RCB ತೊರೆದ ಅಪತ್ಬಾಂಧವ – ABD ನಿವೃತ್ತಿ ಘೋಷಣೆ….

1 min read

RCB ತೊರೆದ ಅಪತ್ಬಾಂಧವ – ABD ನಿವೃತ್ತಿ ಘೋಷಣೆ

ರಾಯಲ್ ಚಾಲೆಂಜರ್ಸ್ ತಂಡದ ಅಭಿಮಾನಿಗಳಿಗೆ ಇಂದು ಶಾಕಿಂಗ್ ಸುದ್ದಿಯನ್ನ  ಎ ಬಿ ಡಿವಿಲಿಯರ್ ನೀಡಿದ್ದಾರೆ… ಇನ್ನು ಮುಂದೆ ಆರ್ ಸಿ ಬಿ ಜೆರ್ಸಿಯಲ್ಲಿ ABDಯನ್ನ ಕಾಣಲಾಗುವುದಿಲ್ಲ. ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದಾಗಿ ಶುಕ್ರವಾರ ತಿಳಿಸಿದ್ದಾರೆ. ಸುಪ್ರಸಿದ್ಧ, ವರ್ಣ ರಂಜಿತ ವೃತ್ತಿಜೀವನಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ.

 37 ವರ್ಷ ವಯಸ್ಸಿನ ಅಬ್ರಾಂ ಬೆಂಜಮಿನ್ ಡಿವಿಲಿಯರ್ ಅಭಿಮಾನಿಗಳ ಪಾಲಿಗೆ  ಏಲಿಯನ್ ಡಿವಿಲಿಯರ್ ಆಗಿದ್ದರು.. ಕ್ರೀಡಾಂಗಣದ ಮೂಲೆ ಮೂಲೆಗೂ ಚೆಂಡಟ್ಟನ್ನಟ್ಟುತ್ತಿದ್ದ ಪರಿ ನೋಡಿ ಮಿಸ್ಟರ್ 360 ಎಂಬ ಬಿರುದು ನೀಡಲಾಗಿತ್ತು. ಅಂಥಹ ದೈತ್ಯ ಪ್ರತಿಭೆ ಇಂದು ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ  ಡಿವಿಲಿಯರ್ಸ್ “ಇದು ಅತ್ಯಾದ್ಬುತ  ಪ್ರಯಾಣವಾಗಿದೆ, ಆದರೆ ನಾನು ಎಲ್ಲಾ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಎಂದು ಹೇಳಿದ್ದಾರೆ.

2018 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದ ಡಿವಿಲಿಯರ್ಸ ಐಪಿಲ್ ಸೇರಿದ್ದಂತೆ ವಿದೇಶಿ ಟಿ 20 ಕ್ರಿಕೆಟ್ ಲೀಗ್ ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd