RCB | ಬ್ಯಾಟಿಂಗ್ ನಲ್ಲಿ ಫಾಫ್.. ಬೌಲಿಂಗ್ ನಲ್ಲಿ ಜೋಶ್.. ಆರ್ ಸಿಬಿಗೆ ವಿಕ್ಟರಿ
1 min read
RCB vs GT Match Golden Duck faf du plessis saakshah tv
RCB | ಬ್ಯಾಟಿಂಗ್ ನಲ್ಲಿ ಫಾಫ್.. ಬೌಲಿಂಗ್ ನಲ್ಲಿ ಜೋಶ್.. ಆರ್ ಸಿಬಿಗೆ ವಿಕ್ಟರಿ
ಡಿ ವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 18 ರನ್ ಗಳಿಂದ ಮಣಿಸಿದೆ. ಆ ಮೂಲಕ ಅಂಕ ಪಟ್ಟಿಯಲ್ಲಿ 10 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ, ನಾಯಕ ಫಾಫ್ ಡುಪ್ಲಸಿ ಅವರು 96 ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತ್ತು.
ಆರ್ ಸಿಬಿ ಪರ ಅನುಜ್ ರಾವತ್(4), ವಿರಾಟ್ ಕೊಹ್ಲಿ(0) ಮೊದಲ ಓವರ್‌ನಲ್ಲೇ ಔಟಾದರೆ.
ಗ್ಲೆನ್ ಮ್ಯಾಕ್ಸ್‌ವೆಲ್ (23) ಹಾಗೂ ಸುಯಾಶ್ ಪ್ರಭುದೇಸಾಯಿ(10) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.
ಹೀಗಾಗಿ ಪವರ್-ಪ್ಲೇ ಮುಕ್ತಾಯಕ್ಕೂ ಮೊದಲೇ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಿತು.
ಆದರೆ ನಾಯಕ ಫಾಫ್ ಡುಪ್ಲೆಸ್ಸಿ 96 ರನ್(64 ಬಾಲ್, 11 ಬೌಂಡರಿ, 2 ಸಿಕ್ಸ್) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು.
ನಾಯಕನಾಗಿ ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದ ಫಾಫ್, ಐಪಿಎಲ್‌ನಲ್ಲಿ 50ನೇ ಅರ್ಧಶತಕ ದಾಖಲಿಸಿದರು.
ಕೊನೆ ಹಂತದವರೆಗೂ ತಾಳ್ಮೆಯ ಆಟವಾಡಿದ ಡುಪ್ಲೆಸ್ಸಿ, ತಂಡಕ್ಕೆ ಆಸರೆಯಾದರು.
ನಾಯಕನಿಗೆ ಉತ್ತಮ ಸಾಥ್ ನೀಡಿದ ಶಹಬಾಜ್ ಅಹ್ಮೆದ್ 26(22) ಉಪಯುಕ್ತ ಕಾಣಿಕೆ ನೀಡಿದರು.
ಅಲ್ಲದೇ ಡುಪ್ಲೆಸ್ಸಿ ಹಾಗೂ ಶಹಬಾಜ್ ಜೋಡಿ 4ನೇ ವಿಕೆಟ್‌ಗೆ 70 ರನ್‌ಗಳ ಅದ್ಭುತ ಜೊತೆಯಾಟವಾಡಿದರು.
ನಂತರ ಬಂದ ದಿನೇಶ್ ಕಾರ್ತಿಕ್ 13* ರನ್(8 ಬಾಲ್, 1 ಸಿಕ್ಸ್) ಮೂಲಕ ಡುಪ್ಲೆಸ್ಸಿಗೆ ಉತ್ತಮ ಸಾಥ್ ನೀಡಿದರು. ಈ ಇಬ್ಬರು 6ನೇ ವಿಕೆಟ್‌ಗೆ 49 ರನ್‌ಗಳ ಜೊತೆಯಾಟವಾಡಿ ತಂಡದ ಮೊತ್ತವನ್ನ 180ರ ಗಡಿದಾಟಿಸಿದರು.
ಈ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆರಂಭಿಕರಾಗಿ ಬಂದ ಕ್ವಿಂಟನ್ ಡಿಕಾಕ್(3), ಕೆ.ಎಲ್.ರಾಹುಲ್(30) ಉತ್ತಮ ಆರಂಭ ನೀಡಲಿಲ್ಲ.
ನಂತರ ಬಂದ ಮನೀಷ್ ಪಾಂಡೆ(6) ಸಹ ಬಹುಬೇಗನೆ ನಿರ್ಗಮಿಸಿದರು. ಬಳಿಕ ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದ ಕೃನಾಲ್ ಪಾಂಡ್ಯ(42) ಜವಾಬ್ದಾರಿಯ ಆಟವಾಡಿದರು.
ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡ(13), ಬಡೋನಿ(13), ಸ್ಟಾಯ್ನಿಸ್(24) ಹಾಗೂ ಹೋಲ್ಡರ್(16) ತಂಡಕ್ಕೆ ಗೆಲುವು ತಂದುಕೊಡಲಿಲ್ಲ.
ಆರ್ ಸಿಬಿ ಪರ ಜೋಶ್ ಹೇಜ಼ಲ್ವುಡ್ (4-0-25-4), ಹರ್ಷಲ್ ಪಟೇಲ್ 2, ಸಿರಾಜ್ ಮತ್ತು ಮ್ಯಾಕ್ಸ್ವೆಲ್ ತಲಾ 1 ವಿಕೆಟ್ ಪಡೆದು ಸಾಥ್ ನೀಡಿದರು.
Royal Challengers Bangalore beat Lucknow Super Giants