RR vs PBKS Match | ಯಾರು ಬಲಿಷ್ಠರು.. ಗೆಲುವು ಯಾರಿಗೆ..?
ಇಂಡಿಯನ್ ಪ್ರಿಮಿಯರ್ ಲೀಗ್ ನ 52 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ – ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಮುಂಬೈನ ವಾಂಖೇಡೆ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದೆ.
ಮಯಾಂಕ್ ಅಗರ್ ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ 15 ನೇ ಆವೃತ್ತಿಯಲ್ಲಿ ಈವರೆಗೂ 10 ಪಂದ್ಯಗಳನ್ನಾಡಿದೆ. ಈ ಪೈಕಿ ತಲಾ ಐದು ಪಂದ್ಯಗಳಲ್ಲಿ ಸೋಲು ಗೆಲುವುಗಳನ್ನು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಪಂಜಾಬ್ ತಂಡ 10 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.
ಸಂಜು ಸ್ಯಾಮ್ ಸನ್ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ತಂಡ ಈ ಸೀಸನ್ ನಲ್ಲಿ ಈವರೆಗೂ 10 ಪಂದ್ಯಗನ್ನಾಡಿದೆ. ಈ ಪೈಕಿ ಆರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಅಂದಹಾಗೆ ಪಂಜಾಬ್ ಕಿಂಗ್ಸ್ ತಂಡ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ಟೈಟಾನ್ಸ್ 8 ವಿಕೆಟ್ ಗಳೊಂದಿಗೆ ಜಯ ಸಾಧಿಸಿದೆ. ಪಂಜಾಬ್ ಪರ ಶಿಖರ್ ಧವನ್ 62 ರನ್, ಬುನಕಾ ರಾಜಪಕ್ಸೆ 40 ರನ್ ಗಳಿಸಿದ್ದರು.
ಇತ್ತ ರಾಜಸ್ಥಾನ್ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಹೋರಾಟ ನಡೆಸಿತ್ತು. ಇದರಲ್ಲಿ ಕೆಕೆಆರ್ ತಂಡ ಏಳು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ರಾಯಲ್ಸ್ ಪರ ಸಂಜು ಸ್ಯಾಮ್ ಸನ್ 54 ರನ್, ಹಿಟ್ಮೇಯರ್ 27 ರನ್ ಗಳಿಸಿದ್ದರು.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ಪಂಜಾಬ್ ಕಿಂಗ್ಸ್ ತಂಡಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ಸಮಸ್ಯೆಗಳು ತಲೆ ನೋವು ತಂದೊಡ್ಡಿದೆ. ಇಡೀ ತಂಡದ ಗೆಲುವು ಶಿಖರ್ ಧವನ್, ಭನುಕಾ ರಾಜಪಕ್ಸೆ, ಲಿಯಾಮ್ ಲಿವೀಂಗ್ ಸ್ಟೋನ್ ಬ್ಯಾಟಿಂಗ್ ಮೇಲೆ ನಿಂತಿದೆ. ಮುಖ್ಯವಾಗಿ ನಾಯಕ ಮಯಾಂಕ್ ಅಗರ್ ವಾಲ್ ಬ್ಯಾಡ್ ಫಾರ್ಮ್ ತಂಡಕ್ಕೆ ದೊಡ್ಡ ಮೈನಸ್ ಪಾಯಿಂಟ್ ಆಗಿದೆ. ಮಯಾಂಕ್ ಈ ಆವೃತ್ತಿಯಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶ ನೀಡಿಲ್ಲ. ಅದೇ ರೀತಿಯಾಗಿ ಭಾರಿ ನಿರೀಕ್ಷೆ ಮೂಡಿಸಿದ್ದ ಜಾನಿ ಬೈ ಸ್ಟೋ ಕೂಡ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗುತ್ತಿದ್ದಾರೆ. ಇನ್ನು ಜಿತೇಶ್ ಶರ್ಮಾ ಬ್ಯಾಟ್ ನಿಂದ ರನ್ ಗಳು ಬರುತ್ತಿದ್ದರೂ ಪಂದ್ಯವನ್ನು ಗೆಲ್ಲಿಸಿಕೊಡುತ್ತಿಲ್ಲ. ರಿಷಿ ಧವನ್ ಬ್ಯಾಟಿಂಗ್ ಪರಿಣಾಮಕಾರಿಯಾಗಿಲ್ಲ.
ಆದ್ರೆ ಬೌಲಿಂಗ್ ನಲ್ಲಿ ಪಂಜಾಬ್ ತಂಡ ಉತ್ತಮವಾಗಿದೆ. ಕಗಿಸೋ ರಬಾಡ ಪವರ್ ಪ್ಲೇ ನಲ್ಲಿ ವಿಕೆಟ್ ಬೇಟೆಯಾಡುತ್ತಿದ್ದಾರೆ. ಅರ್ಷದೀಪ್ ಸಿಂಗ್, ರಿಷಿ ದವನ್, ಸಂದೀಪ್ ಶರ್ಮಾ ಮಿಡಲ್ ಮತ್ತು ಡೆತ್ ಓವರ್ ಗಳಲ್ಲಿ ಬ್ಯಾಟರ್ ಗಳನ್ನು ಕಾಡುತ್ತಿದ್ದಾರೆ. ರಾಹುಲ್ ಚಹಾರ್ ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಬಲಿಷ್ಠವಾಗಿದೆ. ಆದ್ರೆ ದೇವದತ್ ಪಡಿಕಲ್, ಕರುಣ್ ನಾಯರ್ ಅಸ್ಥಿರ ಆಟ ತಂಡದ ಮೈನಸ್ ಪಾಯಿಂಟ್ ಆಗಿದೆ. ಉನ್ನುಳಿದಂತೆ ಜೋಸ್ ಬಟ್ಲರ್ ಬ್ಯಾಟಿಂಗ್ ಅಬ್ಬರ, ಸಂಜು ಸ್ಯಾಮ್ಸನ್ ಸಮಯೋಜಿತ ಆಟ, ಹಿಟ್ಮೇಯರ್ ವಿಧ್ವಂಸಕ ಬ್ಯಾಟಿಂಗ್ ತಂಡದ ಯಶಸ್ಸಿಗೆ ಕಾರಣವಾಗಿದೆ. ಇವರ ಜೊತೆಗೆ ರಿಯಾನ್ ಪರಾಗ್ ಮಿಂಚಬೇಕಿದೆ. ಇನ್ನ ಬೌಲಿಂಗ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಅತ್ಯುತ್ತಮವಾಗಿದೆ. ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಹಾಲ್ ವಿಕೆಟ್ ಬೇಟೆಯಾಡುತ್ತಿರೋದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಟ್ರೆಂಟ್ ಬೋಲ್ಟ್ ತಂಡಕ್ಕೆ ಆರಂಭದಲ್ಲಿಯೇ ಬ್ರೇಕ್ ತಂದುಕೊಡುತ್ತಿದ್ದಾರೆ. ಪ್ರಸಿದ್ಧ್ ಕೃಷ್ಣ, ಕುಲ್ ದೀಪ್ ಸೇನ್ ಎದುರಾಳಿಗಳನ್ನು ಕಾಡುತ್ತಿದ್ದಾರೆ. RR VS PBKS MATCH PREDICTION- WHO WILL WIN TODAY