ಎರಿಯೋಟಿಕ್ ವಿಡಿಯೋಗಳನ್ನು ನೀಲಿ ಚಿತ್ರಗಳ ಜೊತೆ ಸೇರಿಸಬೇಡಿ : ಅರೆಸ್ಟ್ ಆಗಿರುವ ರಾಜ್ ಕುಂದ್ರಾ ಬೆಂಬಲಕ್ಕೆ ಬಂದ ಮಾಡೆಲ್..!
ನವದೆಹಲಿ : ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ , ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಇಂದು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಅಶ್ಲೀಲ ವಿಡಿಯೋ ಚಿತ್ರೀಕರಣ ಮತ್ತು ಮಾರಾಟ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಾಜ್ ಕುಂದ್ರಾ ಅರೆಸ್ಟ್ ಮಾಡಲಾಗಿದೆ. ಅಲ್ಲದೇ ಪ್ರಕರಣದ ಮುಖ್ಯ ಆರೋಪಿ ರಾಜ್ ಕುಂದ್ರಾ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಅಲ್ಲದೇ ಜುಲೈ 23ರರವರೆಗೆ ಪೊಲೀಸ್ ಕಸ್ಟಡಿ ಸೇರಿದ್ದಾರೆ… ಇದೀಗ ರಾಜ್ ಕುಂದ್ರಾ ಬೆಂಬಲಕ್ಕೆ ಬಂದಿರುವ ಮಾಡೆಲ್ ಗೆಹನಾ ವಸಿಷ್ಠ, ರಾಜ್ ಕುಂದ್ರಾ ಪೋರ್ನ್ ವಿಡಿಯೋಗಳನ್ನು ತಯಾರು ಮಾಡುತ್ತಿರಲಿಲ್ಲ ಎಂದು ಟ್ವಿಟ್ಟರ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗೆಹನಾ , ಪೋರ್ನ್ ವಿಡಿಯೋಗಳ ಜೊತೆ ಎರಿಯೋಟಿಕ ವಿಡಿಯೋಗಳನ್ನು ಸೇರಿಸಬೇಡಿ. ಆ ವಿಡಿಯೋಗಳೇ ಬೇರೆ ಈ ರೀತಿಯ ವಿಡಿಯೋಗಳೇ ಬೇರೆ. ಇದನ್ನು ಪೊಲೀಸರು ತಪ್ಪು ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ರಾಜ್ ಕುಂದ್ರಾ ಅವರು ಈ ಹಿಂದೆ ಮಾಡಿದ್ದ ಟ್ವೀಟ್ ಈಗ ಭಾರೀ ವೈರಲ್ ಆಗ್ತಿದೆ. ನೀಲಿ ಚಿತ್ರದ ಬಗ್ಗೆ ರಾಜ್ ಕುಂದ್ರಾ ಅವರು 2012ರಲ್ಲಿ ಮಾಡಿದ್ದ ಸುಮಾರು 8 – 9 ವರ್ಷಗಳ ಹಳೆಯ ಟ್ವೀಟ್ ಗಳು ಈಗ ವೈರಲ್ ಆಗುತ್ತಿವೆ. ವೇಶ್ಯಾವಾಟಿಕೆ ಮತ್ತು ಟ್ವೀಟ್ ನಲ್ಲಿ ‘ಕ್ಯಾಮೆರಾದಲ್ಲಿ ಸೆರೆಯಾದ ಸೆಕ್ಸ್ ನೋಡಲು ಹಣ ತೆರುವುದು ಕಾನೂನುಬದ್ಧ ಆಗಿರುವಾಗ ವೇಶ್ಯಾವಾಟಿಕೆ ಏಕೆ ಕಾನೂನು ಬಾಹಿರ’ ಎಂದು ರಾಜ್ ಕುಂದ್ರಾ ಪ್ರಶ್ನೆ ಮಾಡಿದ್ದರು. ಆ ಮೂಲಕ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದೇ ವರ್ಷ ಮಾಡಿದ್ದ ಮತ್ತೊಂದು ಟ್ವೀಟ್ ನಲ್ಲಿ ನಟರು ಕ್ರಿಕೆಟ್ ಆಡುತ್ತಿದ್ದಾರೆ. ಕ್ರಿಕೆಟಿಗರು ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣಿಗಳು ಪೋರ್ನ್ ವಿಡಿಯೋಗಳನ್ನು ನೋಡುತ್ತಿದ್ದಾರೆ.
ಪೋರ್ನ್ ಸ್ಟಾರ್ ಗಳು ನಟರಾಗುತ್ತಿದ್ದಾರೆ ಎಂದಿದ್ದರು. ಇದೀಗ ರಾಜ್ ಬಂಧನದ ಬೆನ್ನಲ್ಲೇ ಹಳೆಯ ಟ್ವೀಟ್ ಗಳು ವೈರಲ್ ಆಗ್ತಿವೆ.. ಇನ್ನೂ ಈ ಪ್ರಕರಣದ ಬಗ್ಗೆ ಹಲವು ತಿಂಗಳುಗಳಿಂದ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದರು.. ಮಾಹಿತಿಗಳನ್ನೆಲ್ಲಾ ಕಲೆ ಹಾಕಿದ ನಂತರ ಈ ಪ್ರಕರಣದ ಮುಖ್ಯ ಆರೋಪಿ ರಾಜ್ ಕುಂದ್ರಾ ಎಂಬುದು ಗೊತ್ತಾಗಿದೆ.. ವರ್ಷದ ಫೆಬ್ರವರಿಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು, ತನಿಖೆ ವೇಳೆ ಪ್ರಕರಣದ ಮುಖ್ಯ ಆರೋಪಿ ರಾಜ್ ಕುಂದ್ರಾ ಎಂದು ತಿಳಿದುಬಂದಿದ್ದು ಅವರ ವಿರುದ್ಧ ಪ್ರಾಥಮಿಕ ಸಾಕ್ಷ್ಯಗಳನ್ನು ಒಟ್ಟುಗೂಡಿಸಿಕೊಂಡ ಬಳಿಕ ಅವರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ರಾಜ್ ಕುಂದ್ರಾ ಉದ್ಯಮಿ ಆಗಿದ್ದು, ಐಪಿಎಲ್ ತಂಡ ರಾಜಸ್ಥಾನ ರಾಯಲ್ಸ್ನ ಮಾಲೀಕರು ಸಹ ಆಗಿದ್ದಾರೆ.
2008ರ ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣದ ಆರೋಪಿ ರಾಣಾ ಭಾರತಕ್ಕೆ ಹಸ್ತಾಂತರ: ಅಮೆರಿಕಾ
ಕೊರೊನಾ ತವರಲ್ಲಿ ಹೊಸ ರೈಲು – ಗಂಟೆಗೆ 600 ಕಿ.ಮೀ ವೇಗದಲ್ಲಿ ಸಾಗುವ ಟ್ರೈನ್..!
ಮತ್ತೆ ಭಾರತಕ್ಕೆ ರೀ ಎಂಟ್ರಿ ಕೊಡಲಿದ್ಯಾ ಟಿಕ್ ಟಾಕ್..?