RR ಗೆಲುವಿನ ಓಟಕ್ಕೆ ತಡೆ ಒಡ್ಡಲು RCB  ರೆಡಿ…..

1 min read

RR ಗೆಲುವಿನ ಓಟಕ್ಕೆ ತಡೆ ಒಡ್ಡಲು RCB  ರೆಡಿ…..

ಐಪಿಎಲ್ 2022 ರಲ್ಲಿ ಸತತ ಎರಡು ಗೆಲುವುಗಳ ನಂತರ, ರಾಜಸ್ಥಾನ್ ರಾಯಲ್ಸ್ , ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಇದು ಈ ಋತುವಿನ 13ನೇ ಪಂದ್ಯ.  ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಮತ್ತೊಮ್ಮೆ ಬಿಗ್ ಸ್ಕೋರ್ ಪೈಟ್ ನ ನಿರೀಕ್ಷೆ  ಇದೆ.  ಎರಡೂ ತಂಡಗಳು ಅದ್ಭುತ ಬ್ಯಾಟ್ಸ್‌ಮನ್‌ಗಳಿಂದ ತುಂಬಿವೆ. ರಾಜಸ್ಥಾನ ತಂಡ ಮೊದಲೆರಡು ಪಂದ್ಯಗಳಲ್ಲಿ 200 ರನ್‌ಗಳ ಗಡಿ ದಾಟಿದೆ.  ಬೆಂಗಳೂರು ಕೂಡ ಮೊದಲ ಪಂದ್ಯದಲ್ಲಿ 200 ರನ್ ಗಳಿಸಿತು.  ಇದೇ ಅಲೋಚನೆ ಮೇಲೆ ಲೆಕ್ಕಾಚಾರ ಹಾಕುವುದಾದರೆ  ಈ ಪಂದ್ಯದಲ್ಲಿ ಕೂಡ ರನ್ ಸಮುದ್ರವನ್ನೆ ನಿರೀಕ್ಷಿಸಬಹುದು.   IPL ನ ಈ ಋತುವಿನ ಇಬ್ಬನಿ ಪಂದ್ಯದ ಫಲಿತಾಂಶದ ಮೇಲೆ ಪ್ರಮುಖ ಪಾತ್ರ ವಹಿಸುತ್ತದೆ.

ರಾಜಸ್ಥಾನ ತಂಡ ಆಡಿದ ಎರಡೂ ಪಂದ್ಯಗಳನ್ನು ಭರ್ಜರಿ ಅಂತರದಿಂದ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಮೊದಲ ಪಂದ್ಯದಲ್ಲಿ ಸೋತಿದ್ದ ಬೆಂಗಳೂರು ಎರಡನೇ ಪಂದ್ಯದಲ್ಲಿ  ಗೆಲುವಿನ ದಾರಿಗೆ ಮರಳಿದೆ. ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.  ರಾಜಸ್ಥಾನ ಎರಡು ಪಂದ್ಯಗಳಲ್ಲಿ  ಎರಡನ್ನೂ ಗೆದ್ದು  ನಾಲ್ಕು ಅಂಕಗಳೊಂದಿಗೆ  ಮೊದಲ ಸ್ಥಾನದಲ್ಲಿದೆ.

ಈ ಪಂದ್ಯ  ವೇಳೆ ಮುಂಬೈನ ವಾತಾವರಣ  ಶುಭ್ರವಾಗಿರಲಿದೆ.  ಪಂದ್ಯದ ವೇಳೆ ಮಳೆ ಬೀಳುವ ಸಾಧ್ಯತೆ ಶೇ.10 ಮಾತ್ರ. 31 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಮತ್ತು ಗಂಟೆಗೆ 24 ಕಿ.ಮೀ ಗಾಳಿಯ ವೇಗ ದಾಖಲಾಗಿದೆ.  ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿಯನ್ನು ನಿರೀಕ್ಷಿಸಲಾಗಿದೆ.

ವಾಂಖೆಡೆ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಸಹಾಯಕವಾಗಿದೆ. ಈ ಪಂದ್ಯದಲ್ಲೂ ದೊಡ್ಡ ಮೊತ್ತವನ್ನ ಸೇರಿಸುವ  ಸಾಧ್ಯತೆ ಇದೆ. ಆದಾಗ್ಯೂ, ಆರಂಭದಲ್ಲಿ ಈ ಪಿಚ್ ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ.  ಜೊತೆಗೆ ಸಾಕಷ್ಟು ಸ್ವಿಂಗ್ ಪಡೆಯುತ್ತದೆ.  ಪವರ್‌ಪ್ಲೇಯಲ್ಲಿ ಫಾಸ್ಟ್ ಬೌಲರ್‌ಗಳು ಹೊಸ ಬಾಲ್ ನೊಂದಿಗೆ ವಿಕೆಟ್ ಉರುಳಿಸಬಹುದು.  ಆದರೆ, ನಂತರದ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ರನ್  ಕದಿಯುತ್ತಾರೆ.

ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್  11 ಈ ರೀತಿ ಇರಲಿದೆ.

ರಾಜಸ್ಥಾನದ

ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (c & wk), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಟ್ರೆಂಟ್ ಬೌಲ್ಟ್,  ಪ್ರಸಿದ್ಧ ಕೃಷ್ಣ, ನವದೀಪ್ ಸೈನಿ.

ಬೆಂಗಳೂರು

ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ (WK), ಶೆರ್ಫೇನ್ ರುದರ್‌ಫೋರ್ಡ್, ಡೇವಿಡ್ ವಿಲ್ಲಿ, ಶಹಬಾಜ್ ಅಹ್ಮದ್, ವನಿಂದು ಹಸ್ರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd