ರಾಜಮೌಳಿಯ ‘RRR’ ತಂಡ ಸೇರಿದ ‘ಬಾಹುಬಲಿ’..!  

1 min read

ರಾಜಮೌಳಿಯ ‘RRR’ ತಂಡ ಸೇರಿದ ‘ಬಾಹುಬಲಿ’..!

ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ರಾಜಮೌಳಿ ಸಾರಥ್ಯದ  RRR ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ ಆಗಿ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಸಿನಿಮಾ ಶೂಟಿಂಗ್ ಇನ್ನೇನು ಕೊನೆ ಹಂತ ತಲುಪಿದೆ.. ಈ ನಡುವೆ  ಪ್ರಚಾರ ಕಾರ್ಯವನ್ನು ಆರಂಭ ಮಾಡಿರುವ ಸಿನಿಮಾ ತಂಡವು  ಬಹುತೇಕ ಇತರ ನಟರ   ಅಭಿಮಾನಿಗಳ ಗಮನ ಸೆಳೆಯೋಕೆ ಒಳ್ಳೆ ತಂತ್ರ ಉಪಯೋಗಿಸಿದ್ದಾರೆ.. ಈಗಾಗಲೇ ಜೂ.ಎನ್‌ಟಿಆರ್, ರಾಮ್ ಚರಣ್ ತೇಜ, ಆಲಿಯಾ ಭಟ್‌, ಅಜಯ್ ದೇವಗನ್‌ರ ಕ್ಯಾರೆಕ್ಟರ್ ಪ್ರೋಮೊ ಬಿಡುಗಡೆ ಮಾಡಿರುವ ಚಿತ್ರತಂಡ ಕೆಲವು ದಿನಗಳ ಹಿಂದಷ್ಟೆ ಅದ್ಧೂರಿ ಮೇಕಿಂಗ್ ವಿಡಿಯೋ ಸಹ ಬಿಡುಗಡೆ ಮಾಡಿದೆ. ಸ್ನೇಹಿತರ ದಿನಕ್ಕೆ ವಿಶೇಷ ಹಾಡು ಸ್ನೇಹಿತರ ದಿನಾಚರಣೆಗೆ ಹಾಡು ಬಿಡುಗಡೆ ಆಗಲಿದ್ದು, ಆ ಹಾಡಿನಲ್ಲಿ RRR ಸಿನಿಮಾ ನಾಯಕರಾದ ಜೂ.ಎನ್‌ಟಿಆರ್, ರಾಮ್ ಚರಣ್ ಜೊತೆಗೆ ಪ್ರಭಾಸ್, ರವಿತೇಜ, ಸುನಿಲ್,  ನಿತಿನ್ ನಾನಿ ಸಹ ಕಾಣಿಸಿಕೊಳ್ಳಲಿದ್ದಾರೆ.

ಅಂದ್ಹಾಗೆ ಈ ಹಾಡಿನಲ್ಲಿ ಕಾಣಿಸಿಕೊಳ್ತಿರುವ ನಟರೆಲ್ಲರೂ ರಾಜಮೌಳಿ ಸಿನಿಮಾಗಳಲ್ಲಿ ನಟಿಸಿರುವವರೇ..  ಅದ್ರಲ್ಲೂ ರಾಜಮೌಳಿ ಪ್ರಭಾಸ್ ಕಾಂಬಿನೇಷನ್ ಬಗ್ಗೆ ಭಾರತ ಅಷ್ಟೇ ಅಲ್ದೇ ಇಡೀ ವಿಶ್ವಕ್ಕೆ ಗೊತ್ತು.. ಈ ಕಾಂಬಿನೇಷನ್ ನಲ್ಲಿ ಮೂಡಿಬಂದ ಬಾಹುಬಲಿ ಎರೆಡೂ ಚಾಪ್ಟರ್ ಗಳು ಸೂಪರ್ ಡೂಪರ್ ಹಿಟ್ ಆಗಿ ಹಿಂದಿನ ಎಲ್ಲಾ ಸಿನಿಮಾಗಳ ರೆಕಾರ್ಡ್ ಗಳನ್ನ ಧೂಳಿಪಟ ಮಾಡಿತ್ತು.. ಇದೀಗ ಬಾಹುಬಲಿ ರೆಕಾರ್ಡ್ ಮುರಿಯೋದಕ್ಕೆ ನಮ್ಮ ಕನ್ನಡದ KGF ಚಾಪ್ಟರ್ 2 ಸಜ್ಜಾಗಿದೆ.
ಈ ಹಾಡಿಗೆ ಎಂಎಂ ಕೀರವಾಣಿ  ಸಂಗೀತವನ್ನು  ನೀಡಲಿದ್ದಾರೆ. ಹಾಡನ್ನು ಕೀರಣವಾಣಿ ಪುತ್ರ ಕಲಾ ಭೈರವ ಹಾಡಲಿದ್ದಾರೆ. ಅಲ್ಲದೇ ಹಾಡಿನ ಚಿತ್ರೀಕರಣಕ್ಕಾಘಿ ದೊಡ್ಡ ಸೆಟ್ ಅನ್ನು ಹೈದರಾಬಾದ್‌ ನಲ್ಲಿ ಹಾಕಲಾಗಿದೆ. ಸ್ನೇಹದ ಮಹತ್ವ ಸಾರುವ ಹಾಡು ಇದಾಗಿರಲಿದೆ.

ಇನ್ನೂ ಈ ಹಿಂದೆ ಸಿನಿಮಾ ತಂಡವೇ ಘೋಷಣೆ ಮಾಡಿದ್ದಂತೆ ಸಿನಿಮಾ ಅಕ್ಟೋಬರ್ 13 ಕ್ಕೆ ರಿಲೀಸ್ ಆಗಲಿದೆ.. ಆದ್ರೆ ಕೊರೊನಾ  3ನೇ ಅಲೆಯೂ ಅಕ್ಟೋಬರ್ ನಲ್ಲಿ ಅಪ್ಪಳಿಸುವ ಸಾಧ್ಯತೆಯಿದ್ದು, ಮತ್ತೆ ದೇಶಾದ್ಯಂತ ಲಾಕ್ ಡೌನ್ ಜಾರಿಯಾದ್ರೆ , ಇಲ್ಲ ಥಿಯೇಟರ್ ಗಳು ಬಂದ್ ಆದ್ರೆ , 50 % ಸೀಟಿಂಗ್ ಮಾತ್ರವೇ ಅನುಮತಿ ನೀಡಿದ್ರೆ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋಗುವ ಸಾಧ್ಯತೆಗಳು ದಟ್ಟವಾಗಿವೆ..

ನೀಲಿ ಚಿತ್ರ  ನಿರ್ಮಾಣ : ಸ್ಪೋಟಕ ಮಾಹಿತಿ ಬಹಿರಂಗ  -ಲೈವ್ ಸ್ಟ್ರೀಮ್‌ ಗೆ ರಾಜ್ ಕುಂದ್ರಾ ಪ್ಲಾನಿಂಗ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd