ನೀಲಿ ಚಿತ್ರ  ನಿರ್ಮಾಣ : ಸ್ಪೋಟಕ ಮಾಹಿತಿ ಬಹಿರಂಗ  -ಲೈವ್ ಸ್ಟ್ರೀಮ್‌ ಗೆ ರಾಜ್ ಕುಂದ್ರಾ ಪ್ಲಾನಿಂಗ್..!

1 min read

ನೀಲಿ ಚಿತ್ರ  ನಿರ್ಮಾಣ : ಸ್ಪೋಟಕ ಮಾಹಿತಿ ಬಹಿರಂಗ  -ಲೈವ್ ಸ್ಟ್ರೀಮ್‌ ಗೆ ರಾಜ್ ಕುಂದ್ರಾ ಪ್ಲಾನಿಂಗ್..!

ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿ , ನ್ಯಾಯಾಲಯದ ತೀರ್ಪಿನಂತೆ ಜುಲೈ 23 ರವರೆಗೂ ಪೊಲೀಸ್ ಕಸ್ಟಡಿಯಲ್ಲಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ , ಉದ್ಯಮಿ ರಾಜ್ ಕುಂದ್ರಾ ಬಗ್ಗೆ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.. ನೀಲಿ ಚಿತ್ರಗಳನ್ನ ಮೊಬೈಲ್ ಅಪ್ಲಿಕೇಶನ್ ಮೂಲಕ ಅಪ್ ಲೋಡ್ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ರಾಜ್ ಕುಂದ್ರ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ 11 ಜನರನ್ನು ಬಂಧಿಸಿರುವ ಮುಂಬೈ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಹಾಗೆ ಕೆಲವು ಎಲೆಕ್ಟ್ರಾನಿಕ್ ಪುರಾವೆಗಳು ಸಿಕ್ಕಿದ್ದು, ಇದರಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ರಾಜ್ ಕುಂದ್ರಾ ಅಶ್ಲೀಲತೆಯನ್ನು ನೇರ ಪ್ರಸಾರ ಮಾಡುವ ದೊಡ್ಡ ಪ್ಲಾನ್  ಮಾಡಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ. ಅಶ್ಲೀಲ ವ್ಯವಹಾರವನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಪ್ಲಾನ್ ಮಾಡಿದ್ದರು, ಬಾಲಿವುಡ್ ನಷ್ಟೆ ದೊಡ್ಡದಾಗಿ ಇದನ್ನ ಬೆಳೆಸುವ ಯೋಜನೆ ರೂಪಿಸಿದ್ದರು ಎನ್ನುವ ವಿಚಾರ ಪೊಲೀಸ್ ವಿಚಾರಣೆ ವೇಳೆ ಬಹಿರಂಗವಾಗಿದೆ ಎಂದು ಆಂಗ್ಲ ವೆಬ್ ಪೋರ್ಟಲ್‌ ಗಳಲ್ಲಿ ವರದಿಯಾಗಿದೆ. ಹಾಟ್ ಶಾಟ್ ಆಪ್‌ ಗಳ ಮೂಲಕ ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡಿ ಅಪ್ ಲೋಡ್ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ರಾಜ್ ಕುಂದ್ರ ಪ್ರಮುಖ ಆರೋಪಿ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಬ್ಲೂ ಫಿಲ್ಮ್ ದಂಧೆ ಆರೋಪದಲ್ಲಿ ರಾಜ್ ಕುಂದ್ರ ಅವರನ್ನು ಮುಂಬೈ ಪೊಲೀಸರು ಜುಲೈ 19ರಂದು ರಾತ್ರಿ ಬಂಧಿಸಿದ್ದರು. ಇದೀಗ ಜುಲೈ 23ರ ವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ರಾಜ್ ಕುಂದ್ರ ಬಂಧನದ ಬಳಿಕ ಸಾಕಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ನೀಲಿ ಚಿತ್ರದಿಂದ ಹೇಗೆಲ್ಲ ವ್ಯವಹಾರ ಮಾಡುತ್ತಿದ್ದರು, ದೊಡ್ಡ ಮೊತ್ತದ ಹಣ ಹೇಗೆ ಸಂಪಾದನೆ ಮಾಡುತ್ತಿದ್ದರು ಎಂದು ರಾಜ್ ಕುಂದ್ರ ಮತ್ತು ಅವರ ಪಾರ್ಟನರ್ ನಡೆಸಿದ ವಾಟ್ಸಪ್ ಚಾಟ್‌ಗಳಿಂದ ಬಹಿರಂಗವಾಗಿದೆ. ಅಂದ್ಹಾಗೆ ರಾಜ್ ಕುಂದ್ರಾ ಸಿಕ್ಕಾಪಟ್ಟೆ ಟ್ರೋಲ್ ಆಗ್ತಯಿದ್ದು, ಪೋರ್ನ್ ವಿಡಿಯೋಗಳ ಬಗ್ಗೆ ಮಾಡಿದ್ದ  ಹಳೆಯ ಟ್ವಿಟ್ ಗಳು ವೈರಲ್ ಆಗ್ತಿದೆ..

ಟ್ವೀಟ್ ನಲ್ಲಿ ಏನಿತ್ತು..?

ರಾಜ್ ಕುಂದ್ರಾ ಅವರು ಈ ಹಿಂದೆ ಮಾಡಿದ್ದ  ಟ್ವೀಟ್ ಈಗ ಭಾರೀ ವೈರಲ್ ಆಗ್ತಿದೆ. ನೀಲಿ ಚಿತ್ರದ ಬಗ್ಗೆ ರಾಜ್ ಕುಂದ್ರಾ ಅವರು 2012ರಲ್ಲಿ ಮಾಡಿದ್ದ ಸುಮಾರು 8 – 9 ವರ್ಷಗಳ ಹಳೆಯ ಟ್ವೀಟ್‌ ಗಳು ಈಗ ವೈರಲ್ ಆಗುತ್ತಿವೆ. ವೇಶ್ಯಾವಾಟಿಕೆ ಮತ್ತು ಟ್ವೀಟ್ ನಲ್ಲಿ ‘ಕ್ಯಾಮೆರಾದಲ್ಲಿ ಸೆರೆಯಾದ ಸೆಕ್ಸ್‌ ನೋಡಲು ಹಣ ತೆರುವುದು ಕಾನೂನುಬದ್ಧ ಆಗಿರುವಾಗ ವೇಶ್ಯಾವಾಟಿಕೆ ಏಕೆ ಕಾನೂನು ಬಾಹಿರ’ ಎಂದು ರಾಜ್ ಕುಂದ್ರಾ ಪ್ರಶ್ನೆ ಮಾಡಿದ್ದರು. ಆ ಮೂಲಕ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದೇ ವರ್ಷ ಮಾಡಿದ್ದ ಮತ್ತೊಂದು ಟ್ವೀಟ್ ನಲ್ಲಿ ನಟರು ಕ್ರಿಕೆಟ್ ಆಡುತ್ತಿದ್ದಾರೆ. ಕ್ರಿಕೆಟಿಗರು ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣಿಗಳು ಪೋರ್ನ್ ವಿಡಿಯೋಗಳನ್ನು ನೋಡುತ್ತಿದ್ದಾರೆ. ಪೋರ್ನ್ ಸ್ಟಾರ್‌ ಗಳು ನಟರಾಗುತ್ತಿದ್ದಾರೆ ಎಂದಿದ್ದರು.

ಪೂನಂ ಪಾಂಡೆ ಆರೋಪ..!

ಅಲ್ಲದೇ ಕಾಂಟ್ರವರ್ಸಿ ಕ್ವೀನ್ , ಬೋಲ್ಡ್ ಹೇಳಿಕೆಗಳನ್ನೇ ನೀಡುತ್ತಾ ಸುದ್ದಿಯಲ್ಲಿರುವ ಮಾದಕ ನಟಿ ಪೂನಂ ಪಾಂಡೆ  ಈ ಹಿಂದೆ ರಾಜ್ ಕದ್ರಾ ವಿರುದ್ಧ ಮಾಡಿದ್ದ ಆರೋಪದ ಸುದ್ದಿ ಈಗ ವೈರಲ್ ಆಗ್ತಿದೆ.. ಹೌದು ಪೂನಂ  2019ರಲ್ಲಿಯೇ ರಾಜ್ ಕುಂದ್ರ ವಿರುದ್ಧ ದೂರು ದಾಖಲಿಸಿದ್ದರು.  ರಾಜ್ ಕುಂದ್ರರನ್ನು ‘ಬ್ಲೂ ಫಿಲ್ಮ್ ದಂಧೆಯ ಮಾಸ್ಟರ್ ಮೈಂಡ್’ ಎಂದು ಆರೋಪಿಸಿದ್ದರು ಎನ್ನುವ ಸುದ್ದಿ ಈಗ  ಬಿ ಟೌನ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ.. ರಾಜ್ ಕುಂದ್ರ ಬಂಧನದ ಬೆನ್ನಲ್ಲೇ ಪೂನಂ ಪಾಂಡೆ ಸಖತ್ ಟ್ರೆಂಡಿಂಗ್ ನಲ್ಲಿದ್ದಾರೆ. ಮಾಡೆಲ್, ನಟಿ ಪೂನಂ ಪಾಂಡೆ 2019ರಲ್ಲಿ ರಾಜ್ ಕುಂದ್ರ ವಿರುದ್ಧ ಮಾಡಿರುವ ಗಂಭೀರ ಆರೋಪ ಈಗ ಸದ್ದು ಮಾಡುತ್ತಿದೆ. ‘ಇಡೀ ಭಾರತದ ಪೋರ್ನ್ ವ್ಯವಹಾರದ ಹಿಂದಿ ರಾಜ್ ಕುಂದ್ರ ಇದ್ದಾರೆ. ರಾಜ್ ಪೋರ್ನ್ ಜಗತ್ತಿನ ಮಾಸ್ಟರ್ ಮೈಂಡ್’ ಎಂದು ಆರೋಪ ಮಾಡಿದ್ದರು

ಯೂಟ್ಯೂಬ್‌ ಸ್ಟಾರ್‌ ಪುನೀತ್‌ ಕೌರ್‌ ಆರೋಪ..!

ಮತ್ತೊಂದೆಡೆ ಅಶ್ಲೀಲ ಚಿತ್ರಗಳಲ್ಲಿ ಕಾಣಿಸಿಕೊಳ್ಳುವಂತೆ ರಾಜ್‌ ಕುಂದ್ರಾ ಅವರು ತಮಗೆ ನೇರ ಸಂದೇಶ ಕಳುಹಿಸಿದ್ದರು ಎಂದು ಯೂಟ್ಯೂಬ್‌ ಸ್ಟಾರ್‌ ಪುನೀತ್‌ ಕೌರ್‌ ಆರೋಪಿಸಿದ್ದರು. ಇಂತಹ ಚಿತ್ರಗಳಲ್ಲಿ ಕಾಣಿಸಿಕೊಳ್ಳುವಂತೆ ರಾಜ್‌ ಕುಂದ್ರಾ ಅವರು ತಮಗೆ ನೇರ ಸಂದೇಶ ಕಳುಹಿಸಿದ್ದರು ಎಂದು ತಮ್ಮ ಇನ್‌ಸ್ಟಾಗ್ರಾಮ್‌ ನಲ್ಲಿ  ವಿಡಿಯೊಗಳ  ಮೂಲಕ ಹೇಳಿಕೊಂಡಿದ್ದರು. ಈ ವಿಚಾರವಾಗಿ ಬರೆದುಕೊಂಡಿರುವ ಕೌರ್‌, ಬ್ರೋಸ್‌, ನೇರ ಸಂದೇಶ ಹೊಂದಿದ್ದ ವಿಡಿಯೊ ಪರಿಶೀಲನೆ ಮಾಡಿದ್ದನ್ನು ನೀವು ನೆನಪಿಸಿಕೊಳ್ಳುತ್ತಿದ್ದಾರಾ? ಅಲ್ಲಿ ರಾಜ್‌ ಕುಂದ್ರಾ ಹಾಟ್‌ ಶಾಟ್‌ ಗಾಗಿ ನನ್ನನ್ನು ಸಂಪರ್ಕಿಸಿದ್ದರು ಎಂದು ತಿಳಿಸಿದ್ದರು. ಅಲ್ಲದೇ ರಾಜ್‌ ಕುಂದ್ರಾ ನೇರ ಸಂದೇಶ ಕಳುಹಿಸಿದ್ದರು.. ನಾವು ಅದು ಸ್ಪಾಮ್ ಅಂದುಕೊಂಡಿದ್ದೆವು. ಈ ಮನುಷ್ಯ ನಿಜವಾಗಿಯೂ ಜನರಿಗೆ ಆಮಿಷವೊಡ್ಡುತ್ತಿದ್ದಾನೆ. ಈಗ ಅವನು ಜೈಲಿನಲ್ಲಿ ಕೊಳೆಯಲಿ ಎಂದು ಹೇಳಿದ್ದರು.

ಈ ನಡುವೆ ಮಾಡೆಲ್ ಗೆಹ್ಲೋನ್ ರಾಜ್ ಕುಂದ್ರ ಪರ ನಿಂತಿದ್ದರು. ಅವರು ಅಶ್ಲೀಲ ವಿಡಿಯೋಗಳ ಚಿತ್ರೀಕರಣ ಮಾಡುತ್ತಿರಲಿಲ್ಲ.. ಅದು ಬೋಲ್ಡ್ ವಿಡಿಯೋಗಳು. ನಾನು ಅವರ ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇನೆ.. ನನಗೆ ಬಲವಂತ ಮಾಡಲಿಲ್ಲ.. ಸಂಬಳವನ್ನೂ ಸರಿಯಾಗಿ ನೀಡಿದ್ರೂ.. ಎರಿಯೋಟಿಕ್ ವಿಡಿಯೋಗಳನ್ನ ಪಾರ್ನ್ ವಿಡಿಯೋಗಳ ಜೊತೆ ಸೇರಿಸಬೇಡಿ ಎಂದಿದ್ದರು..

ವರ್ಷದ ಫೆಬ್ರವರಿಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು, ತನಿಖೆ ವೇಳೆ ಪ್ರಕರಣದ ಮುಖ್ಯ ಆರೋಪಿ ರಾಜ್ ಕುಂದ್ರಾ ಎಂದು ತಿಳಿದುಬಂದಿದ್ದು ಅವರ ವಿರುದ್ಧ ಪ್ರಾಥಮಿಕ ಸಾಕ್ಷ್ಯಗಳನ್ನು ಒಟ್ಟುಗೂಡಿಸಿಕೊಂಡ ಬಳಿಕ ಅವರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ರಾಜ್ ಕುಂದ್ರಾ ಉದ್ಯಮಿ ಆಗಿದ್ದು, ಐಪಿಎಲ್ ತಂಡ ರಾಜಸ್ಥಾನ ರಾಯಲ್ಸ್‌ನ ಮಾಲೀಕರು ಸಹ ಆಗಿದ್ದಾರೆ.  ಈ ನಡುವೆ ಮಾಡೆಲ್ ಒಬ್ಬರು ರಾಜ್ ಕುಂದ್ರಾ ಬೆಂಬಲಕ್ಕೆ ಬಂದಿದ್ದು, ರಾಜ್ ಕುಂದ್ರ ತಪ್ಪು ಮಾಡಿಲ್ಲ.. ಪಾರ್ನ್ ವಿಡಿಯೋಸ್ ಶುಟ್ ಮಾಡಿಸಿಲ್ಲ. ಇವು ಬೋಲ್ಡ್ ವಿಡಿಯೋಸ್. ಎರಿಯೋಟಿಕ್ ವಿಡಿಯೋಗಳನ್ನ ಪಾರ್ನ್ ವಿಡಿಯೋಗಳ ಜೊತೆಗೆ ಸೇರಿಸಬೇಡಿ ಎಂದಿದ್ದಾರೆ. ಕಳೆದ ವರ್ಷದಿಂದ ಅಶ್ಲೀಲ ಚಿತ್ರೀಕರಣ ದಂಧೆಯ ಹಿಂದೆ ಬಿದ್ದಿದ್ದ ಪೊಲೀಸರು ದೊಡ್ಡ ಜಾಲವನ್ನು ಪತ್ತೆ ಮಾಡಿ 9 ಜನರನ್ನು ಬಂಧಿಸಿದ್ದಾರೆ. ಅಲ್ಲದೇ ಇನ್ನೂ ಅನೇಕರ ಹೆಸರುಗಳು ಕೇಳಿ ಬರ್ತಿವೆ ಎನ್ನಲಾಗಿದೆ..

ಮದುವೆ ಫೇಲ್ , ಅಧ್ಯಾತ್ಮದ ಹಾದಿಯಲ್ಲಿ ಚೈತ್ರಾ ಕೊಟೂರು – “ಮಾ ಪ್ರಜ್ಞಾ ಭಾರತಿ”ಯಾದ ನಟಿ..!  

‘ಇಂದ್ರಜಾಲ’ಕ್ಕೆ ಸಿಲುಕಿರುವ ‘ದಾಸ’ – ಲಂಕೇಶ್ ಗೆ ಎದುರಾಯ್ತು ಮತ್ತೊಂದು ಸಂಕಷ್ಟ

ದಿವ್ಯಾ ಉರುಡುಗ ಜೊತೆ ಮಾತು ಬಿಟ್ಟ ಅರವಿಂದ್ – ಪ್ರಣಯ ಪಕ್ಷಿಗಳ ನಡುವೆ ಮುನಿಸ್ಯಾಕೆ..?  

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd