RRR : ಚರಿತ್ರೆ ಸೃಷ್ಟಿಸಿದ ನಾಟು ನಾಟು; ಆಸ್ಕರ್ ಗೆ ನಾಮ ನಿರ್ದೇಶನಗೊಂಡ ಮೊದಲ ಭಾರತೀಯ ಗೀತೆ
ಆಸ್ಕರ್ ಎಂಬುದು ಸಿನಿಮಾ ರಂಗದಲ್ಲಿ ನೀಡುವ ನೊಬೆಲ್ ನಂತೆ. ಈ ಪ್ರಶಸ್ತಿಗಾಗಿ ಜಗತ್ತಿನ ಸಿನಿಮಾ ಮಂದಿ ಕನಸು ಕಾಣುತ್ತಿರುತ್ತಾರೆ. ಈ ಪ್ರಶಸ್ತಿಗೆ ನಾಮನಿರ್ದೇಶನದ ವರೆಗೂ ಹೋದರೇ ಸಾಕು ಎಂದು ಹುಚ್ಚರಂತೆ ಕಾಯುತ್ತಾರೆ.
ಇದೀಗ ಅಂತಹದ್ದೇ ಸಮಯವೊಂದು ಭಾರತಕ್ಕೆ ಲಭಿಸಿದೆ. ರಾಜಮೌಳಿ ನಿರ್ದೇಶನದ RRR ಚಿತ್ರ ಆಸ್ಕರ್ ನಾಮ ನಿರ್ದೇಶನದಲ್ಲಿ ನಿಂತುಕೊಂಡಿದೆ. 95ನೇ ಆಸ್ಕರ್ ನಾಮ ನಿರ್ದೇಶನಗಳು ನಿನ್ನೆ ಸಂಜೆ ಭಾರತೀಯ ಕಾಲಮಾನ 7 ಗಂಟೆಗೆ ಪ್ರಸಾರವಾಯಿತು.
RRR ಸಿನಿಮ ಎಷ್ಟು ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಳ್ಳುತ್ತದೆ ಎಂಬ ಬಗ್ಗೆ ಕುತೂಹಲವಿತ್ತು. ನಿರೀಕ್ಷಯಂತೆ ಭಾರತೀಯರನ್ನ ಕುಣಿದು ಕುಪ್ಪಳಿಸುವಂತೆ ಮಾಡಿದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಆಸ್ಕರ್‌ಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಹಾಡು ಎಂಬ ಇತಿಹಾಸವನ್ನ ನಿರ್ಮಿಸಿದೆ. ಇನ್ನೂ ಕೆಲವು ವಿಭಾಗಗಳಲ್ಲಿ ನಿರೀಕ್ಷೆಯಂತೆ ಮುಟ್ಟಲಿಲ್ಲ.
ಇತ್ತೀಚೆಗಷ್ಟೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದು ಬಂದು ಇದೀಗ ಆಸ್ಕರ್ ನಾಮ ನಿರ್ದೇಶನದಲ್ಲಿ ನಿಂತಿರುವ ಕೀರವಾಣಿ ಮತ್ತು ರಾಜಮೌಳಿ ಅವರನ್ನ ಭಾರತೀಯ ಚಿತ್ರರಂಗದ ಎಲ್ಲರೂ ಗೌರವಿಸುತ್ತಿದ್ದಾರೆ.
ಅಧಿಕೃತ 95 ನೇ ಅಕಾಡೆಮಿ ಪ್ರಶಸ್ತಿ ಸಮಾರಂಭವು ಮಾರ್ಚ್ 12 ರಂದು ಓವೇಶನ್ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಅಲ್ಲಿಯವರೆಗಂತೂ ನಾವು ಕಾಯಲೇಬೇಕು.
ನಾಟು ನಾಟು ಹಾಡಿನೊಂದಿಗೆ, ಡಾಕ್ಯುಮೆಂಟರಿ ಕಿರುಚಿತ್ರ ವಿಭಾಗದಲ್ಲಿ ದಿ ಎಲಿಫೆಂಟ್ ವಿಸ್ಪರ್ಸ್ ಮತ್ತು ಡಾಕ್ಯುಮೆಂಟರಿ ಫ್ಯೂಚರ್ ಫಿಲ್ಮ್ ವಿಭಾಗದಲ್ಲಿ ಆಲ್ ದ ಬ್ರೀತ್ಸ್ ಎಂಬ ಭಾರತ ಚಿತ್ರಗಳು ಸಹ ನಾಮನಿರ್ದೇನಗೊಂಡಿವೆ.
RRR : Natu Natu created history.. First Indian song to get Oscar nomination..








