RR vs RCB preview | ರಾಜಸ್ಥಾನ್ ತಂಡದ ಸಂಭಾವ್ಯ ಪ್ಲೇಯಿಂಗ್ 11
ಸತತ ಎರಡು ಬ್ಯಾಕ್ ಟು ಬ್ಯಾಕ್ ಗೆಲುವುಗಳಿಂದ ಆತ್ಮವಿಶ್ವಾಸದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುತ್ತಿದೆ.
15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ 39ನೇ ಪಂದ್ಯ ಇದಾಗಿದ್ದು, ಎಂಸಿಎ ಮೈದಾನದಲ್ಲಿ ರಾಯಲ್ಸ್ ಕಾಳಗ ನಡೆಯಲಿದೆ.
ಈ ಆವೃತ್ತಿಯಲ್ಲಿ ರಾಯಲ್ ಮತ್ತು ರಾಯಲ್ ಚಾಲೆಂಜರ್ಸ್ ತಂಡಗಳು ಎರಡನೇ ಬಾರಿಗೆ ಗುದ್ದಾಡಲಿವೆ. ಕಳೆದ ಬಾರಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಆರ್ ಸಿಬಿ ತಂಡ ನಾಲ್ಕು ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಆರ್ ಸಿಬಿ ಪರ ಶಹಬ್ಬಾಸ್ ಅಹ್ಮದ್ 45 ರನ್, ದಿನೇಶ್ ಕಾರ್ತಿಕ್ 44 ರನ್ ಗಳಿಸಿದ್ದರು. ರಾಯಲ್ಸ್ ಪರ ಜೋಸ್ ಬಟ್ಲರ್ 70 ರನ್, ಹಿಟ್ಮೇಯರ್ 42 ರನ್ ಸಿಡಿಸಿದ್ದರು.
ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮೂರನೇ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ ತಂಡ ಏಳು ಪಂದ್ಯಗಳನ್ನಾಡಿದ್ದು, ಐದು ಪಂದ್ಯಗಳಲ್ಲಿ ಗೆಲುವು, 2 ಪಂದ್ಯಗಳಲ್ಲಿ ಸೋತಿದೆ. ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಬಟ್ಲರ್ ಶತಕ ಸಿಡಿಸಿದ್ರೆ, ಪಡಿಕ್ಕಲ್ 54 ರನ್ ಬಾರಿಸಿದರು.
ರಾಜಸ್ಥಾನಕ್ಕೆ ಬ್ಯಾಟಿಂಗ್ ಭಯವಿಲ್ಲ. ಆರೇಂಜ್ ಕ್ಯಾಪ್ ವಿನ್ನರ್ ಜೋಸ್ ಬಟ್ಲರ್ ಪವರ್ ಪ್ಲೇ ಮತ್ತು ಮಧ್ಯಮ ಓವರ್ನಲ್ಲಿ ಪವರ್ ಹಿಟ್ ತೋರಿಸಿದ್ದಾರೆ. ಶಿಮ್ರನ್ ಹೆಟ್ಮಾಯರ್ ಫೈನಲ್ ಟಚ್ ಮೂಲಕ ಫಿನಿಶಿಂಗ್ ತಂದಿದ್ದಾರೆ. ದೇವದತ್ ಪಡಿಕಲ್, ಸಂಜು ಸ್ಯಾಮ್ಸನ್ ಸಂದರ್ಭಕ್ಕೆ ತಕ್ಕಂತೆ ಬ್ಯಾಟ್ ಬೀಸುತ್ತಿದ್ದಾರೆ. ಕರುಣ್ ನಾಯರ್, ರಿಯಾನ್ ಪರಾಗ್ ಕೊನೆಯಲ್ಲಿ ಸ್ಥಿರತೆ ತೋರಿಸಬೇಕಿದೆ. ಬೌಲಿಂಗ್ನಲ್ಲಿ ರಾಯಲ್ಸ್ ಸೂಪರ್. ಟ್ರೆಂಟ್ ಬೋಲ್ಟ್ ಮತ್ತು ಪ್ರಸಿಧ್ ಕೃಷ್ಣ ಆರಂಭದಲ್ಲೇ ವಿಕೆಟ್ ಪಡೆದು ಒತ್ತಡ ಹಾಕುತ್ತಿದ್ದಾರೆ. ಅಶ್ವಿನ್ ಮತ್ತು ಚಹಲ್ ಜೋಡಿ ಮೋಡಿ ಮಾಡುತ್ತಿದೆ.
ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (c & wk), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಕರುಣ್ ನಾಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಒಬೆದ್ ಮೆಕಾಯ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್ rr-vs-rcb-preview- rajasthan royals Probable XIs