RR vs KKR Match Prediction | ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಗೆಲುವು ಯಾರಿಗೆ..?

1 min read
rr-vs-kkr-30th-match-Head to Head Record saaksha tv

RR vs KKR Match Prediction | ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಗೆಲುವು ಯಾರಿಗೆ..?

ಇಂಡಿಯನ್ ಪ್ರಿಮಯರ್ ಲೀಗ್ ನ 30ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಎರಡೂ ತಂಡಗಳು ಗೆಲುವಿಗಾಗಿ ಗುದ್ದಾಟ ನಡೆಸಲಿವೆ.

ಶ್ರೇಯಸ್ ಅಯ್ಯರ್ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದೊಡ್ಡ ಅಂತರದಿಂದ ಸೋಲು ಕಂಡಿದೆ.

ಹೀಗಾಗಿ ಸಂಘೀಕ ಪ್ರದರ್ಶನದ ಮೂಲಕ ಇಂದಿನ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡುವ ಪ್ಲಾನ್ ನಲ್ಲಿದೆ ಕೆಕೆಆರ್ ತಂಡ. ಅಯ್ಯರ್ ಹುಡುಗರು ಈ ಬಾರಿಯ ಐಪಿಎಲ್  ನಲ್ಲಿ ಐದು ಪಂದ್ಯಗಳನ್ನು ಆಡಿದ್ದಾರೆ.

ಪೈಕಿ ಮೂರು ಪಂದ್ಯಗಳನ್ನು ಗೆದ್ದುಕೊಂಡಿದ್ದು, ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಸದ್ಯ ಕೆಕೆಆರ್ ತಂಡ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಈ ಸೀಸನ್ ನಲ್ಲಿ ಕೆಕೆಆರ್ ತಂಡ ಬಲಿಷ್ಠವಾಗಿದೆ, ಆದರೆ ಸ್ಥಿರ ಆಟ ಬಂದಿಲ್ಲ. ಓಪನರ್ ವೆಂಕಟೇಶ್ ಅಯ್ಯರ್ ಫಾರ್ಮ್ ಕಳೆದುಕೊಂಡಿದ್ದಾರೆ. ಆ್ಯರೋನ್ ಫಿಂಚ್ ಪ್ರಯೋಗ ಯಶಸ್ವಿ ಕಂಡಿಲ್ಲ.

ಹೀಗಾಗಿ ಸ್ಯಾಮ್ ಬಿಲ್ಲಿಂಗ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡು, ಸುನೀಲ್ ನರೈನ್ ಅವರನ್ನು ಆರಂಭಿಕನಾಗಿ ಕಳುಹಿಸುವ ಪ್ಲಾನ್ ಇದೆ. ಶ್ರೇಯಸ್ ಮತ್ತು ನಿತೀಶ್ ಟಚ್ ಕಂಡುಕೊಂಡಿದ್ದಾರೆ.

ರಸೆಲ್ ಮತ್ತು ಕಮಿನ್ಸ್ ಫಿನಿಷಿಂಗ್ ಕೊಡಬಹುದು. ಬೌಲಿಂಗ್ ನಲ್ಲಿ ಕಮಿನ್ಸ್, ಉಮೇಶ್ ಯಾದವ್,  ನರೈನ್ ಮತ್ತು ಚಕ್ರವರ್ತಿ ತಂಡದ ಪ್ಲಾಸ್ ಪಾಯಿಂಟ್ ಆಗಿದ್ದಾರೆ.

ರಸಿಕ್ ಸಲಾಂ, ರಸೆಲ್ ಮತ್ತು ವೆಂಕಟೇಶ್ ಅಯ್ಯರ್ ದುಬಾರಿಯಾದ ಬೌಲರ್ ಗಳಿಗೆ ರಿಪ್ಲೇಸ್ ಮೆಂಟ್ ಆಗಿದ್ದಾರೆ.

RR vs KKR Match Prediction ipl 2022 saaksha tv

ಇತ್ತ ರಾಯಸ್ಥಾನ್ ರಾಯಲ್ಸ್ ತಂಡದ ವಿಚಾರಕ್ಕೆ ಬಂದರೇ

ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 37 ರನ್ ಗಳಿಂದ ಸೋಲು ಕಂಡಿದೆ.

ಈ ಸೀಸನ್ ನಲ್ಲಿ ಐದು ಪಂದ್ಯಗಳನ್ನಾಡಿರುವ ರಾಜಸ್ಥಾನ್ ತಂಡ ಮೂರು ಗೆಲುವು, ಎರಡು ಸೋಲುಗಳನ್ನು ಅನುಭವಿಸಿದೆ.

ಹೀಗಾಗಿ ಅಂಕಪಟ್ಟಿಯಲ್ಲಿ ರನ್ ರೇಟ್ ಆಧಾರದಲ್ಲಿ ಐದನೇ ಸ್ಥಾನದಲ್ಲಿದೆ. ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಟ್ರೆಂಟ್ ರೆಸ್ಟ್ ಪಡೆದುಕೊಂಡಿದ್ದರು.

ಇಂದಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿದ್ದು, ತಂಡಕ್ಕೆ ಬೂಸ್ಟ್ ನೀಡಿದೆ. ರಾಜಸ್ಥಾನ ತಂಡದಲ್ಲಿ ಜೋಸ್ ಬಟ್ಲರ್ ಉತ್ತಮ ಫಾರ್ಮ್ನಲ್ಲಿದ್ದಾರೆ.

ಆದರೆ ದೇವದತ್ ಪಡಿಕಲ್ ಮತ್ತು ಸಂಜುಸ್ಯಾಮ್ಸನ್ ಆಟ ಕೇವಲ ಒಂದು ಪಂದ್ಯಕ್ಕೆ ಮಾತ್ರ ಸೀಮಿತವಾಗಿದೆ. ಶಿಮ್ರನ್ ಹೆಟ್ಮಯರ್ ಬ್ಯಾಟಿಂಗ್ ಫಾರ್ಮ್ ಉತ್ತಮವಾಗಿದೆ.  

ಇನ್ನು ರಿಯಾಲ್ ಪರಾಗ್ ಮತ್ತು ಅಶ್ವಿನ್ ಆಲ್ ರೌಂಡರ್ಗಳಾಗಿ ಇನ್ನುಷ್ಟು ಮಿಂಚಬೇಕಿದೆ.. ಬೌಲಿಂಗ್ ನಲ್ಲಿ  ಟ್ರೆಂಟ್ ಬೋಲ್ಟ್ ಮತ್ತು ಪ್ರಸಿಧ್ ಕೃಷ್ಣ ಹೊಸ ಚೆಂಡು ಹಂಚಿಕೊಂಡರೆ ಅಶ್ವಿನ್ ಮತ್ತು ಚಹಲ್ ಟ್ರಂಪ್ ಕಾರ್ಡ್ ಸ್ಪಿನ್ನರ್ಗಳಾಗಿದ್ದಾರೆ.  

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd