RR vs PBKS Match | ಪಂಜಾಬ್ ತಂಡದ ಪ್ಲೇಯಿಂಗ್ 11
ಮಯಾಂಕ್ ಅಗರ್ ವಾಲ್ ನಾಯಕತ್ವ ಪಂಜಾಬ್ ಕಿಂಗ್ಸ್ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಬೇಕಾದರೇ ಇನ್ನುಳಿದ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕು.
ಈ ಒತ್ತಡದಲ್ಲಿ ಇಂದು ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಮುಂಬೈನ ವಾಂಖೇಡೆ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದೆ.
ಮಯಾಂಕ್ ಅಗರ್ ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ 15 ನೇ ಆವೃತ್ತಿಯಲ್ಲಿ ಈವರೆಗೂ 10 ಪಂದ್ಯಗಳನ್ನಾಡಿದೆ.
ಈ ಪೈಕಿ ತಲಾ ಐದು ಪಂದ್ಯಗಳಲ್ಲಿ ಸೋಲು ಗೆಲುವುಗಳನ್ನು ಕಂಡಿದೆ.
ಹೀಗಾಗಿ ಅಂಕಪಟ್ಟಿಯಲ್ಲಿ ಪಂಜಾಬ್ ತಂಡ 10 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.
ಅಂದಹಾಗೆ ಪಂಜಾಬ್ ಕಿಂಗ್ಸ್ ತಂಡ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಹೋರಾಟ ನಡೆಸಿತ್ತು.
ಈ ಪಂದ್ಯದಲ್ಲಿ ಟೈಟಾನ್ಸ್ 8 ವಿಕೆಟ್ ಗಳೊಂದಿಗೆ ಜಯ ಸಾಧಿಸಿದೆ. ಪಂಜಾಬ್ ಪರ ಶಿಖರ್ ಧವನ್ 62 ರನ್, ಬುನಕಾ ರಾಜಪಕ್ಸೆ 40 ರನ್ ಗಳಿಸಿದ್ದರು.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ಪಂಜಾಬ್ ಕಿಂಗ್ಸ್ ತಂಡಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ಸಮಸ್ಯೆಗಳು ತಲೆ ನೋವು ತಂದೊಡ್ಡಿದೆ. ಇಡೀ ತಂಡದ ಗೆಲುವು ಶಿಖರ್ ಧವನ್, ಭನುಕಾ ರಾಜಪಕ್ಸೆ, ಲಿಯಾಮ್ ಲಿವೀಂಗ್ ಸ್ಟೋನ್ ಬ್ಯಾಟಿಂಗ್ ಮೇಲೆ ನಿಂತಿದೆ.
ಮುಖ್ಯವಾಗಿ ನಾಯಕ ಮಯಾಂಕ್ ಅಗರ್ ವಾಲ್ ಬ್ಯಾಡ್ ಫಾರ್ಮ್ ತಂಡಕ್ಕೆ ದೊಡ್ಡ ಮೈನಸ್ ಪಾಯಿಂಟ್ ಆಗಿದೆ. ಮಯಾಂಕ್ ಈ ಆವೃತ್ತಿಯಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶ ನೀಡಿಲ್ಲ.
ಅದೇ ರೀತಿಯಾಗಿ ಭಾರಿ ನಿರೀಕ್ಷೆ ಮೂಡಿಸಿದ್ದ ಜಾನಿ ಬೈ ಸ್ಟೋ ಕೂಡ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗುತ್ತಿದ್ದಾರೆ.
ಇನ್ನು ಜಿತೇಶ್ ಶರ್ಮಾ ಬ್ಯಾಟ್ ನಿಂದ ರನ್ ಗಳು ಬರುತ್ತಿದ್ದರೂ ಪಂದ್ಯವನ್ನು ಗೆಲ್ಲಿಸಿಕೊಡುತ್ತಿಲ್ಲ. ರಿಷಿ ಧವನ್ ಬ್ಯಾಟಿಂಗ್ ಪರಿಣಾಮಕಾರಿಯಾಗಿಲ್ಲ.
ಆದ್ರೆ ಬೌಲಿಂಗ್ ನಲ್ಲಿ ಪಂಜಾಬ್ ತಂಡ ಉತ್ತಮವಾಗಿದೆ. ಕಗಿಸೋ ರಬಾಡ ಪವರ್ ಪ್ಲೇ ನಲ್ಲಿ ವಿಕೆಟ್ ಬೇಟೆಯಾಡುತ್ತಿದ್ದಾರೆ.
ಅರ್ಷದೀಪ್ ಸಿಂಗ್, ರಿಷಿ ದವನ್, ಸಂದೀಪ್ ಶರ್ಮಾ ಮಿಡಲ್ ಮತ್ತು ಡೆತ್ ಓವರ್ ಗಳಲ್ಲಿ ಬ್ಯಾಟರ್ ಗಳನ್ನು ಕಾಡುತ್ತಿದ್ದಾರೆ. ರಾಹುಲ್ ಚಹಾರ್ ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ.
ಪ್ಲೇಯಿಂಗ್ ಇಲೆವೆನ್
ಮಯಾಂಕ್ ಅಗರ್ವಾಲ್ (c), ಶಿಖರ್ ಧವನ್, ಜಾನಿ ಬೈರ್‌ಸ್ಟೋ, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (WK), ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್, ಸಂದೀಪ್ ಶರ್ಮಾ
RR vs PBKS Match Punjab king team Playing 11