ADVERTISEMENT
Friday, September 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಐಎಂಎ ಹಗರಣದಲ್ಲಿ ರೋಷನ್‍ಬೇಗ್ ಜೈಲುಪಾಲು: ಮುಂದಿನ ಟಾರ್ಗೆಟ್ ಕೈ ಶಾಸಕ ಜಮೀರ್..?

Kariyappa N by Kariyappa N
November 22, 2020
in Newsbeat, Politics, Samagra karnataka, ರಾಜ್ಯ
ima scandal
Share on FacebookShare on TwitterShare on WhatsappShare on Telegram

 ====ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್‍ಗೆ ಬಂಧನ ಭೀತಿ..? ====
ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಹಗರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

roshan baig
ಇಂದು ಬೆಳಗ್ಗೆ 11.30ಕ್ಕೆ ರೋಷನ್ ಬೇಗ್‍ರನ್ನ ವಿಚಾರಣೆಗಾಗಿ ಸಿಬಿಐ ಅಧಿಕಾರಿಗಳು ಅವರ ಮನೆಯಿಂದ ಕರೆತಂದು ಸುದೀರ್ಘ ವಿಚಾರಣೆ ನಡೆಸಿದ್ದರು. ಸತತ 8 ಗಂಟೆಗಳ ಕಾಲ ವಿಚಾರಣೆ ಬಳಿಕ ರೋಷನ್ ಬೇಗ್‍ರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.
ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ರೋಷನ್ ಬೇಗ್ ಅವರನ್ನು ಕೋರಮಂಗಲದ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಮಾಜಿ ಶಾಸಕ ರೋಷನ್ ಬೇಗ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ಒಪ್ಪಿಸಿದ್ದಾರೆ.

Related posts

bz-cup-media-cricket-tournament-bengaluru-september-5-6

ಬ್ಯಾಟ್ & ಬಾಲ್ ಸಮರಕ್ಕೆ ಸಜ್ಜಾದ ಮಾಧ್ಯಮ ಲೋಕ..! ಸೆಪ್ಟೆಂಬರ್ 5 ಮತ್ತು 6ರಂದು ಬೆಂಗಳೂರಿನಲ್ಲಿ ಬಿ.ಝಡ್. ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿ

September 4, 2026
ಕೈ ಪಾಳಯದಲ್ಲಿ ಮುಗಿಯದ ಸಂಪುಟ ಪುನಾರಚನೆ ಸರ್ಕಸ್!: ಹಿರಿಯ ಸಚಿವರಿಗೆ ಕೊಕ್ ಹೊಸ ಮುಖಗಳಿಗೆ ಚಾನ್ಸ್ ದೆಹಲಿ ಪ್ರವಾಸದಲ್ಲಿ ನಿರ್ಧಾರವಾಗಲಿದೆ ಕೈ ನಾಯಕರ ಭವಿಷ್ಯ

ಪ್ರತಿಪಕ್ಷಗಳಿಗೆ ಖೆಡ್ಡಾ ತೋಡಿದ DK ಸರ್ಕಾರ :ಹಳೆಯ ಹಗರಣಗಳಿಗೆ ಜೀವ ನೀಡಿದ ಕಾಂಗ್ರೆಸ್- ಕುಮಾರಸ್ವಾಮಿ ಮತ್ತು ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್ ಅಸ್ತ್ರ

September 4, 2026

ರೋಷನ್ ಬೇಗ್ ಹೆಸರು ತಳುಕು ಹಾಕಿದ್ಹೇಗೆ..?
ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಹೆಸರು ತಳಕು ಹಾಕಿ ಕೊಂಡಿತ್ತು. ಐಎಂಎ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಶಾಮೀಲಾಗಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಹೀಗಾಗಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಸ್‍ಐಟಿ ತನಿಖೆಗೆ ಒಪ್ಪಿಸಿದ್ದರು.


ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ನಿಂದ ಸುಮಾರು 200 ಕೋಟಿಗೂ ಹೆಚ್ಚು ಹಣವನ್ನು ರೋಷನ್ ಬೇಗ್ ಪಡೆದಿದ್ದಾರೆ ಎನ್ನಲಾಗಿದೆ. ಐಷಾರಾಮಿ ಕಾರು ಸೇರಿದಂತೆ ಬಹುತೇಕ ಬೆಲೆ ಬಾಳುವ ವಸ್ತುಗಳನ್ನು ಮನ್ಸೂರ್ ಖಾನ್ ರೋಷನ್ ಬೇಗ್‍ಗೆ ಉಡುಗೊರೆಯಾಗಿ ನೀಡಿದ್ದ ಎಂಬ ಆರೋಪ ಕೇಳಿ ಬಂದಿತ್ತು.
ಶಿವಾಜಿನಗರದ ಕಾಂಗ್ರೆಸ್ ಶಾಸಕರಾಗಿದ್ದ ರೋಷನ್ ಬೇಗ್, ಮೈತ್ರಿ ಸರ್ಕಾರದಲ್ಲಿ ಶಾಸಕರ ಅಸಮಾಧಾನ ಸ್ಫೋಟಗೊಂಡಾಗ ತಾವೂ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು.

ವಿಡಿಯೋ ಹರಿಬಿಟ್ಟಿದ್ಧ ಮನ್ಸೂರ್ ಅಲಿಖಾನ್..!
ಐಎಂಎ ಅಕ್ರಮದ ತನಿಖೆಗಾಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಎಸ್‍ಐಟಿ ರಚನೆ ಮಾಡಲಾಗಿತ್ತು. ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಶಂಕರ್, ಸಹಾಯಕ ಆಯುಕ್ತ ನಾಗರಾಜ್, ಐಎಂಎ ನಿರ್ದೇಶಕರು ಸೇರಿದಂತೆ 20ಕ್ಕು ಹೆಚ್ಚು ಮಂದಿಯನ್ನು ಎಸ್‍ಐಟಿ ಪೊಲೀಸರು ಬಂಧಿಸಿದ್ದರು.
ಈ ಬೆಳೆವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕರಾಗಿದ್ದ ರೋಷನ್ ಬೇಗ್ ಬೆಂಗಳೂರು ಬಿಟ್ಟು ಪರಾರಿಯಾಗಲು ಕೆಂಪೇಗೌಡ airport ನಲ್ಲಿ ಎಸ್‍ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಒಂದುದಿನ ಪೂರ್ತಿ ರೋಷನ್ ಬೇಗ್ ವಿಚಾರಣೆ ಮಾಡಿ ಅಧಿವೇಷನ ನಡೆಯುತ್ತಿದ್ದರಿಂದ ರೋಷನ್ ಬೇಗ್ ಬಿಟ್ಟು ಕಳಿಸಲಾಗಿತ್ತು. ಮೈತ್ರಿ ಸರ್ಕಾರ ಪತನ ಬಳಿಕ ಐಎಂಎ ಅಕ್ರಮದ ತನಿಖೆಯನ್ನು ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿತ್ತು.
ಸಿಬಿಐ ಅಧಿಕಾರಿಗಳು ಐಎಂಎ ಸಂಸ್ಥಾಪಕ ಮನ್ಸೂರ್ ಅಲಿಖಾನ್‍ನನ್ನು ವಂಚನೆ ಪ್ರಕರಣದಲ್ಲಿ ಬಂಧಿಸಿದ್ದರು. ಬಂಧನಕ್ಕೂ ಮೊದಲೇ ರೋಷನ್‍ಬೇಗ್ ಹಣ ಪಡೆದಿದ್ದಾರೆಂದು ಆರೋಪಿಸಿದ್ದ ವಿಡಿಯೋ ಹರಿ ಬಿಟ್ಟಿದ್ದ.
ಪ್ರಕರಣ ಸಿಬಿಐಗೆ ವರ್ಗಾವಣೆಯಾದ ಹಲವು ದಿನಗಳ ತನಿಖೆ ನಂತರ ರೋಷನ್ ಬೇಗ್ ಅವರನ್ನು ಇಂದು ವಿಚಾರಣೆಗೆ ಒಳಪಡಿಸಲಾಗಿತ್ತು. ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಧೀಶರ ಮುಂದೆ ರೋಷನ್ ಬೇಗ್ ಅವರನ್ನು ಹಾಜರುಪಡಿಸಲಾಯಿತು. ನ್ಯಾಯಾಧೀಶರು ರೋಷನ್ ಬೇಗ್‍ರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ರೋಷನ್ ಬೇಗ್‍ರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ.

ಮುಂದಿನ ಟಾರ್ಗೆಟ್ ಜಮೀರ್ ಅಹ್ಮದ್ ಖಾನ್..?
ಐಎಂಎ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಬಂಧನ ಬಳಿಕ ಚಾಮರಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್‍ಗೂ ಸಿಬಿಐನ ಬಂಧನ ಭೀತಿ ಎದುರಾಗಿದೆ.


ಈಗಾಗಲೇ ಐಎಂಎ ವಂಚನೆ ಕೇಸ್ ನಲ್ಲಿ ಜಮೀರ್ ಅಹ್ಮದ್‍ರನ್ನು ಸಿಬಿಐ ಅಧಿಕಾರಿಗಳು ನಾಲ್ಕು ಬಾರಿ ವಿಚಾರಣೆ ಮಾಡಿದ್ದಾರೆ. ರೋಷನ್‍ಬೇಗ್‍ಗೆ ಜೈಲಿನ ತೋರಿಸುತ್ತಿದ್ದಂತೆ ಜಮೀರ್ ಅಹ್ಮದ್‍ಗೂ ಬಂಧನ ಭೀತಿ ಶುರುವಾಗಿದೆ ಎನ್ನಲಾಗಿದೆ. ಹೀಗಾಗಿ ರೋಷನ್ ಬೇಗ್ ಬಳಿಕ ಮುಂದಿನ ದಿನಗಳಲ್ಲಿ ಸಿಬಿಐ ಮತ್ಯಾರಿಗೆ ಶಾಕ್ ನೀಡುತ್ತದೆ ಎಂದು ನೋಡಬೇಕಿದೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: cbiIMA scandaljameer ahmad khanRoshan Baigsend to jail
ShareTweetSendShare
Join us on:

Related Posts

bz-cup-media-cricket-tournament-bengaluru-september-5-6

ಬ್ಯಾಟ್ & ಬಾಲ್ ಸಮರಕ್ಕೆ ಸಜ್ಜಾದ ಮಾಧ್ಯಮ ಲೋಕ..! ಸೆಪ್ಟೆಂಬರ್ 5 ಮತ್ತು 6ರಂದು ಬೆಂಗಳೂರಿನಲ್ಲಿ ಬಿ.ಝಡ್. ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿ

by admin
September 4, 2026
0

ಮಾಧ್ಯಮ ಆಹ್ವಾನ ಸಂಪಾದಕರು/ ಮುಖ್ಯವರದಿಗಾರರು/ಕ್ರೀಡಾ ಸಂಪಾದಕರು ಸಿಎಂ ಕಪ್ ಆಯೋಜಿಸಿದ್ದ 9 ಡ್ರಿಮ್ಸ್ ತಂಡವು ಸೆಪ್ಟೆಂಬರ್ 5 ಮತ್ತು 6ರಂದು ಬೆಂಗಳೂರಿನ ಬಳ್ಳಾರಿ ರಸ್ತೆ ಜಿಕೆವಿಕೆ ಮೈದಾನದಲ್ಲಿ...

ಕೈ ಪಾಳಯದಲ್ಲಿ ಮುಗಿಯದ ಸಂಪುಟ ಪುನಾರಚನೆ ಸರ್ಕಸ್!: ಹಿರಿಯ ಸಚಿವರಿಗೆ ಕೊಕ್ ಹೊಸ ಮುಖಗಳಿಗೆ ಚಾನ್ಸ್ ದೆಹಲಿ ಪ್ರವಾಸದಲ್ಲಿ ನಿರ್ಧಾರವಾಗಲಿದೆ ಕೈ ನಾಯಕರ ಭವಿಷ್ಯ

ಪ್ರತಿಪಕ್ಷಗಳಿಗೆ ಖೆಡ್ಡಾ ತೋಡಿದ DK ಸರ್ಕಾರ :ಹಳೆಯ ಹಗರಣಗಳಿಗೆ ಜೀವ ನೀಡಿದ ಕಾಂಗ್ರೆಸ್- ಕುಮಾರಸ್ವಾಮಿ ಮತ್ತು ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್ ಅಸ್ತ್ರ

by Shwetha
September 4, 2026
0

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಸಾರಿದ್ದ ಸಮರಕ್ಕೆ...

ಪಿಒಪಿ ಗಣೇಶ ಮೂರ್ತಿಗಳ ನಿಷೇಧ ಜಾರಿ: ಪೊಲೀಸರ ನೆರವು ಕೋರಿದ ಮಾಲಿನ್ಯ ನಿಯಂತ್ರಣ ಮಂಡಳಿ

ಪಿಒಪಿ ಗಣೇಶ ಮೂರ್ತಿಗಳ ನಿಷೇಧ ಜಾರಿ: ಪೊಲೀಸರ ನೆರವು ಕೋರಿದ ಮಾಲಿನ್ಯ ನಿಯಂತ್ರಣ ಮಂಡಳಿ

by Shwetha
September 4, 2026
0

ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಹಾಗೂ ಭಾರ ಲೋಹಗಳನ್ನು ಒಳಗೊಂಡ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಬಳಕೆಯ ಮೇಲಿನ ನಿಷೇಧಕ್ಕೆ ಒಂದು ದಶಕಕ್ಕೂ ಹೆಚ್ಚು ಕಾಲ...

ವಾಯುಪಡೆಗೆ ನಿವೃತ್ತಿ: F-16  ವೀರಚಕ್ರ ಪುರಸ್ಕೃತ ಅಭಿನಂದನ್ ವರ್ಧಮಾನ್‌ ಈಗ FLY91 ಪೈಲಟ್

ವಾಯುಪಡೆಗೆ ನಿವೃತ್ತಿ: F-16 ವೀರಚಕ್ರ ಪುರಸ್ಕೃತ ಅಭಿನಂದನ್ ವರ್ಧಮಾನ್‌ ಈಗ FLY91 ಪೈಲಟ್

by Shwetha
September 4, 2026
0

ಪಾಕಿಸ್ತಾನದ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ಭಾರತೀಯ ವಾಯುಪಡೆಯ ವೀರಚಕ್ರ ಪ್ರಶಸ್ತಿ ಪುರಸ್ಕೃತ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್‌ ಅವರು ಭಾರತೀಯ ವಾಯುಪಡೆಯ...

parks-land-use-bill-withdrawn-bjp-victory-r-ashoka-seven-day-assembly

ಉದ್ಯಾನಗಳ ಶೇ.5 ಭೂ ಬಳಕೆ ಮಸೂದೆ ವಾಪಸ್‌, ಬಿಜೆಪಿಯ ಹೋರಾಟಕ್ಕೆ ಮತ್ತೊಂದು ಜಯ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
September 4, 2026
0

ಬೆಂಗಳೂರು,  ಕಾಂಗ್ರೆಸ್‌ ಸರ್ಕಾರ ಉದ್ಯಾನಗಳಲ್ಲಿ ಶೇ.5 ರಷ್ಟು ಭೂಮಿಯನ್ನು ಮೂಲಸೌಕರ್ಯಕ್ಕೆ ಬಳಸುವ ಮಸೂದೆ ಹಿಂಪಡೆದಿರುವುದು ಬಿಜೆಪಿಯ ಹೋರಾಟಕ್ಕೆ ಸಿಕ್ಕ ಮತ್ತೊಂದು ಜಯ. ಮುಂದೆಯೂ ಉದ್ಯಾನಗಳನ್ನು ಬಳಸುವುದಕ್ಕೆ ಬಿಜೆಪಿ ಅವಕಾಶ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram