ಆರ್ ಸಿಬಿ ಗೆಲುವಿಗಾಗಿ ರಾಯಚೂರಿನಲ್ಲಿ ರುದ್ರಾಭಿಷೇಕ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗಾಗಿ RCB ಅಭಿಮಾನಿಗಳು ರುದ್ರಾಭಿಷೇಕ ಮಾಡಿಸುವ ಮೂಲಕ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇಂದಿನ ಐಪಿಎಲ್ ಎನ್ ಕೌಂಟರ್ ನಲ್ಲಿ ರಾಯಲ್ ಚಾಲೆಂಜರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ ತಂಡಗಳು ಕಾದಾಟ ನಡೆಸಲಿವೆ. ಪ್ಲೇ ಆಪ್ ದೃಷ್ಟಿಯಿಂದಾಗಿ ಈ ಮ್ಯಾಚ್ ಉಭಯ ತಂಡಗಳಿಗೂ ಮಹತ್ವದ್ದಾಗಿದೆ.
ಇಂದಿನ ಪಂದ್ಯ ಗೆದ್ದ ತಂಡ ಪ್ಲೇ ಆಪ್ ಗೆ ಸುಲಭವಾಗಿ ಎಂಟ್ರಿಕೊಡಲಿದೆ. ಸೋತ ತಂಡ ನಾಳೆಯ ಮುಂಬೈ-ಹೈದರಾಬಾದ್ ಮ್ಯಾಚ್ ನೊಂದಿಗೆ ರನ್ ಧಾರಣೆಯ ಲೆಕ್ಕಚಾರಕ್ಕೆ ಹೋಗಬೇಕಾಗುತ್ತದೆ.
ಹೀಗಾಗಿ ಟೂರ್ನಿಯ 55ನೇ ಪಂದ್ಯ ಸಾಕಷ್ಟು ಕೂತುಹಲಕ್ಕೆ ಕಾರಣವಾಗಿದೆ.
ಇತ್ತ ಅಭಿಮಾನಿಗಳ ವಿಚಾರಕ್ಕೆ ಬಂದರೆ ಇಂದಿನ ಪಂದ್ಯ ಕುತೂಹಲ, ರೋಚಕ, ಜಿದ್ದಾಜಿದ್ದಿನ ಹಾಗೂ ಆತ್ಮಾಭಿಮಾನದ ಪಂದ್ಯವಾಗಿದೆ.
ಈ ಮಹತ್ವದ ಪಂದ್ಯ ಇಂದು (ಸೋಮವಾರ) ಸಂಜೆ 7.30ಕ್ಕೆ ಆರಂಭವಾಗಲಿದ್ದು, ಕೊಹ್ಲಿ ಪಡೆಯ ಗೆಲುವಿಗಾಗಿ ಅಭಿಮಾನಿಗಳು ರುದ್ರಾಭಿಷೇಕ ಮಾಡಿಸುವ ಮೂಲಕ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಶ್ರೀ ಅಮರೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ ನೆರವೇರಿಸಿದ್ದಾರೆ.
ಇದನ್ನೂ ಓದಿ : ಐಪಿಎಲ್ 2020- ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್… ಗೆಲುವು ಯಾರಿಗೆ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರ್‍ಸಿಬಿ ಗೆಲುವಿಗಾಗಿ ಅಭಿಮಾನಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿ ರುದ್ರಾಭಿಷೆಕದ ರಶೀದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯನ್ ಲೀಗ್ 2020ರ ಲೀಗ್ ಹಂತದ ಕೊನೆ ಪಂದ್ಯ ಆಡಲು ಸಜ್ಜಾಗಿರುವ ಆರ್‍ಸಿಬಿ ತಂಡದ ಪರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ಇಂದಿನ ಪಂದ್ಯ ಹೆಚ್ಚು ಪಡೆದುಕೊಂಡಿದೆ. ಗೆದ್ದವರು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಳ್ಳಲಿದ್ದಾರೆ.
ಅದೇ ರೀತಿ ಸೋತ ತಂಡ ಉತ್ತಮ ರನ್ ಧಾರಣೆಯನ್ನು ಹೊಂದಿರಬೇಕು. ಒಂದು ವೇಳೆ ಕಡಿಮೆ ರನ್ ಧಾರಣೆಯೊಂದಿಗೆ ಸೋತ್ರೆ ಪ್ಲೇ ಆಫ್ ಕನಸು ಭಗ್ನಗೊಳ್ಳಲಿದೆ.
ಯಾಕಂದ್ರೆ ಸನ್ ರೈಸರ್ಸ್ ಹೈದ್ರಬಾದ್ ತಂಡ ಮುಂಬೈ ವಿರುದ್ಧ ಗೆದ್ರೆ ಎಲ್ಲವೂ ಉಲ್ಟಾಪಲ್ಟಾವಾಗಲಿದೆ. ಅದಕ್ಕಾಗಿ ಕಾಯಬೇಕು.
ಆದ್ರೆ ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾಯುವಷ್ಟು ತಾಳ್ಮೆಯಿಲ್ಲ. ಗೆದ್ದು ತಮ್ಮ ಸ್ಥಾನವನ್ನು ಖಚಿತ ಪಡಿಸಿಕೊಳ್ಳಲು ಉಭಯ ತಂಡಗಳು ಹೋರಾಟ ನಡೆಸಲಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel