RRR , KGF 2 , ರಾಧೆ ಶ್ಯಾಮ್, ಬೀಸ್ಟ್, ವಿಕ್ರಾಂತ್ ರೋಣ ಇನ್ನೂ ಒಂದು ವರ್ಷ ರಿಲೀಸ್ ಆಗದೇ ಇರಬಹುದು…! ಕಾರಣ..???
2021 ರಲ್ಲಿ ಪುಷ್ಪ , ಸೂರ್ಯವಂಶಿ, ಮಾಸ್ಟರ್ , ಮದಗಜ ,ರಾಬರ್ಟ್ , ಯುವರತ್ನ, ಕೋಟಿಗೊಬ್ಬ 3 , ಸಲಗ ಇಂತಹ ಸಿನಿಮಾಗಳಿಂದ ಕೊಂಚ ಸಿನಿಮಾರಂಗ ಚೇತರಿಕೆ ಕಂಡಿತ್ತು.. 2022 ರಲ್ಲಿ ಸಾಲು ಸಾಲು ಸಿನಿಮಾಗಳು , ಅದ್ರಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ನಿಂತಿವೆ…
ಜನರು ಕಾತರದಿಂದೆದುರು ನೋಡ್ತಿರುವ ಸಿನಿಮಾಗಳು ರಾಜಮೌಳಿಯ RRR , ಪ್ರಶಾಂತ್ ನೀಲ್ – ರಾಕಿಂಗ್ ಸ್ಟಾರ್ ಯಶ್ ಅವರ KGF 2 , ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ , ಪ್ರಭಾಸ್ ನಟನೆಯ ರಾಧೆ ಶ್ಯಾಮ್ , ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಅವರ ಬೀಸ್ಟ್.. ಹೀಗೆ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಹೊಸ ವರ್ಷದಲ್ಲಿ ಸಿನಿಮಾ ಪ್ರಿಯರು ಎಕ್ಸೈಟೆಡ್ ಆಗಿದ್ರು..
ಆದ್ರೆ ಇದರ ನಡುವೆಯೇ ಕೋವಿಡ್ 3ನೇ ಅಲೆ ತೀವ್ರವಾಗಿ ಕಾಡಲಾರಂಭಿಸಿದ್ದು , ಒಮಿಕ್ರಾನ್ ಕರಿನೆರಳು ಕೂಡ ಈಗಾಗಲೇ ಸಿನಿಮಾರಂಗದ ಮೇಲೆ ಪರಿಣಾಮ ಬೀರಲಾರಂಭಿಸಿದೆ.. ಒಮಿಕ್ರಾನ್ ಗೆ ಹೆದರಿ ಈಗಾಗಲೇ RRR ಸಿನಿಮಾ ರಿಲೀಸ್ ದಿನಾಂಕವನ್ನ ಅಧಿಕೃತವಾಗಿ ಸಿನಿಮಾತಂಡ ಮುಂದೂಡಿದೆ.. ಅಬ್ಬರದ ಪ್ರಚಾರ ಶುರುಮಾಡಿ , ಟ್ರೇಲರ್ ರಿಲೀಸ್ ಮಾಡಿ , ಹಾಡುಗಳನ್ನ ರಿಲೀಸ್ ಮಾಡಿ , ಪ್ರೀ ರಿಲೀಸ್ ಈವೆಂಟ್ ನೂ ಶುರು ಮಾಡಿದ್ದ ಜಕ್ಕಣ್ಣನ ಟೀಮ್ ಈಗ ಹಿಂದೆ ಸರಿದಿದೆ..
ಇದೇ ತಿಂಗಳೇ ರಿಲೀಸ್ ಆಗಬೇಕಿದ್ದ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಸಿನಿಮಾ ಕೂಡ ರಿಲೀಸ್ ಡೇಟ್ ಮುಂದೂಡಿದ್ರೆ ಅಚ್ಚರಿ ಪಡಬೇಕಾಗಿಲ್ಲ.. ಯಾಕಂದ್ರೆ ಮತ್ತೆ ಭಾರತದಲ್ಲಿ ದೈನಂದಿನ ಕೇಸ್ ಗಳ ಸಂಖ್ಯೆ ಏರಿಕೆಯಾಗಿದೆ.. ಹೀಗೆ ಮುಂದುವರೆದ್ರೆ ಖಂಡಿತ ಸಿನಿಮಾಮಂದಿರಗಳನ್ನ ಮತ್ತೆ ಬಂದ್ ಮಾಡಿದ್ರೂ ಮಾಡಬಹುದು.. ಅಷ್ಟೇ ಅಲ್ಲ ಲಾಕ್ ಡೌನ್ ಹೇರಿದ್ರೂ ಅಚ್ಚರಿ ಪಡಬೇಕಾಗಿಲ್ಲ..
ಒಂದು ವೇಳೆ ಲಾಕ್ ಡೌನ್ ಆದ್ರೂ ಸಿನಿಮಾ ಮಂದಿರಗಳು ಬಂದ್ ಆದ್ರೂ ಕಡಿಮೆ ಅಂದ್ರು ಚಿತ್ರಮಂದಿರಗಳು ಸುಮಾರು 6 ತಿಂಗಳುಗಳ ಕಾಲ ಬಂದ್ ಆಗಬೇಕಾಗುತ್ತೆ.. ಎಲ್ಲಾ ಅಂದ್ರೆ 50 % ಸೀಟಿಂಗ್ ಹೇರಿದ್ರೂ ಒಬಿಗ್ ಬಜೆಟ್ ಸಿನಿಮಾಗಳ ಮೇಕರ್ ಗಳಿಗೆ ಲಾಸ್.. ಹೀಗಾಗಿಯೇ ಪ್ಯಾನ್ ಇಂಡಿಯಾ ಸಿನಿಮಾಗಳು ಲಾಕ್ ಡೌನ್ ಸಮಸ್ಯೆ , 50 % ಸೀಟಿಂಗ್ ತೊಂದರೆ , ಥಿಯೇಟರ್ ಬಂದ್ ಸಮಸ್ಯೆ , ಮತ್ತೆ ಪ್ರಚಾರ ಶುರು ಮಾಡಬೇಕು ಇದಕ್ಕೆಲ್ಲಾ ಒಂದು ವರ್ಷವೇ ಕಳೆದುಹೋಗಿಬಿಡುತ್ತೆ.. ಹೀಗಾಗಿಯೇ ಏಪ್ರಿಲ್ 14 ಗೆ ರಿಲೀಸ್ ಗೆ ಸಜ್ಜಾಗಿರೋ KGF 2 ಇರಬಹುದು , ವಿಕ್ರಾಂತ್ ರೋಣ , RRR ಇರಬಹುದು , ರಾಧೆ ಶ್ಯಾಮ್ ಬೀಸ್ಟ್ ಇವೆಲ್ಲಾ ಸಿನಿಮಾಗಳು ಒಂದು ವರ್ಷದ ವರೆಗೂ ರಿಲೀಸ್ ಆಗೋದು ಬಹುತೇಕ ಅನುಮಾನ…