ಮದುವೆ ಫೇಲ್ , ಅಧ್ಯಾತ್ಮದ ಹಾದಿಯಲ್ಲಿ ಚೈತ್ರಾ ಕೊಟೂರು – “ಮಾ ಪ್ರಜ್ಞಾ ಭಾರತಿ”ಯಾದ ನಟಿ..!  

1 min read

ಮದುವೆ ಫೇಲ್ , ಅಧ್ಯಾತ್ಮದ ಹಾದಿಯಲ್ಲಿ ಚೈತ್ರಾ ಕೊಟೂರು – “ಮಾ ಪ್ರಜ್ಞಾ ಭಾರತಿ”ಯಾದ ನಟಿ..!

ಬಿಗ್ ಬಾಸ್  ಮಾಜಿ ಸ್ಪರ್ಧಿ ಚೈತ್ರಾ ಕೊಟ್ಟೂರು ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಲ್ಲಿದ್ದ ಹೆಸರು.. ಸದ್ದಿಲ್ಲದೇ ಮದುವೆಯಾಗಿದ್ದ ಚೈತ್ರಾ ಅಂದು ಸಂಜೆಯೇ ಗಂಡನಿಂದ ದೂರಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆತ್ಮಹತ್ಯೆಗೂ ಯತ್ನಿಸಿದ್ದರು.. ಆ ನಂತರ ಮತ್ತೆ ಬದಲಾಗಿದ್ದೇನೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು.. ಇದೀಗ ಚೈತ್ರ ಕೊಟೂರು ಆದ್ಯಾತ್ಮದ ದಾರಿ ಹಿಡಿದಿದ್ದು, ತಮ್ಮ ಹೆಸರನ್ನೂ ಕೂಡ ಬದಲಾಯಿಸಿಕೊಂಡಿದ್ದಾರೆ. ಓಶೊ ಧ್ಯಾನ ಮಂದಿರ ಸೇರಿರುವ ಚೈತ್ರಾ ಕೊಟೂರುಗೆ ಮಾ ಪ್ರಜ್ಞಾ ಭಾರತಿ ಎಂದು ಗುರುಗಳು ಮರು ನಾಮಕರಣ ಮಾಡಿದ್ದಾರೆ.chaithra kotturu

ದಿವ್ಯಾ ಉರುಡುಗ ಜೊತೆ ಮಾತು ಬಿಟ್ಟ ಅರವಿಂದ್ – ಪ್ರಣಯ ಪಕ್ಷಿಗಳ ನಡುವೆ ಮುನಿಸ್ಯಾಕೆ..?  

ಓಶೊ ಧ್ಯಾನ ಮಂದಿರದ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರು ಚೈತ್ರಾ ಕೊಟೂರುಗೆ ಮಾ ಪ್ರಜ್ಞಾ ಭಾರತಿ ಎಂದು ನಾಮಕರಣ ಮಾಡಿದ್ದಾರೆ. ಈ ವಿಚಾರವನ್ನು ಚೈತ್ರಾ ಕೊಟೂರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಬೆಳಗಾವಿಯ ಪಿಂಪಿಲಿಯಲ್ಲಿನ ಓಶೊ ಧ್ಯಾನ ಶಿಬಿರದಲ್ಲಿ ಚೈತ್ರಾ ಪಾಲ್ಗೊಂಡಿದ್ದಾರೆ. ಚೈತ್ರಾರ ಈ ಅಧ್ಯಾತ್ಮಿಕ ಪಯಣಕ್ಕೆ ಹಲವರು ಶುಭ ಕೋರಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ಚೈತ್ರಾ ಕೊಟೂರು ಅವರು ನಾಗಾರ್ಜುನ ಎಂಬುವವರ ಜೊತೆಗೆ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಆದರೆ ವಿವಾಹವಾದ ದಿನವೇ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದ್ದರು. ಬಲವಂತದಿಂದ ಮದುವೆ ಮಾಡಲಾಗಿದೆ ಎಂದು ನಾಗಾರ್ಜು ದೂರು ನೀಡಿದ್ದರು. ನಾಗಾರ್ಜುನ ಮನೆಯವರು ಸಹ ಚೈತ್ರಾ ವಿರುದ್ಧ ಆರೋಪಗಳನ್ನು ಮಾಡಿದ್ದರು. ಕೆಲವೇ ದಿನಗಳಲ್ಲಿ ಚೈತ್ರಾ ಕೊಟೂರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇಷ್ಟೆಲ್ಲಾ ಹೈ ಡ್ರಾಮಾಗಳ ಬಳಿಕ ಇದೀಗ ಕೊಟ್ಟೂರು ಆದ್ಯಾತ್ಮದ ದಾರಿ ಹಿಡಿದಿದ್ದಾರೆ.

“ ಭಾರತ ರತ್ನ ನಮ್ಮ ತಂದೆಯ ಕಾಲಿನ ಧೂಳಿಗೂ ಸಮವಿಲ್ಲ , ಎ.ಆರ್.ರೆಹಮಾನ್ ಯಾರೆಂದು ಗೊತ್ತಿಲ್ಲ”

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd