊಡುತ್ತಿದ್ದರು. ಎಷ್ಟೇ ಬಡತನವಿದ್ರೂ ಮಕ್ಕಳಿಗೆ ಗೊತ್ತಾಗಬಾರದು ಅಂತ ನಗುಮುಖದೊಂದಿಗೆ ಮಕ್ಕಳನ್ನು ಸಮಾಧಾನಪಡಿಸುತ್ತಿದ್ದ ತನ್ನ ತಾಯಿಯ ಮನಸ್ಸನ್ನು ಆ ಖ್ಯಾತ ಆಟಗಾರ ಈಗಲೂ ನೆನಪಿಸಿಕೊಳ್ಳುತ್ತಾನೆ.

ತನ್ನ ನಾಲ್ಕನೇ ವಯಸ್ಸಿನಲ್ಲಿ ಮನೆಯ ಹತ್ತಿರದಲ್ಲಿದ್ದ ಪಾರ್ಕ್‍ನಲ್ಲಿ ಆ ಬಾಲಕ ಫುಟ್‍ಬಾಲ್ ಆಡುತ್ತಿದ್ದ. ಪುಟ್ಟ ಕಾಲುಗಳಿಂದ ಚೆಂಡನ್ನು ಒದೆಯುತ್ತಿದ್ದ ಆತ ಸುಸ್ತಾಗಿ ಮನೆಗೆ ಬಂದ್ರೆ ಊಟ ತಿಂಡಿ ಏನು ಸಿಗುತ್ತಿರಲಿಲ್ಲ. ನೀರು ಮಿಶ್ರಿತ ಹಾಲು – ಬ್ರೆಡ್ ಇದುವೇ ಆ ಆಟಗಾರನಿಗೆ ಬಾಲ್ಯದಲ್ಲಿ ಸಿಗುತ್ತಿದ್ದ ಪೌಷ್ಠಿಕ ಆಹಾರ. ಅಂತಹ ಪರಿಸ್ಥಿತಿಯಲ್ಲೂ ತನ್ನ ಫುಟ್‍ಬಾಲ್ ಮೇಲೆ ಅಪಾರ ಪ್ರೀತಿ, ಆಸಕ್ತಿಯನ್ನು ಹೊಂದಿದ್ದನು. ಅದಕ್ಕೆ ಕಾರಣ ಫುಟ್‍ಬಾಲ್ ಆಟ ರಕ್ತದಲ್ಲೇ ಹರಿಯುತ್ತಿತ್ತು. ಅದಕ್ಕೆ ತಕ್ಕಂತೆ ಅಮ್ಮನ ಎದೆಹಾಲಿನ ಶಕ್ತಿಯಿಂದಲೇ ಆತ ದೈಹಿಕವಾಗಿ ಗಟ್ಟಿಗೊಂಡಿದ್ದ.

Romelu Menama Lukaku Bolingoli Belgian footballer saakshatv  Inter Milan ಹೀಗೆ ಶಾಲಾ ದಿನಗಳಲ್ಲಿ ಫುಟ್‍ಬಾಲ್ ತಂಡದಲ್ಲಿ ಕಾಣಿಸಿಕೊಂಡಿದ್ದ ಆತ ಯಾವುದೇ ಪಂದ್ಯಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಪಕ್ಕದ ಮನೆಂiÀಲ್ಲಾದ್ರೂ ಟಿವಿ ನೋಡೋಣ ಅಂದ್ರೆ ಕರೆಂಟ್ ಇರುತ್ತಿರಲಿಲ್ಲ. ಸ್ನಾನ ಮಾಡೊಕೆ ಬಿಸಿ ನೀರು ಇರುತ್ತಿರಲಿಲ್ಲ. ತಣ್ಣೀರು ಸ್ನಾನ ಮಾಡುವಂತಹ ಪರಿಸ್ಥಿತಿ. ಕತ್ತಲ ಕೋಣೆಯಲ್ಲೇ ಕಾಲ ಕಳೆದ ಆ ಹುಡುಗ ಫುಟ್‍ಬಾಲ್ ಆಟವನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿದ್ದ. ಆಯಾಸ ನಿವಾರಿಸಲು ಮನೆಯಲ್ಲಿ ಏನು ಸೌಲಭ್ಯಗಳಿರಲಿಲ್ಲ. ಎಲ್ಲವನ್ನೂ ಮರೆತು ನಿದ್ದೆ ಮಾಡಬೇಕು ಅಂದ್ರೆ ಮನೆಯಲ್ಲಿ ಇಲಿಗಳ ಕಾಟ. ಇದ್ರಿಂದ ಒಂದು ದಿನವೂ ನೆಮ್ಮದಿ ಅಂತ ಇರಲಿಲ್ಲ.

ಹೀಗೆ ಬದುಕಿನ ಘಟನೆಗಳನ್ನು ಬಿಚ್ಚಿಡುವ ಸ್ಟಾರ್ ಸ್ಟ್ರೈಕರ್, ಒಂದು ದಿನ ನಾನು ದೃಢ ಸಂಕಲ್ಪ ಮಾಡಿದ್ದೆ. ನನಗೆ ಯಾರು ಬಂದು ಎಚ್ಚರಿಸಿದಂತೆ ಆಯಿತ್ತು. ನಾನು ಮುಂದೆ ಏನು ಆಗಬೇಕು ಎಂಬುದುನ್ನು ಆಗಲೇ ನಿರ್ಧರಿಸಿಬಿಟ್ಟಿದ್ದೆ. ಯಾಕಂದ್ರೆ ನನ್ನ ತಾಯಿ ಸಂಕಟದಿಂದ ಬದುಕುವುದು ನನಗೆ ಇಷ್ಟವಿರಲಿಲ್ಲ. ಒಂದು ದಿನ ನನ್ನ ತಾಯಿ ಕಣ್ಣೀರು ಹಾಕುತ್ತಿದ್ದರು. ಆಗ ನಾನು ಸಮಾಧಾನಪಡಿಸಿದೆ. ನೋಡ್ತಾ ಇರು. ಎಲ್ಲವೂ ಬದಲಾಗುತ್ತೆ. ನಾವು ಬಡತನದಿಂದ ಹೊರಬರುತ್ತೇವೆ. ಮುಂದೊಂದು ದಿನ ನಾನು ಫುಟ್‍ಬಾಲ್ ಆಟಗಾರನಾಗುತ್ತೇನೆ ಅಂತ ತನ್ನ ಬದುಕಿನ ಒಂದೊಂದು ಘಟನೆಗಳನ್ನು ಮೆಲುಕು ಹಾಕಿಕೊಳ್ತಾನೆ ಆತ.

ಇನ್ನು ಫುಟ್‍ಬಾಲ್ ಆಡಲು ಆ ಆಟಗಾರನ ಬಳಿ ಶ್ಯೂ ಇರಲಿಲ್ಲ. ಅಪ್ಪನ ಶ್ಯೂ ಹಾಕೊಂಡು ಆಡುತ್ತಿದ್ದ. ಶಾಲಾ ಟೂರ್ನಿಗಳಲ್ಲಿ ಆಡುವಾಗ ಎಲ್ಲರು ಅನುಮಾನದಿಂದಲೇ ಆತನನ್ನು ನೋಡುತ್ತಿದ್ದರು. ಆತನ ವಯಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದರು. ಐಡಿ ಕಾರ್ಡ್, ಬರ್ತ್ ಸರ್ಟಿಫಿಕೇಟ್, ಸ್ಕೂಲ್ ಐಡೆಂಟಿ ಕಾರ್ಡ್ ಹೀಗೆ ಎಲ್ಲವನ್ನು ನೋಡುತ್ತಿದ್ದಾಗ ಆ ಬಾಲಕನ ಮನಸ್ಸು ಎಷ್ಟು ಘಾಸಿಯಾಗಿರಬೇಕಲ್ವಾ ?

Romelu Menama Lukaku Bolingoli Belgian footballer saakshatv  Inter Milan ಮನೆಯ ಕಡು ಬಡತನ, ಸಮಾಜ ವಕ್ರದೃಷ್ಟಿ ಹೀಗೆ ಎಲ್ಲ ಸಿಟ್ಟನ್ನು ಫುಟ್‍ಬಾಲ್ ಚೆಂಡಿನ ಮೇಲೆ ತೋರಿಸುತ್ತಿದ್ದ ಶಾಲಾ ಟೂರ್ನಿಗಳ ಜೊತೆಗೆ ನೋಡ ನೋಡುತ್ತಲೇ ಲೋಕಲ್ ಕ್ಲಬ್ ತಂಡಗಳ ಪರ ಆಡಲು ಶುರು ಮಾಡಿದ್ದ. ತನ್ನ 12ನೇ ವಯಸ್ಸಿನಲ್ಲಿ ತನ್ನ ತಂದೆಯ ಶ್ಯೂ ಹಾಕೊಂಡು 34 ಪಂದ್ಯಗಳಲ್ಲಿ 76 ಗೋಲು ದಾಖಲಿಸಿದ್ದ.

12ನೇ ವಯಸ್ಸಿನಲ್ಲಿ ಆತ ಸ್ಥಳೀಯ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದ್ದ. ಅಗ ಆತನ ಅಜ್ಜನ ಖುಷಿಗಂತೂ ಪಾರವೇ ಇರಲಿಲ್ಲ. ಮೊಮ್ಮಗನ ಸಾಧನೆಯನ್ನು ನೋಡಿ ತುಂಬಾನೇ ಖುಷಿಪಟ್ಟರು. ಆ ದಿನದ ಘಟನೆಯನ್ನು ಆ ಆಟಗಾರ ಹೇಳುವುದು ಹೀಗೆ.. ಒಂದು ದಿನ ನನ್ನ ಅಜ್ಜ ಬಂದಿದ್ದರು. ಬಂದವರೇ ನನ್ನ ಬಳಿ ಬಂದು ಪ್ರಾಮಿಸ್ ಮಾಡಬೇಕು ಅಂದ್ರು. ಏನು ಅಂತ ಕೇಳಿದ್ರೆ ಮೊದಲು ಪ್ರಾಮಿಸ್ ಮಾಡು. ಆಮೆಲೆ ಹೇಳುತ್ತೇನೆ ಅಂತ ಅಂದ್ರು. ಸರಿ ಅಂತ ನಾನು ಅಜ್ಜನಿಗೆ ಪ್ರಾಮಿಸ್ ಮಾಡಿದ್ದೆ. ಏನು ಅಂತ ಕೇಳಿದಾಗ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಯಲ್ವಾ ? ನೀನು ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂದ್ರು. ಸರಿ ಅಂತ ಹೇಳಿ ಬಂದೆ.

ದುರಂತ ಅಂದ್ರೆ ನಾಲ್ಕು ದಿನಗಳ ಬಳಿಕ ನನ್ನ ಅಜ್ಜ ನಿಧನರಾದ್ರು. ಆದ್ರೆ ಅವರಿಗೆ ಮಾಡಿದ್ದ ಪ್ರತಿಜ್ಞೆಯನ್ನು ನಾನು ನಾಲ್ಕೇ ವರ್ಷಗಳಲ್ಲಿ ಪೂರೈಸಿದ್ದೆ. ಯಾಕಂದ್ರೆ 16ನೇ ವಯಸ್ಸಿಗೆ ನಾನು ಪ್ರತಿಷ್ಠಿತ ಕ್ಲಬ್ ಆಂಡರ್ಲೆಚಿಟಿ ತಂಡಕ್ಕೆ ಆಯ್ಕೆಯಾಗಿ ಫೈನಲ್ ಪಂದ್ಯವನ್ನು ಆಡಿದ್ದೆ. ಆ ನಂತರ ನಾನು ಹಿಂತಿರುಗಿ ನೋಡಲೇ ಇಲ್ಲ. ನನ್ನ ಅಜ್ಜನಿಗೆ ಮಾತು ಕೊಟ್ಟಂತೆ ನನ್ನ ತಾಯಿಯನ್ನು ನಾನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೇನೆ. ಈಗ ಆಕೆಗೆ ಯಾವ ಬಡತನದ ಸಂಕಟವೂ ಇಲ್ಲ ಅಂದಾಗ ಆತನ ಮುಖದಲ್ಲಿ ಸಾರ್ಥಕತೆಯ ಭಾವನೆ ಎದ್ದು ಕಾಣುತ್ತಿತ್ತು.

ಆಂಡರ್ಲೆಚಿಟಿ ತಂಡದ ಜೊತೆ ಒಪ್ಪಂದ ಮಾಡಿಕೊಂಡ್ರೂ ಆ ಆಟಗಾರನಿಗೆ ಆರಂಭದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಆ ಅವಕಾಶ ಸಿಕ್ಕಿದ್ದು ಹೇಗೆ ಎಂಬುದನ್ನು ಆತ ಹೇಳುವುದು ಹೀಗೆ. ನಾನು ಫುಟ್‍ಬಾಲ್ ಅಭಿಮಾನಿಯಂತೆ ಮನೆಯಲ್ಲಿ ಟಿವಿ ನೋಡ್ಕೊಂಡು ಪಂದ್ಯ ನೋಡುತ್ತಿದ್ದ್ದೆ.ಸಡನ್ ಆಗಿ ತರಬೇತುದಾರನ ದೂರವಾಣಿ ಕರೆ ಬಂತು. ಎಲ್ಲಿದ್ದೀಯಾ ? ಏನು ಮಾಡ್ತಾ ಇದ್ದಿಯಾ ಅಂತ. ಅತ್ತ ಕಡೆಯಿಂದ ಫೈನಲ್ ಪಂದ್ಯ ಆಡಬೇಕು. ಬೇಗ ಬಾ ಅಷ್ಟೇ. ಆಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಅಪ್ಪ, ಅಮ್ಮ, ತಮ್ಮನಿಗೆ ಹೇಳಿ ಓಡೋಡಿ ರೆಡಿಯಾಗಿÀ ಸೀದಾ ಮೈದಾನಕ್ಕೆ ಬಂದೆ. ಆಗಲೇ ನನ್ನ ಮೊಬೈಲ್‍ಗೆ ಸಾಕಷ್ಟು ಕರೆಗಳು ಬಂದಿದ್ದವು. ಅದ್ರಲ್ಲಿ ನನ್ನ ಆಪ್ತ ಸ್ನೇಹಿತನಿಗೆ ಮಾತ್ರ ಮೆಸೇಜ್ ಮಾಡಿದ್ದೆ. ನಾನು ಈಗ ಆಂಡರ್ಲೆಚಿಟಿ ಮೆನ್ ಅಂತ ಟೆಸ್ಟ್ ಮಾಡಿದೆ ಅಂತ ತನ್ನ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾನೆ .

Romelu Menama Lukaku Bolingoli is a Belgium professional footballer

Romelu Menama Lukaku Bolingoli Belgian footballer saakshatv  Inter Milan ಬಳಿಕ ಡ್ರೆಸಿಂಗ್ ರೂಂಗೆ ಹೋಗಿ ಕ್ಲಬ್ ತಂಡದ ಜೆರ್ಸಿ ಕೊಟ್ರು. ಯಾವ ನಂಬರ್ ಬೇಕು ಅಂತ ಕೇಳಿದಾಗ 10 ಅಂತ ಅಂದೆ. 10 ನಂಬರ್ ಸಿಗಲ್ಲ. ಅಕಾಡೆಮಿ ಆಟಗಾರರಿಗೆ ನೀಡಲಾಗಿದೆ. 30ಕ್ಕಿಂತ ಮೇಲಿನ ನಂಬರ್ ಸಿಗುತ್ತೆ. ಕೈ ಬೆರಳಿನಲ್ಲೇ ಲೆಕ್ಕಹಾಕೊಂಡು 3 ಪ್ಲಸ್ 6 ಅಂತ 36 ನಂಬರ್ ಕೇಳಿದೆ. ಕೊನೆಗೂ ನನ್ನ ಕನಸು ನನಸಾದ ಕ್ಷಣ ಬಂದೇ ಬಿಟ್ಟಿತ್ತು. ಪಂದ್ಯದ 67ನೇ ನಿಮಿಷದಲ್ಲಿ ನನಗೆ ಆಡುವ ಅವಕಾಶ ಸಿಕ್ಕಿತ್ತು. ಆದ್ರೆ ಆ ಪಂದ್ಯದಲ್ಲಿ ನಮ್ಮ ತಂಡ ಸೋಲು ಅನುಭವಿಸಿತ್ತು. ಆದ್ರೆ ನನಗೆ ಅದು ಗೊತ್ತೆ ಆಗಲಿಲ್ಲ. ಯಾಕಂದ್ರೆ ಆ ದಿನ, ಆ ಕ್ಷಣದಲ್ಲಿ ನಾನು ಸ್ವರ್ಗದಲ್ಲಿ ತೇಲಾಡುತ್ತಿದ್ದೆ ಅಂತಾನೆ ಆ ಆಟಗಾರ.

ನಂತರ ಯುರೋಪಿಯನ್ ಲೀಗ್ ಚಾಂಪಿಯನ್‍ಷಿಪ್‍ನ ನಾನಾ ಟೂರ್ನಿಗಳ ಆಡುವ ಅವಕಾಶ ಸಿಕ್ಕಿತ್ತು. ಅಲ್ಲಿ ಬೇರೆ ಆಟಗಾರರನ್ನು ನೋಡಿದಾಗ ಅಂಜಿಕೆಯಾಗುತ್ತಿತ್ತು. ಯಾಕಂದ್ರೆ ಆತನ ಬಳಿ ಸರಿಯಾದ ಟ್ರ್ಯಾಕ್ ಸೂಟ್‍ಗಳಿರಲಿಲ್ಲ. ಬಣ್ಣ ಮಾಸಿದ ಟ್ರ್ಯಾಕ್ ಸೂಟ್, ಟೀ ಶರ್ಟ್‍ಗಳನ್ನು ಹಾಕೊಂಡಿರುತ್ತಿದ್ದ. ಊಟ ಮಾಡುತ್ತಿರುವಾಗಲೂ ಏನು ಹೇಳಬೇಕು ಅಂತನೇ ಗೊತ್ತಿರಲಿಲ್ಲ. ಅಲ್ಲಿದ್ದವರೆಲ್ಲಾ ಹೈ ಫೈ ಆಗಿದ್ದು ಶ್ರೀಮಂತರಾಗಿದ್ದರು.

ಆದ್ರೂ ಎದೆಗುಂದಲಿಲ್ಲ. ಬಡತನದ ನೋವನ್ನು ಮೈದಾನದಲ್ಲಿ ಆತ ಸೇಡು ತೀರಿಸಿಕೊಂಡ. ದೈಹಿಕ ಮತ್ತು ಮಾನಸಿಕ ನೋವುಗಳಿಂದ ಕಂಗೆಟ್ಟಿದ್ದ ಆತ ಸರಾಗವಾಗಿ ಗೋಲು ದಾಖಲಿಸಿ ಅದ್ಭುತ ಆಟಗಾರನಾಗಿ ಹೊರಹೊಮ್ಮಿದ್ದ. 2002ರಲ್ಲಿ ಅಂದ್ರೆ 12ನೇ ವಯಸ್ಸಿನಲ್ಲಿ ತೂತು ಆಗಿದ್ದ ಅಪ್ಪನ ಶ್ಯೂ ಹಾಕೊಂಡು ಆಡುತ್ತಿದ್ದ ಆತ, 12 ವರ್ಷಗಳ ಬಳಿಕ ಬೆಲ್ಚಿಯಂ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡ. ಅದು ಕೂಡ ಫಿಫಾ ವಿಶ್ವಕಪ್‍ನಲ್ಲಿ.

ಹೀಗೆ ಪಾರ್ಕ್‍ನಿಂದ ಶುರುವಾದ ಆತನ ಫುಟ್‍ಬಾಲ್ ಜರ್ನಿ, ಸ್ಥಳೀಯ ಕ್ಲಬ್, ಬೆಲ್ಜಿಯಂನ ಪ್ರತಿಷ್ಠಿತ ಕ್ಲಬ್, ಯುರೋಪಿಯನ್ ಚಾಂಪಿಯನ್ಸ್ ಲೀಗ್‍ನ ಕೆಲವು ಕ್ಲಬ್‍ಗಳಲ್ಲಿ ಆಡಿದ್ದರು. ಇದೀಗ ಇಂಟರ್ ಮಿಲನ್  ತಂಡದ  ಸ್ಟ್ರೈಕರ್. ಬೆಲ್ಜಿಯಂ ತಂಡದ ಹೀರೋ. ತಾನು ಬಾಲ್ಯದಲ್ಲಿ ಆರಾಧಿಸುತ್ತಿದ್ದ ಹೀರೋ ಥಿಯರಿ ಹೆನ್ಸಿ ಪಕ್ಕದಲ್ಲಿ ನಿಂತು ಅವರ ಮಾರ್ಗದರ್ಶನದಲ್ಲಿ ಆಡುತ್ತಿರುವ ಆ ಕ್ಷಣವನ್ನು ನೆನಪಿಸಿಕೊಂಡ ಆತನಿಗೆ ಇದು ಕನಸೊ . ನನಸೊ ಅಂತ ಗೊತ್ತಾಗುತ್ತಿಲ್ಲ. ಹೇಂಗಿದ್ದವ ಹೇಂಗಾದ ಅಲ್ವಾ ?

ಆತನಿಗೆ ಫಿಫಾ ಅಂದ್ರೆ ಏನು ಅಂತ ಗೊತ್ತಿರಲಿಲ್ಲ. ಅಕಾಡೆಮಿಂiÀಲ್ಲಿ ಫುಟ್‍ಬಾಲ್ ಆಟವನ್ನು ತರಬೇತಿಯನ್ನು ಪಡೆಯಲಿಲ್ಲ. ಫುಟ್‍ಬಾಲ್ ಆಡಲು ಶ್ಯೂ, ಶಾಟ್ಸ್, ಟಿಶರ್ಟ್‍ಗಳು ಇರಲಿಲ್ಲ. ಹೈಫೈ ಬದುಕು ಗೊತ್ತೇ ಇಲ್ಲ. ಬರೀ ಇಲಿಗಳು, ನೀರಿಗೆ ಮಿಶ್ರಣಗೊಂಡ ಹಾಲು, ಬ್ರೆಡ್ ತಿಂದುಕೊಂಡು ಫುಟ್‍ಬಾಲ್ ಆಡಿದ್ದವ ಈಗ ತಾನು ಅಂದುಕೊಂಡಿದ್ದನ್ನು ಸಾಧಿಸಿದ್ದಾನೆ. ಅಮ್ಮ ಮತ್ತು ಅಜ್ಜನಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾನೆ. ಅದೇ ಗುರಿಯಾಗಿತ್ತು. ಆ ಗುರಿ ತಲುಪಿದ ಹೆಮ್ಮೆ, ಸಾರ್ಥಕತೆ ಆತನಲ್ಲಿದೆ.

ಕೊನೆಯದಾಗಿ ಆ ಸ್ಟಾರ್ ಫುಟ್‍ಬಾಲ್ ಆಟಗಾರ ಹೇಳುವುದು ಹೀಗೆ.. ನಾನು ಈಗ ಪ್ರೀಮಿಯರ್ ಲೀಗ್ ಬಗ್ಗೆ ಮಾತನಾಡುವುದಿಲ್ಲ. ಚಾಂಪಿಯನ್ಸ್ ಲೀಗ್ ಬಗ್ಗೆ ಮಾತನಾಡುವುದಿಲ್ಲ. . ಫಿಫಾ ವಿಶ್ವಕಪ್ ಬಗ್ಗೆ ಮಾತನಾಡುವುದಿಲ್ಲ. ನನಗೆ ನನ್ನ ಅಜ್ಜನ ಜೊತೆ ಮಾತನಾಡಬೇಕು ಅಷ್ಟೇ.. ಅಜ್ಜನ ಆತ್ಮ ನನ್ನ ಸುತ್ತನೇ ಓಡಾಡುತ್ತಿರುತ್ತದೆ. ಅವರಿಗೆ ಕೇಳುವಾಗ ಹಾಗೇ ಮಾತನಾಡುತ್ತೇನೆ. ನಿಮ್ಮ ಮಗಳು ಈಗ ಚೆನ್ನಾಗಿದ್ದಾಳೆ. ನಿಮಗೆ ಕೊಟ್ಟ ಮಾತಿನಂತೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ. ಅಪ್ಪ, ಅಮ್ಮ, ತಮ್ಮ ಎಲ್ಲರು ಈಗ ಚೆನ್ನಾಗಿದ್ದಾರೆ. ಯಾವ ಬಡತನವೂ ಇಲ್ಲ. ಬಡತನದ ದರಿದ್ರ ನಮ್ಮನ್ನು ಬಿಟ್ಟು ಹೋಗಿದೆ. ಮನೆಯಲ್ಲಿ ಇಲಿಗಳ ಕಾಟವಿಲ್ಲ. ತಣ್ಣೀರಿನಲ್ಲಿ ಸ್ನಾನ ಮಾಡುವ ಅಗತ್ಯವಿಲ್ಲ. ದಿನ ಪೂರ್ತಿ ಕರೆಂಟು ಹೋಗುತ್ತಿಲ್ಲ. ಟಿವಿ ಕೇಬಲ್ ಪ್ರಾಬ್ಲಂ ಇಲ್ಲ. ಫ್ಲೋರ್‍ನಲ್ಲಿ ಮಲಗುವ ಅನಿವಾರ್ಯತೆಯೂ ಇಲ್ಲ. ಯಾರು ಕೂಡ ನನ್ನನ್ನು ಅನುಮಾನದಿಂದ ನೋಡುತ್ತಿಲ್ಲ. ಐಡಿ ಕಾರ್ಡ್ ಕೇಳುತ್ತಿಲ್ಲ. ಯಾಕಂದ್ರೆ ಅವರಿಗೆಲ್ಲಾ ನಮ್ಮ ಹೆಸರು ಗೊತ್ತಿದೆ. ಅಂತ ಜೋರಾಗಿ ಹೇಳಬೇಕು ಅನ್ಸುತ್ತೆ. ಹೇಳುತ್ತೇನೆ ಅಷ್ಟೇ. ಯಾಕಂದ್ರೆ ನನ್ನ ಅಜ್ಜನಿಗೆ ಖುಷಿಯಾಗಬೇಕು.

ನೀವು ಅಂದುಕೊಂಡಂತೆ ನಾನು ಈಗ ಸ್ಟಾರ್ ಫುಟ್‍ಬಾಲ್ ಆಟಗಾರ. ನನ್ನ ಹೆಸರು ವಿಶ್ವ ಫುಟ್‍ಬಾಲ್‍ನಲ್ಲಿ ಚಿರಪರಿಚಿತ. ನಾನು ಬೆಲ್ಚಿಯಂ ಪ್ರಜೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ವಿವಿಧ ಟೂರ್ನಿಗಳಲ್ಲಿ ಸಾಕಷ್ಟು ಗೋಲು ದಾಖಲಿಸಿದ್ದೇನೆ. ಹಾಗಂತ ನಾನು ಗ್ರೇಟ್ ಪ್ಲೇಯರ್ ಅಲ್ಲ. ನಾನು ಬೆಸ್ಟ್ ಪ್ಲೇಯರ್ ಅಷ್ಟೇ… ಅಷ್ಟಕ್ಕೂ ನನ್ನ ಹೆಸರು …. ರೊಮೆಲೊ ಮೆನಾಮ ಲುಕಾಕು ಬೊಲಿಂಗ್ಲಿ.
ಪ್ರೀತಿಯಿಂದ ರೊಮೆಲೊ ಲುಕಾಕು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd