RR vs RCB Match | ಹೆಡ್ ಟು ಹೆಡ್ ರೆಕಾರ್ಡ್ ನಲ್ಲಿ ಯಾರು ಗ್ರೇಟ್ ಗುರೂ..?
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ರಾಯಲ್ಸ್ ಬ್ಯಾಟಲ್ ನಡೆಯಲಿದೆ. 15 ನೇ ಇಂಡಿಯನ್ ಪ್ರಿಮಿಯರ್ ಲೀಗ್ ನ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಗುದ್ದಾಡಲಿವೆ. ಈ ಹೈ ವೋಲ್ಟೇಜ್ ಪಂದ್ಯ ಭಾರಿ ಕುತೂಹಲ ಕೆರಳಿಸಿದೆ.
15 ನೇ ಸೀಸನ್ ನಲ್ಲಿ ಈ ಎರಡೂ ತಂಡಗಳು ಎರಡು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಉಭಯ ತಂಡಗಳು ತಲಾ ಒಂದೊಂದು ಬಾರಿ ಗೆಲುವು ಸಾಧಿಸಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಸಮಬಲದ ಹೋರಾಟ ನಿರೀಕ್ಷೆ ಮಾಡಲಾಗಿದೆ.
ಸಂಜು ಸ್ಯಾಮ್ಸನ್ ನಾಯಕತ್ವ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ ಕ್ವಾಲಿಫೇಯರ್ ನಲ್ಲಿ ಗುಜರಾತ್ ವಿರುದ್ಧ ಸೋಲುಂಡಿದೆ. ಇತ್ತ ಫಾಫ್ ಡುಪ್ಲಸಿಸ್ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿದೆ. ಹೀಗಾಗಿ ಅದೇ ಜೋಷ್ ನಲ್ಲಿ ಚಾಲೆಂಜರ್ಸ್, ರಾಯಲ್ಸ್ ಬೇಟೆಯಾಡುವ ಪ್ಲಾನ್ ಮಾಡಿಕೊಂಡಿದ್ದಾರೆ.
ಅಂದಹಾಗೆ ಇಂದಿನ ಕ್ವಾಲಿಫೇಯರ್ ಪಂದ್ಯ ನಾಕೌಟ್ ಪಂದ್ಯವಾಗಿದೆ. ಇಲ್ಲಿ ಗೆದ್ದವರು ಸೀದಾ ಫೈನಲ್ ತಲುಪಲಿದ್ದಾರೆ. ಸೋತವರು ಟೂರ್ನಿಯಲ್ಲಿ ಮೂರನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಲಿದ್ದಾರೆ.

ಹೆಡ್ ಟು ಹೆಡ್ ರೆಕಾರ್ಡ್ ವಿಚಾರಕ್ಕೆ ಬಂದರೇ
ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಈವರೆಗೂ 24 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಉಭಯ ತಂಡಗಳ ಮಧ್ಯೆ ಸಮಬಲದ ಹೋರಾಟ ನಡೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ರಾಯಲ್ಸ್ ತಂಡ 11 ಪಂದ್ಯಗಳಲ್ಲಿ ಗೆದ್ದಿದೆ.
ಅಹ್ಮದಾಬಾದ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಒಂದು ಪಂದ್ಯವನ್ನಾಡಿದ್ದು, ಅದರಲ್ಲಿ ಆರ್ ಸಿಬಿ ಗೆಲುವಿನ ನಗೆ ಬೀರಿದೆ.
ಇನ್ನು ಕಳೆದ ಐದು ಪಂದ್ಯಗಳ ಸೋಲು ಗೆಲುವಿನ ಲೆಕ್ಕಾಚಾರಕ್ಕೆ ಬಂದರೇ ಬೆಂಗಳೂರು ತಂಡ ಸಂಪೂರ್ಣವಾಗಿ ಓವರ್ ಟೇಕ್ ಮಾಡಿದೆ. ಐದು ಪಂದ್ಯದಲ್ಲಿ ನಾಲ್ಕು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಗೆಲುವು ಸಾಧಿಸಿದೆ. ರಾಯಲ್ಸ್ ತಂಡ ಒಂದು ಪಂದ್ಯದಲ್ಲಿ ಜಯ ಸಾಧಿಸಿದೆ.
ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಎಂಟು ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದಿದ್ದರೇ ರಾಯಲ್ ಚಾಲೆಂಜರ್ಸ್ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಚೇಸಿಂಗ್ ಮಾಡಿದಾಗ ಆರ್ ಸಿಬಿ ತಂಡ 10 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ರಾಜಸ್ಥಾನ್ ತಂಡ ಆರು ಪಂದ್ಯಗಳಲ್ಲಿಗೆ ಗೆದ್ದಿದೆ.
ಒಟ್ಟಾರೆ ಹೆಡ್ ಟು ಹೆಡ್ ರೆಕಾರ್ಡ್ ಏನೇ ಇದ್ದರೂ, ನಾಕೌಟ್ ಪಂದ್ಯಗಳಲ್ಲಿ ಅದೆಲ್ಲಾ ಲೆಕ್ಕಕ್ಕೆ ಬರೋದಿಲ್ಲ. ಇಂದಿನ ಪಂದ್ಯದಲ್ಲಿ ಯಾರೂ ಉತ್ತಮ ಕ್ರಿಕೆಟ್ ಆಡುತ್ತಾರೋ ಆ ತಂಡ ಗೆಲುವು ಸಾಧಿಸುತ್ತದೆ. ಆದ್ರೆ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಸೋತು ಇಂದಿನ ಪಂದ್ಯಕ್ಕೆ ಸಜ್ಜಾಗಿದೆ. ಇತ್ತ ಬೆಂಗಳೂರು ತಂಡ ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು ಇಂದು ಅಖಾಡಕ್ಕೆ ಇಳಿಯುತ್ತಿದೆ. ಹೀಗಾಗಿ ಬೆಂಗಳೂರು ತಂಡದ ಆತ್ಮವಿಶ್ವಾಸ ಡಬಲ್ ಆಗಿರುವುದರಲ್ಲಿ ಯಾವುದೇ ಅನುಮಾನ ಇಲ್ಲ.
rr-vs-rcb-match-Rajasthan Royals’ Head-to-Head Record Against Royal Challengers Bangalore








